ಸನ್ಮಾರ್ಗ ವಾರ್ತೆ
ಯುರೋಪ್ ಫುಟ್ಬಾಲ್ ಲೀಗ್ನಲ್ಲಿ ಇಸ್ರೇಲ್ ಅಭಿಮಾನಿಗಳನ್ನು ಸ್ಟೇಡಿಯಂಗೆ ಪ್ರವೇಶ ಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಪಂದ್ಯದಲ್ಲಿ ಅಭಿಮಾನಿಗಳನ್ನು ಸ್ಟೇಡಿಯಂನಿಂದ ಹೊರಗಿಡಲಾಗುವುದು. ಸುರಕ್ಷಿತತೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಮಕ್ಕಾಬಿ ಟೆಲ್ ಅವಿವ್ ಕ್ಲಬ್ಬಿನ ಅಭಿಮಾನಿಗಳಿಗೆ ಈ ನಿಷೇಧ ವಿಧಿಸಲಾಗಿದೆ.
ಈ ಪಂದ್ಯಕ್ಕಿಂತ ಮುಂಚಿತವಾಗಿಯೇ ಸುರಕ್ಷಿತತೆಯ ಬಗ್ಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹ್ಯಾಸ್ಟನ್ವಿಲ್ಲ ಮತ್ತು ಇಸ್ರೇಲ್ ಕ್ಲಬ್ನ ನಡುವೆ ನಡೆಯುವ ಈ ಫುಟ್ಬಾಲ್ ಪಂದ್ಯಾಟದ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ.
ಕಳೆದ ವರ್ಷ ಇಸ್ರೇಲ್ ಕ್ಲಬ್ನ ಫುಟ್ಬಾಲ್ ಪಂದ್ಯದ ವೇಳೆ ಘರ್ಷಣೆ ಉಂಟಾಗಿತ್ತು. ಈ ಬಾರಿಯೂ ಘರ್ಷಣೆ ನಡೆಯಬಹುದು ಅನ್ನುವ ಗುಪ್ತಚರ ಮಾಹಿತಿ ಆಧಾರದಲ್ಲಿ ಇಸ್ರೇಲ್ ಅಭಿಮಾನಿಗಳನ್ನೇ ಮೈದಾನದಿಂದ ಹೊರಗಿಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷದ ಪಂದ್ಯದ ವೇಳೆ ಫೆಲಸ್ತೀನ್ ಬೆಂಬಲಿಗರು ಮತ್ತು ಇಸ್ರೇಲ್ನ ಅಭಿಮಾನಿಗಳ ನಡುವೆ ಘರ್ಷಣೆ ಉಂಟಾಗಿತ್ತು. ಆ ಬಳಿಕ ಪೊಲೀಸರು ಅನೇಕರನ್ನು ಬಂಧಿಸಿದ್ದರು. ಇಸ್ರೇಲ್ ಪರ ಅಭಿಮಾನಿಗಳು ಜನಾಂಗೀಯ ನಿಂದನೆಯ ಘೋಷಣೆಗಳನ್ನು ಕೂಗುವ ಮೂಲಕ ಈ ಘರ್ಷಣೆಗೆ ಕಿಚ್ಚು ಹಚ್ಚಿದ್ದರು ಎಂದು ಹೇಳಲಾಗಿತ್ತು.












