ಒಂದು ವರ್ಷದ ಬಳಿಕ ಪುನಃ ವುಹಾನ್‍ನಲ್ಲಿ ಕೊರೋನ

0
4186

ಸನ್ಮಾರ್ಗ ವಾರ್ತೆ

ಬೀಜಿಂಗ್: ಕೊರೋನ ಮಹಾಮಾರಿ ಆರಂಭವಾದ ಚೀನದ ವುಹಾನ್ ನಗರದಲ್ಲಿ ಒಂದು ವರ್ಷದ ಬಳಿಕ ಪುನಃ ಕೊರೋನ ತಲೆಯೆತ್ತಿದೆ. ಆದುದರಿಂದ ನಗರದಲ್ಲಿರುವ ಎಲ್ಲರನ್ನೂ ಚೀನ ಪ್ರಾದೇಶಿಕ ಸರಕಾರ ಪರೀಕ್ಷೆ ನಡೆಸಲು ತೀರ್ಮಾನಿಸಿತು. ಏಳು ಮಂದಿಯಲ್ಲಿ ಇತ್ತೀಚೆಗೆ ಕೊರೋನ ಕಂಡು ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ವಾಸಿಸುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಲು ನಿರ್ಧರಿಸಲಾಗಿದೆ.

ಒಂದೂವರೆ ವರ್ಷದ ಮೊದಲು ವುಹಾನ್‍ನಿನಲ್ಲಿ ಮೊದಲ ಬಾರಿ ಕೊರೋನ ವೈರಸ್ ಬಾಧೆ ಮರಳಿತ್ತು. ಮಾಂಸದ ಮಾರ್ಕೆಟಿನಲ್ಲಿ ಮೊದಲು ಕೊರೋನ ಪತ್ತೆಯಾಗಿತ್ತು. ಆದರೆ, ವುಹಾನ್ ಲ್ಯಾಬ್‍ನಿಂದ ವೈರಸ್ ಸೋರಿಕೆಯಾಗಿದೆ ಎಂದು ಅಮೆರಿಕ ಆರೋಪಿಸುತ್ತಿದೆ.