ಪೆಗಾಸಸ್ ಗೂಢಚರ್ಯೆ: ಸುಪ್ರೀಮ್ ಕೋರ್ಟ್ ಮೊರೆ ಹೋದ ಎಡಿಟರ್ಸ್ ಗಿಲ್ಡ್

0
241

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೆಗಾಸಸ್ ಗೂಢಚರ್ಯೆ ಸಾಫ್ಟ್‌ವೇರ್ ಉಪಯೋಗಿಸಿ ಮಾಧ್ಯಮ ಮತ್ತು ರಾಜಕಾರಣಿಗಳ ಸಹಿತ ನೂರಾರು ಮಂದಿಯ ಫೋನ್ ಸೋರಿಕೆ ನಡೆಸಿದ ಘಟನೆಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮಾಧ್ಯಮಗಳ ಒಕ್ಕೂಟವಾದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ.

ಫೋನ್ ಸೋರಿಕೆಯ ತನಿಖೆಗೆ ವಿಶೇಷ ತಂಡವನ್ನು ರಚಿಸಬೇಕು. ಅದರಿಂದ ತನಿಖೆ ನಡೆಸಬೇಕೆಂದು ಗಿಲ್ಡ್ ಆಗ್ರಹಿಸಿತು. ಬೇಹುಗಾರಿಕೆ ಸಾಫ್ಟ್‌ವೇರ್ ಒಪ್ಪಂದಕ್ಕೆ ಸಂಬಂಧಿಸಿ ವಿವರಗಳನ್ನು ಮತ್ತು ಯಾರನ್ನೆಲ್ಲ ಗುರಿಮಾಡಲಾಗಿದೆ ಎಂಬ ಪಟ್ಟಿಯನ್ನು ಲಭ್ಯಗೊಳಸಲು ಸುಪ್ರೀಂಕೋರ್ಟು ಸರಕಾರಕ್ಕೆ ಹೇಳಬೇಕೆಂದು ಅರ್ಜಿಯಲ್ಲಿ ಗಿಲ್ಡ್ ಆಗ್ರಹಿಸಿದೆ. ಅರ್ಜಿಯಲ್ಲಿ ಸುಪ್ರೀಂ ಕೊರ್ಟು ಗುರುವಾರ ವಿಚಾರಣೆ ನಡೆಸಲಿದೆ.

ಮಾಧ್ಯಮ ಸ್ವಾತಂತ್ರ್ಯ ಉಳಿಯಬೇಕಾದರೆ ಸರಕಾರ ಅದರ ಏಜೆನ್ಸಿಗಳು ಹಸ್ತಕ್ಷೇಪ ಮಾಡಬಾರದು. ಸರಕಾರ ತಮ್ಮ ಅಧಿಕಾರದ ವ್ಯಾಪ್ತಿಯನ್ನು ಉಲ್ಲಂಘಿಸುತ್ತಿದೆಯೇ ಎಂದು ಮತ್ತು ಜನರ ಮೂಲಭೂತ ಹಕ್ಕಲು ಸಂರಕ್ಷಿಸಲು ಏನು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಯುವ ಹಕ್ಕು ದೇಶದ ಪ್ರಜೆಗಳಿಗಿವೆ. ಪಾರ್ಲಿಮೆಂಟಿನಲ್ಲಿ ಇದಕ್ಕೆ ಅಡೆತಡೆಯಾದಂತೆ ಕೋರ್ಟು ನೋಡಿಕೊಳ್ಳಬೇಕೆಂದು ರಿಟ್ ಅರ್ಜಿಯಲ್ಲಿ ಎಡಿಟರ್ಸ್ ಗಿಲ್ಡ್ ತಿಳಿಸಿದೆ.

ಈಗಾಗಲೇ ಐವರು ಪತ್ರಕರ್ತರು ಪೆಗಸಸ್ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ. ಪರಂಜೋಯ್ ಗುಹಾ ಠಾಕುರ್‍ತಾ, ಪ್ರೇಮ್ ಶಂಕರ್ ಝಾ, ಎಸ್‍ಎನ್‍ಎಂ ಅಬ್ದಿ, ರೂಪೇಶ್ ಕುಮಾರ್ ಸಿಂಗ್, ಇಪ್ಸ ಶತಾಕ್ಸಿ ಕೊರ್ಟಿನಲ್ಲಿ ಅರ್ಜಿ ದಾಖಲಿಸಿದ್ದಾರೆ.

ಪೆಗಾಸಸ್ ಬೇಹುಗಾರಿಕೆ ಸುಪ್ರೀಂಕೋರ್ಟಿನ ಜಡ್ಜ್ ಮೇಲ್ನೋಟದಲ್ಲಿ ತನಿಖೆಗೆ ಆಗ್ರಹಿಸಿ ಹಿರಿಯ ಪತ್ರಕರ್ತ ಎನ್.ರಾಮ್, ಶಶಿಕುಮಾರ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲದೆ ಮೊಹರಲಾಲ್ ಶರ್ಮ ಮತ್ತು ಕೇರಳದಿಂದ ಸಿಪಿಎಂ ಸಂಸಧ ಜಾನ್ ಬ್ರಿಟ್ಟಾಸ್ ಸುಪ್ರೀಂ ಕೋರ್ಟಿನಲ್ಲಿ ಪೆಗಾಸಸ್ ವಿಚಾರಣೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾರೆ.