ಉಪವಾಸ: ಏನು ಎತ್ತ?

0
223

ಸನ್ಮಾರ್ಗ ವಾರ್ತೆ

✍️ಖಾಲಿದ್ ಮೂಸಾ ನದ್ವಿ

ಆಧ್ಯಾತ್ಮಿಕ ಬೆಳವಣಿಗೆಗೆ ವ್ಯವಸ್ಥಿತ ಮಾರ್ಗವನ್ನು ನಿಶ್ಚಯಿಸಿದ ಜೀವನ ದರ್ಶನವೇ ಇಸ್ಲಾಮ್ ಧರ್ಮವಾಗಿದೆ. ಅದರಲ್ಲಿ ಮುಖ್ಯವಾದುದು ಐದು ಹೊತ್ತಿನ ನಮಾಝ್ ಆಗಿದೆ. ದಿನ ನಿತ್ಯದ ಜೀವನದಲ್ಲಿ ನಮಾಝ್ ನಿರ್ವಹಣೆ ಮೂಲಕ ಶಿಸ್ತನ್ನು ಕ್ರಮೀಕರಿಸುವುದು. ಅದೊಂದು ನಿರಂತರ ಭೇಟಿಯೂ ಆಗಿದೆ. ರಬ್ (ರಕ್ಷಕ) ಮಾಲಿಕ್ (ಆಡಳಿತಾಧಿಕಾರಿ) ಇಲಾಹ್ (ಆರಾಧ್ಯ) ಆದ (ಅನ್ನಾಸ್ 1-3) ಅಲ್ಲಾಹನನ್ನು ಭೇಟಿಯಾಗಿ ಅವನ ಪ್ರಜೆ ನಡೆಸುವ ಖಾಸಗಿ ಮಾತುಕತೆಯೇ ನಮಾಝ್ ಆಗಿದೆ. ಅದು ಸರ್ವ ಲೋಕಗಳ ಪರಿ ಪಾಲಕನಿಗೆ (ರಬ್ಬುಲ್ ಆಲಮೀನ್) ಅರ್ಪಿಸುವ ಸ್ತುತಿ (ಹಮ್‌ದ್) ಮತ್ತು ಕೀರ್ತನೆಯೂ (ಅಲ್ ಫಾತಿಹಾ) ಹೌದು.

ಅಲ್ಲಾಹನು ತನ್ನನ್ನು ಸ್ಮರಿಸಲು ನಮಾಝ್ ಮಾಡಬೇಕೆಂದು ಪವಿತ್ರವಾದ ತುವಾ ಕಣಿವೆಯಲ್ಲಿ ಪ್ರವಾದಿ ಮೂಸಾ(ಅ)ರಿಗೆ ಆದೇಶಿಸುತ್ತಾನೆ. (ತ್ವಾಹಾ 14)

ಅಲ್ಲಾಹನ ಕುರಿತ ಸ್ಮರಣೆ ಜೀವನದ ಡಿಸೈನಿಂಗ್ ಆಗಿದೆ. ಎರಡು ವಿಧದಲ್ಲಿ ಪವಿತ್ರ ಕುರ್‌ಆನ್ ಆ ಡಿಸೈನಿಂಗ್ ಕುರಿತು ಹೇಳುತ್ತದೆ.

ಒಂದು, ಮನುಷ್ಯನು ನಿರಾಧಾರವಾದ ಪರಂಪರೆಗಳಿಂದ ಇಬಾದತ್ (ಆರಾಧನೆಗಳನ್ನು) ಗಳನ್ನು ಬಿಡಿಸಿ ದೇವ ಮಾರ್ಗದಲ್ಲಿ ನೆಲೆಯೂರಿಸು ಮತ್ತು ಆರ್ಥಿಕ ಶಿಷ್ಟಾಚಾರ ಹಾಗೂ ನೇರ ಮಾರ್ಗದ ಗಳಿಕೆಯನ್ನು ದೃಢಪಡಿಸುವ ನಮಾಝ್. (ಹೂದ್: 87)

ಎರಡು, ಸಕಲ ಕೆಡುಕು ಮತ್ತು ನೀಚ ವಸ್ತುಗಳಿಗೆ ಬಹಿಷ್ಕಾರ ಘೋಷಿಸುವ ನಮಾಝ್. (ಅಲ್ ಅಂಕಬೂತ್: 45) ಅಥವಾ ಕೆಲವಕ್ಕೆ ಆದೇಶ ಮತ್ತು ಕೆಲವಕ್ಕೆ ನಿಷೇಧ ಮಾಡುವ ಸಾಮರ್ಥ್ಯವಿರುವ ಆಧ್ಯಾತ್ಮಿಕ ಅಧಿಕಾರ ಕೇಂದ್ರ ನಮಾಝೆಂದು ಪವಿತ್ರ ಕುರ್‌ಆನ್ ನಮಗೆ ಕಲಿಸುತ್ತಿದೆ. ಇದುವೇ ಆಗಿದೆ ದಿಕ್ರುಲ್ಲಾಹಿಯ ಆಂತರ್ಯ.

