ರೈತ ಪ್ರತಿಭಟನೆ 51ನೇ ದಿನಕ್ಕೆ: ಇಂದು 9ನೇ ಚರ್ಚೆ- ನಿರೀಕ್ಷೆಗಳಿಲ್ಲ ಎಂದ ರೈತರು

0
513

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹಿಸಿ ರೈತ ಸಂಘಟನೆಗಳು ದಿಲ್ಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಇಂದಿಗೆ 51ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರಕಾರದೊಂದಿಗೆ ಜನವರಿ 15ಕ್ಕೆ ಒಂಬತ್ತನೆ ಚರ್ಚೆ ನಡೆಯಲಿದೆ ಎಂದು ರೈತರು ತಿಳಿಸಿದರು.

ಒಂಬತ್ತನೆ ಚರ್ಚೆಯಲ್ಲೂ ನಮಗೆ ನಿರೀಕ್ಷೆ ಇಲ್ಲ. ಹೋರಾಟ ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ತಿಳಿಸಿವೆ. ಕೃಷಿ ಕಾನೂನು ಹಿಂಪಡೆಯದೆ ಹೋರಾಟ ಕೊನೆಗೊಳಿಸುವುದಿಲ್ಲ ಎಂದು ರೈತರು ನಿಲುವು ವ್ಯಕ್ತಪಡಿಸಿದ್ದಾರೆ.

ಕಾನೂನು ಜಾರಿಗೆ ತಡೆ ನೀಡಿ ಕೃಷಿ ಕಾನೂನನ್ನು ಕುರಿತು ಅಧ್ಯಯನ ಮಾಡಲು ಸುಪ್ರೀಂ ಕೋರ್ಟು ಸಮಿತಿ ರಚಿಸಿದ ಬಳಿಕ ಸರಕಾರದೊಂದಿಗೆ ರೈತರ ಒಂಬತ್ತನೆ ಚರ್ಚೆ ಇಂದು ನಡೆಯಲಿದೆ. ದಿಲ್ಲಿಯ ಐದು ಗಡಿಗಳಲ್ಲಿ ರೈತರು ನೆರೆದಿದ್ದಾರೆ. ಶುಕ್ರವಾರದ ಚರ್ಚೆಯಲ್ಲಿ ಯಶಸ್ವಿಯಾಗಬಹುದೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು. ರೈತ ನಾಯಕರೊಂದಿಗೆ ಮುಕ್ತ ಮಾತುಕತೆಗೆ ಸಿದ್ಧ ಎಂದು ಅವರು ಹೇಳಿದರು.