ಅಧಿಕಾರಕ್ಕೆ ಬಂದರೆ ಭಾರತದ ವಶದಲ್ಲಿರುವ ಕಾಲಪಾನಿ ಸಹಿತ ಭೂಭಾಗಗಳನ್ನು ಮರಳಿ ವಶಕ್ಕೆ ಪಡೆಯುತ್ತೇವೆ: ನೇಪಾಳ ಮಾಜಿ ಪ್ರಧಾನಿ ಓಲಿ

0
394

ಸನ್ಮಾರ್ಗ ವಾರ್ತೆ

ಕಾಟ್ಮಂಡು: ತನ್ನ ಪಾರ್ಟಿ ಅಧಿಕಾರಕ್ಕೆ ಬಂದರೆ ಗಡಿ ಪ್ರದೇಶಗಳಾದ ಕಾಲಪಾನಿ, ಲಿಂಪಿಯಾಧುರ, ಲಿಪುಲೇಖ ಎಂಬ ಪ್ರದೇಶಗಳನ್ನು ಮರಳಿ ವಶಪಡಿಸುವುದಾಗಿ ಸಿಪಿಎನ್‍ಯುಎಂಎಲ್ ನಾಯಕ ಮಾಜಿ ಪ್ರಧಾನಿ ಕೆ.ಪಿ ಶರ್ಮಾ ಓಲಿ ಹೇಳಿದ್ದಾರೆ. ಭಾರತದೊಂದಿಗೆ ನಿರಂತರ ಚರ್ಚೆ ನಡೆಸಿ ಹೀಗೆ ಮಾಡುವುದಾಗಿ ನೇಪಾಳದ ಕಮುನಿಸ್ಟ್ ಪಾರ್ಟಿ ಲೆನಿನಿಸ್ಟ್ ಹತ್ತನೇ ಸಾಮಾನ್ಯ ಸಮ್ಮೇಳನದಲ್ಲಿ ಹೇಳಿದ್ದಾರೆ.

ಉತ್ತರಾಖಂಡದ ಪಿತಾರಾಗಡ್ ಜಿಲ್ಲೆಯಲ್ಲಿ ಕಾಲಪಾನಿ ಇದೆ ಎಂದು ಭಾರತ ಹೇಳುತ್ತಿದೆ. ಕಾಲಾಪಾನಿ ಸದುರ್‍ಗಂಜ್‍ನ ದಾರಚುಲ ಜಿಲ್ಲೆಯ ಭಾಗವದೆಂದು ನೇಪಾಳ ಹೇಳುತ್ತಿದೆ. ಭಾರತದ ಲಿಪಲೇಖ, ಕಾಲಾಪಾನಿ, ಲಿಂಪಿಧುರ ಸೇರಿಸಿಕೊಂಡು ನೇಪಾಳವು ಹೊಸ ಭೂಪಟವನ್ನು ಈ ಹಿಂದೆ ಪ್ರಕಟಿಸಿತ್ತು. ಇದನ್ನು ನೇಪಾಳ ಪಾರ್ಲಿಮೆಂಟು ಆಂಗೀಕರಿಸಿತ್ತು. ಭಾರತ ನೇಪಾಳದ ಕ್ರಮವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿತ್ತಲ್ಲದೇ ಇದು ನೇಪಾಳದ ಏಕಪಕ್ಷೀಯ ಕ್ರಮವೆಂದು ಭಾರತ ಹೇಳಿತ್ತು.