ಮಮತಾರಿಗೆ ಇನ್ನೊಂದು ತಲೆನೋವು: ಸಂಸದೆ ಶತಾಬ್ದಿ ರಾಯ್ ಬಿಜೆಪಿ ಸೇರುವ ಸೂಚನೆ

0
527

ಸನ್ಮಾರ್ಗ ವಾರ್ತೆ

ಕೊಲ್ಕತಾ: ವಿಧಾನಸಭಾ ಚುನಾವಣೆ ನಿಕಟವಾಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್‍ನಿಂದ ಬಹಳಷ್ಟು ಮಂದಿ ಬಿಜೆಪಿ ಪಾಳಯಕ್ಕೆ ಸೇರ್ಪಡೆಯಾಗುವ ಸೂಚನೆ ಲಭ್ಯವಾಗಿದ್ದು ಚುನಾವಣೆಯ ಮೊದಲು 50 ತೃಣಮೂಲ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆಂದು ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. ಇದರ ಬೆನ್ನಿಗೆ ತೃಣಮೂಲ ಸಂಸದೆ ಶತಾಬ್ದಿ ರಾಯ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆಂಬ ವದಂತಿ ಹರಡುತ್ತಿದೆ.

ಏಳರಷ್ಟು ಬಿಜೆಪಿ ಸಂಸದರು ಪಾರ್ಟಿ ತೊರೆದು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಜ್ಯೋತಿಪ್ರಿಯ ಮಲಿಕ್ ಕೂಡ ಹೇಳಿದ್ದರು. ಬಿರ್‍ಭೂಮಿ ಕ್ಷೇತದ ಸಂಸದೆಯಾಗಿರುವ ಶತಾಬ್ದಿ ರಾಯ್ ಸಾಮಾಜಿಕ ಮಾಧ್ಯಮದ ಅಭಿಮಾನಿಗಳ ಪುಟದಲ್ಲಿ ಬರೆದಿರುವುದು ಈಗ ಮಮತಾ ಬ್ಯಾನರ್ಜಿಗೆ ತಲೆನೋವಾಗಿದೆ. ನಾನು ಒಂದು ತೀರ್ಮಾನ ತೆಗೆದುಕೊಳ್ಳುವುದಾದರೆ ಅದನ್ನು ಜನವರಿ ಹದಿನಾರರಂದು ಎರಡು ಗಂಟೆಗೆ ತಿಳಿಸುವೆ ಎಂದು ಬರೆದಿದ್ದಾರೆ.

ಈ ಹೊಸ ವರ್ಷ ಸಂಪೂರ್ಣ ನಿಮ್ಮ ಜೊತೆ ನಿಂತು ಸೇವೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ. 2009ರಿಂದ ನೀವು ನನಗೆ ಬೆಂಬಲ ನೀಡಿ ಲೋಕಸಭೆಗೆ ಕಳುಹಿಸಿದ್ದೀರಿ. ಇನ್ನೂ ನನ್ನ ಮೇಲೆ ನಿಮ್ಮ ಅಭಿಮಾನ ಇರಲಿದೆಯೆಂದು ನಿರೀಕ್ಷಿಸುತ್ತೇನೆ. ನಾನು ಲೋಕಸಭಾ ಸದಸ್ಯೆಯಾಗುವ ಮೊದಲೇ ಜನರು ನನ್ನಲ್ಲಿ ತುಂಬ ಅಭಿಮಾನ ಇರಿಸಿದ್ದರು. ನನ್ನ ಕರ್ತವ್ಯ ನಿರ್ವಹಿಸುವುದನ್ನು ಮುಂದುವರಿಸುವೆ. ನಾನು ತೀರ್ಮಾನ ತೆಗೆದುಕೊಳ್ಳುವುದಾದರೆ ಜನವರಿ ಹದಿನಾರಕ್ಕೆ ಎರಡು ಗಂಟೆಗೆ ನಿಮಗೆ ತಿಳಿಸುವೆ ಎಂದು ಶತಾಬ್ದಿ ರಾಯ್ ಹೆಸರಿನಲ್ಲಿ ಸಂದೇಶ ಹರಿದಾಡುತ್ತಿದೆ.

2009ರಿಂದ ಬಿರ್‍ಭೂಮಿ ಕ್ಷೇತ್ರವನ್ನು ಪ್ರತಿನಿಧಿಸುವ ಶತಾಬ್ದಿ ರಾಯ್ ಪಾರ್ಟಿ ತೊರೆದರೆ ಮಮತಾ ಬ್ಯಾನರ್ಜಿಗೆ ದೊಡ್ಡ ಹಿನ್ನಡೆಯಾಗಲಿದೆ. ಆದರೆ, ಅಭಿಮಾನಿ ಪುಟದ ಹೇಳಿಕೆ ಎಷ್ಟು ನಂಬಲರ್ಹ ಎಂಬ ಪ್ರಶ್ನೆಯೂ ಸೃಷ್ಟಿಯಾಗಿದೆ.