ಕೇಂದ್ರ ಸರಕಾರಕ್ಕೆ ನ. 26ರವರೆಗೆ ಸಮಯ ಇದೆ: ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ

0
444

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನವೆಂಬರ್ 26ರ ವರೆಗೆ ಸಮಯ ಕೊಡುತ್ತೇವೆ. ಕೃಷಿ ಕಾನೂನು ಹಿಂಪಡೆಯದಿದ್ದರೆ ದಿಲ್ಲಿ ಗಡಿಯಲ್ಲಿ ಭಾರೀ ಪ್ರತಿಭಟನೆ ನಡೆಯಲಿದೆ ಎಂದು ಭಾರತ್ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ರೈತರ ಹೋರಾಟ ಆರಂಭವಾಗಿ ಒಂದು ವರ್ಷ ಆಗುತ್ತಿದ್ದು ಈ ಸಂದರ್ಭದಲ್ಲಿ ಟಿಕಾಯತ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನವೆಂಬರ್ 26ರವರೆಗೆ ಕೇಂದ್ರ ಸರಕಾರಕ್ಕೆ ಸಮಯ ಇದೆ. ನವೆಂಬರ್ 27ರಿಂದ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿ ಗಡಿಗಳಲ್ಲಿ ಗ್ರಾಮಗಳಿಂದ ರೈತರು ಅವರ ಟ್ರಾಕ್ಟರ್ ಗಳನ್ನು ತೆಗೆದುಕೊಂಡು ಬಂದು ಸೇರುತ್ತಾರೆ. ಪ್ರತಿಭಟನೆ ಹೆಚ್ಚು ಶಕ್ತಿ ಶಾಲಿಯಾಗಿದೆ ಎಂದು ರಾಕೇಶ್ ಟಿಕಾಯತ್ ಟ್ವೀಟ್ ಮಾಡಿದರು.

ಎರಡು ದಿನಗಳಲ್ಲಿ ಕೇಂದ್ರ ಸರಕಾರಕ್ಕೆ ಟಿಕಾಯತ್ ನೀಡುತ್ತಿರುವ ಎರಡನೇ ಎಚ್ಚರಿಕೆ ಇದು. ದಿಲ್ಲಿ ಗಡಿಗಳಲ್ಲಿ ನಡೆಯುವ ಪ್ರತಿಭಟನೆಯನ್ನು ಬಲಪ್ರಯೋಗಿಸಿ ನಿವಾರಿಸಲು ನೋಡಿದರೆ ಅದರ ಪ್ರತಿಫಲನವನ್ನು ಎದುರಿಸಬೇಕಾದೀತೂ ಎಂದು ಅವರು ಈ ಹಿಂದೆ ಹೇಳಿದ್ದರು. ಹೀಗಾದರೆ ಪೊಲೀಸ್ ಠಾಣೆಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗಳು ಹೋರಾಟದ ಕೇಂದ್ರ ಆಗಲಿದೆ ಎಂದು ಟಿಕಾಯತ್ ಹೇಳಿದ್ದರು.

ದಿಲ್ಲಿ ಗಡಿಗಳಾದ ಟಿಕಿ, ಸಿಂಘು, ಗಾಝಿಪರ ಗಡಿಗಳಲ್ಲಿ ರೈತರು ಒಂದು ವರ್ಷಗಳಿಂದ ಕೇಂದ್ರ ಸರಕಾರದ ವಿವಾದದ ಮೂರು ಕೃಷಿ ಕಾನೂನುಗಳ ರದುಪಡಿಸಲು ಹೋರಟ ನಡೆಸುತ್ತಿದ್ದಾರೆ. ಜೊತೆಗೆ ಫಸಲಿಗೆ ಮೂಲ ಬೆಂಬಲ ಬೆಲೆ ಕಾನೂನು ಮೂಲಕ ದೃಢ ಪಡಿಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ರೈತರು ಮತ್ತು ಕೇಂದ್ರ ಸರಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ವಿಫಲವಾಗಿತ್ತು.