ದಿನನಿತ್ಯದ ಜೀವನದಲ್ಲಿ ಐದು ಬಾರಿ ಕಡ್ಡಾಯವಾಗಿ ಮತ್ತು ಐಚ್ಛಿಕವಾಗಿ ಮಾಡುವ ನಮಾಝನ್ನು ಆರಾಧನೆಗಳ ರಾಜ ಗುರು ಎಂದು ಹೇಳಬಹುದಾಗಿದೆ.
ನಮಾಝ್‌ನ ನಂತರದ ಸ್ಥಾನವನ್ನು ನಮ್ಮ ಆರಾಧನೆ ಆಚರಣೆಗಳಲ್ಲಿ ಉಪವಾಸ ಹೊಂದಿದೆ.

ನಮಾಝ್‌ನ ವಿಶೇಷತೆ ಅದನ್ನು ಸಮಯಕ್ಕೆ ಸರಿಯಾಗಿ ಪುನಾರಾವರ್ತಿಸಬೇಕು ಎಂಬುದಾಗಿದ್ದರೆ ಉಪವಾಸದ ವಿಶೇಷತೆ ಶರೀರ ಮತ್ತು ಆತ್ಮವನ್ನು ಅದು ತೀವ್ರವಾಗಿ ಸ್ಪರ್ಶಿಸುವುದು ಆಗಿದೆ. ಶರೀರವನ್ನು ಮತ್ತು ಮನಸ್ಸನ್ನು ದಿಕ್ರುಲ್ಲಾಹ್ ಎಂಬ ಬಿಂದುವಿನಲ್ಲಿ ತಡೆದಿರಿಸುವ ಶಕ್ತಿ ಉಪವಾಸಕ್ಕಿದೆ. ಈ ಸಾಮರ್ಥ್ಯವನ್ನೇ ತಕ್ವಾ ಎಂದು ಪವಿತ್ರ ಕುರ್‌ಆನ್ ಕರೆಯುತ್ತಿದೆ.

ಪವಿತ್ರ ಕುರ್‌ಆನ್ ಒಬ್ಬನನ್ನು ಮುತ್ತಕಿ (ಧರ್ಮ ನಿಷ್ಠ)ಯಾಗಿ ಬದಲಾಯಿಸುವುದು (ಅಲ್‌ಬಕರ: 2).

ಇಬಾದತ್ (ಆರಾಧನೆ) ಒಬ್ಬನನ್ನು ಮುತ್ತಕಿಯಾಗಿ ಬದಲಿಸುವುದು (ಅಲ್‌ಬಕರಾ: 183)

ಪವಿತ್ರ ಕುರ್‌ಆನ್, ಇಬಾದತ್, ಉಪವಾಸ ಇವುಗಳು ಪರಸ್ಪರ ಸಂಬಂಧವಿರುವ ಕಾರ್ಯಗಳಾಗಿವೆ. ಇವು ಮೂರರ ಗುರಿ ಮುತ್ತಕೀಗಳನ್ನು ಸೃಷ್ಟಿಸುವುದಾಗಿದೆ. ಪವಿತ್ರ ಕುರ್‌ಆನ್‌ಗೂ ಇಬಾದತ್‌ಗೂ ಪರಸ್ಪರ ಸಂಬಂಧಗಳೇನು? ಪವಿತ್ರ ಕುರ್‌ಆನ್ ಇಬಾದತ್ ಎಂದರೇನೆಂಬುದರ ವಿವರಣೆ ಆಗಿದೆ. ಪವಿತ್ರ ಕುರ್‌ಆನ್ ಶಿಕ್ಷಣಗಳ ಅನುಸಾರ ಜೀವನವನ್ನು ಅಲ್ಲಾಹನಿಗೆ ಸಮರ್ಪಿಸುವುದರ ಹೆಸರು ಇಬಾದತ್.

