ಸನ್ಮಾರ್ಗ ವಾರ್ತೆ
ಲಕ್ನೊ: ಭಾರತದ ವಿರುದ್ಧ ತಾಲಿಬಾನ್ ತಿರುಗಿ ಬಿದ್ದರೆ ವಾಯು ದಾಳಿ ಮಾಡಿ ಸರ್ವ ನಾಶ ಮಾಡುತ್ತೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮುನ್ನೆಚ್ಚರಿಕೆ ನೀಡಿದರು. ಅಫ್ಘಾನಿಸ್ತಾನ, ಪಾಕಿಸ್ತಾನ ತಾಲಿಬಾನ್ನಿಂದ ತುಂಬ ಅಸ್ವಸ್ಥವಾಗಿದೆ ಎಂದು ಯೋಗಿ ಹೇಳಿದರು. ಲಕ್ನೊದಲ್ಲಿ ಸಾಮಾಜಿಕ್ ಪ್ರತಿನಿಧಿ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇಂದು ಬಲಶಾಲಿಯಾಗಿದೆ. ಯಾವ ದೇಶಕ್ಕೂ ಭಾರತದ ವಿರುದ್ಧ ದುರುಗುಟ್ಟಲು ಸಾಧ್ಯವಿಲ್ಲ. ಅಫ್ಘಾನಿಸ್ತಾನ, ಪಾಕಿಸ್ತಾನ ತಾಲಿಬಾನ್ನಿಂದ ಅಸ್ವಸ್ಥಗೊಂಡಿದೆ. ಆದರೆ, ಭಾರತದ ಹತ್ತಿರ ಬಂದರೆ ಒಂದು ವಾಯು ದಾಳಿ ಕಾದಿದೆ ಎಂದು ತಾಲಿಬಾನ್ಗೆ ಸ್ಪಷ್ಟವಾಗಿ ಗೊತ್ತಿದೆ ಎಂದು ಯೋಗಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ. ರಾಮ ಭಕ್ತರನ್ನು ಕೊಲೆ ಮಾಡಲು ನೇತೃತ್ವ ಕೊಟ್ಟವರು ಅವರೊಂದಿಗೆ ಕ್ಷಮೆ ಕೇಳಲು ತಯಾರಿದ್ದಾರೆಯೇ ಎಂದು ಸಮಾಜವಾದಿ ಪಾರ್ಟಿಯನ್ನು ಉದ್ಧರಿಸಿ ಅವರು ಪ್ರಶ್ನಿಸಿದರು.












