ಆಗಸ್ಟ್ 28ರಂದು ಯುಎಇ ಮಹಿಳಾ ದಿನಾಚರಣೆ: ಮಹಿಳಾ ಸಬಲೀಕರಣ ವರದಿ ಬಿಡುಗಡೆ

0
238

ಸನ್ಮಾರ್ಗ ವಾರ್ತೆ

1960ರಲ್ಲಿ ಯುಎಇ ಪೊಲೀಸ್ ಇಲಾಖೆಗೆ ಮೊದಲ ಬಾರಿ ಓರ್ವ ಮಹಿಳೆ ಆಯ್ಕೆಯಾದರು. ಇದಾಗಿ ಈಗ ಆರು ದಶಕಗಳೇ ಕಳೆದಿವೆ. ಈಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದಾರೆ. ಮಾತ್ರವಲ್ಲ ಕೇವಲ ಮಹಿಳೆಯರೇ ಇರುವ ಕ್ಷೇತ್ರಗಳೂ ಯುಎಇ ಯಲ್ಲಿವೆ. ಆಗಸ್ಟ್ 28 ಆದಿತ್ಯವಾರದಂದು ಯುಎಇ ಮಹಿಳಾ ದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣದ ಸಾಧನೆಗಳ ಪಟ್ಟಿ ಬಿಡುಗಡೆಯಾಗಿದೆ.

1967ರಲ್ಲಿ ಪೊಲೀಸ್ ಇಲಾಖೆಯಲ್ಲಿ ಮೊದಲ ವನಿತಾ ಬ್ಯಾಚ್ ಪ್ರಾರಂಭವಾಯಿತು. ಈಗ ಎಲ್ಲಾ ಡಿಪಾರ್ಟ್ಮೆಂಟ್‌ಗಳಲ್ಲೂ ಮಹಿಳೆಯರು ನಿಯೋಜಿತರಾಗಿದ್ದಾರೆ. ಮಹಿಳೆಯರಿಗಾಗಿ ವಿಶೇಷ ಸವಲತ್ತುಗಳನ್ನು ನೀಡಲಾಗಿದ್ದು, ಸೇನೆ, ಪೊಲೀಸ್ ಇಲಾಖೆ ಸೇರುವಂತಹ ಮಹಿಳೆಯರಿಗೆ ಸ್ಕಾಲರ್ಶಿಪ್‌ಗಳನ್ನು ನೀಡಲಾಗುತ್ತಿದೆ.

ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಸುರಕ್ಷಿತತೆಗಾಗಿ ಪ್ರತ್ಯೇಕ ಮಹಿಳಾ ಕೌನ್ಸಿಲಿಂಗ್ ವಿಂಗ್ ಅನ್ನು ಕೂಡ ರಚಿಸಲಾಗಿದೆ. ಕ್ರಿಮಿನಲ್ ಸೈನ್ಸ್, ಬಯಾಲೋಜಿಕಲ್ ಸೈನ್ಸ್, ಕಮ್ಯುನಿಕೇಶನ್, ಲಾ ಅಂಡ್ ಪೊಲಿಟಿಕ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಿಸ್ಟಮ್ ಮುಂತಾದುವುಗಳ ಸಹಿತ 73 ಪ್ರಮುಖ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿದ್ದಾರೆ.