ಅಲ್ಲಾಹನ ಮುಂದೆ ಸುಜೂದ್ (ಸಾಷ್ಠಾಂಗ ಎರಗವುದು) ಮಾಡುವುದು ಅಲ್ಲಾಹನ ಆದೇಶವನ್ನು ಅನುಸರಿಸಿ ಆದಮ್‌ರ ಮುಂದೆಯೂ ಸುಜೂದ್ ಮಾಡಿದ್ದು ಅಲ್ಲಾಹನಿಗೆ ಇರುವ ಇಬಾದತ್ ಆಗಿದೆ.

ಶುಕ್ರವಾರ ಅಂಗಡಿ ಮುಚ್ಚಿ, ಕೃಷಿ ಭೂಮಿಯನ್ನು ಬಿಟ್ಟು ಹೊರಟು, ವಿದ್ಯಾಲಯ ಮತ್ತು ಕೆಲಸದ ಕಾರ್ಖಾನೆಗಳನ್ನು ಮುಚ್ಚಿ ಮಸೀದಿಗೆ ಬಂದು ಸೇರುವುದು ಅಲ್ಲಾಹನಿಗಿರುವ ಇಬಾದತ್ ಆಗಿದೆ.

ಬದುಕನ್ನು ಸ್ಪರ್ಶಿಸುವ ಈ ಇಬಾದತ್‌ಗೆ ಪವಿತ್ರ ಕುರ್‌ಆನ್ ಪ್ರಾಪ್ತರನ್ನಾಗಿಸುತ್ತದೆ. ಮನುಷ್ಯನಿಗೆ ಸಮರ್ಪಿಸಲು ಆ ಪವಿತ್ರ ಕುರ್‌ಆನ್ ಆಯ್ದುಕೊಂಡ ತಿಂಗಳೇ ರಮಝಾನ್. ರಮಝಾನ್ ಪವಿತ್ರ ಕುರ್‌ಆನ್‌ನ ಆಕಾಶದಿಂದ ಭೂಮಿಗೆ ಬಂದ (ಅವತೀರ್ಣಗೊಂಡ) ಕಾಲ ಎಂಬ ಕಾರಣದಿಂದ ಉಪವಾಸದ ದಿನಗಳಾಗಿ ಬದಲಾಯಿತು.

ರಮಝಾನ್ ಪವಿತ್ರ ಕುರ್‌ಆನ್‌ನ ಮಾಸ. ರಮಝಾನ್‌ನಲ್ಲಿ ಉಪವಾಸ ಪವಿತ್ರ ಕುರ್‌ಆನ್ ಮಾರ್ಗದರ್ಶನದಂತೆ ಜೀವನ ಸಾಗಿಸಲಿಕ್ಕಿರುವ ತರಬೇತಿಯ ಆಧ್ಯಾತ್ಮಿಕ ಕಾರ್ಯಕ್ರಮ ಅಥವಾ ಜೀವನವನ್ನು ಸಂಪೂರ್ಣವಾಗಿ ಇಬಾದತ್ ಆಗಿ ಬದಲಾಯಿಸಲಿರುವ ಟ್ರೈನಿಂಗ್ ಪ್ರೋಗ್ರಾಮೇ ರಮಝಾನ್ ಉಪವಾಸವಾಗಿದೆ. ಪವಿತ್ರ ಕುರ್‌ಆನ್‌ನ ಮೂಲಕ, ಆರಾಧನೆಯ ಮೂಲಕ, ಉಪವಾಸದ ಮೂಲಕ ಮನುಷ್ಯನಿಗೆ ಸಿಗುವ ಉನ್ನತ ಸ್ಥಾನ ಮುತ್ತಕೀ ಎಂಬ ಅವಸ್ಥೆಯಾಗಿದೆ. ಯಾರು ಮುತ್ತಕೀ ಎಂದು ಕೇಳುವುದಾದರೆ, ಅಲ್ಲಾಹನಿಗೆ ಜೀವನವನ್ನು ಸಮರ್ಪಿಸಿದವನು ಎಂಬುದು ಸರಿಯುತ್ತರವಾಗಿದೆ.

‘ಸಮರ್ಪಣಾ ಸನ್ನದ್ಧನಾ/ಳಾಗಿದ್ದೇನೆ ನಾನು’ ಎಂದು ಮೂವತ್ತು ದಿನಗಳುದ್ದದ ಜೀವನದ ಮೂಲಕ ಉಪವಾಸಿಗ ಘೋಷಿಸುತ್ತಾನೆ. ಅಲ್ಲಾಹನ ಕಾನೂನು ವ್ಯವಸ್ಥೆಗೆ ವಿಧೇಯನಾಗಲು ನಾನಿದೋ ಸಿದ್ಧ ಎಂಬುದು ಉಪವಾಸದ ಘೋಷಣೆಯಾಗಿದೆ.

ಹಲಾಲ್-ಹರಾಮ್ (ಶುದ್ಧ-ನಿಷಿದ್ಧ)ಗಳನ್ನು ನಿಶ್ಚಯಿಸುವ ಅಲ್ಲಾಹನ ಅಧಿಕಾರವನ್ನು ಉಪವಾಸಿ ಉಪವಾಸ ಹಿಡಿಯುವ ಪ್ರಕ್ರಿಯೆಯ ಮೂಲಕ ಎತ್ತಿ ಹಿಡಿಯುವನು/ಳು. ಅಲ್ಲಾಹನ ಅಧಿಕಾರ ಕೇಂದ್ರಕ್ಕೆ ಅನುಗುಣವಾಗಿ ಜೀವನವನ್ನು ಒಪ್ಪಗೊಳಿಸುವುದು ತಕ್ವಾ ಆಗಿದೆ.

ಬೆಳಗಾತದಿಂದ ಸಂಜೆಯವರೆಗೆ ನಾನು ನೀರು ಕುಡಿಯುವುದಿಲ್ಲ. ಆಹಾರ ಸೇವಿಸುವುದಿಲ್ಲ. ಲೈಂಗಿಕ ಕಾರ್ಯದಲ್ಲಿ ಏರ್ಪಡುವುದಿಲ್ಲ ಯಾಕೆ ಯಾಕೆಂದರೆ ಅಲ್ಲಾಹನು ಅದನ್ನು ನನಗೆ ನಿಷೇಧಿಸಿದ್ದಾನೆ. ಆದ್ದರಿಂದ ನಾನು ಅವುಗಳನ್ನು ಮಾಡಲಾರೆ. ಅಲ್ಲಾಹನು ನಿಷೇಧಿಸಿರುವುದು ಮಾತ್ರ ನಿಷಿದ್ಧ ಎಂದು ಒಪ್ಪಿಕೊಳ್ಳುವ ಮಾನಸಿಕ ಬೆಳವಣಿಗೆಯೇ ತಕ್ವಾ ಆಗಿದೆ.
ಅಲ್ಲಾಹನು ಅನುಮತಿಸಿರುವುದು ನನಗೆ ಹಿತಕರವಾಗಿರುವುದು ಎಂಬ ನಿಲುಮೆ ತಕ್ವಾ ಆಗಿದೆ.

ಮಗ್ರಿಬ್ (ಮುಸ್ಸಂಜೆ) ಆಗಿ ಬಿಟ್ಟ ಮೇಲೆ ನನಗೆ ನೀರು ಕುಡಿಯದೆ ನಿರ್ವಾಹವಿಲ್ಲ. ಆಹಾರ ಸೇವಿಸದೆ ದಾರಿಯಿಲ್ಲ. ಮಗ್‌ರಿಬ್ ಸಮಯ ಆದ ಮೇಲೆಯೂ ನನಗೆ ಉಪವಾಸ ಮುಂದುವರಿಸುವ ಆರೋಗ್ಯವೂ ಸಾಮರ್ಥ್ಯವೂ ಇವೆ; ಆದ್ದರಿಂದ ಸ್ವಲ್ಪ ಸಮಯ ಹೆಚ್ಚು ಆಗಲಿ ಆನಂತರ ಉಪವಾಸ ಬಿಡೋಣ ಎನ್ನುವುದು ತಕ್ವಾ (ಧರ್ಮನಿಷ್ಠೆ)ವಲ್ಲ. ಇದು ತಕ್ವಾಕ್ಕೆ ವಿರುದ್ಧವಾಗಿದೆ.

ಉಪವಾಸ ಆತ್ಮ ಸಮರವಾಗಿದೆ. ಆತ್ಮ ಸಮರದಲ್ಲಿ ಗೆಲುವು ಎಂದರೆ ಇತರೆಲ್ಲ ಸಮರಗಳ ಜಯವನ್ನು ಖಚಿತಗೊಳಿಸಲಿಕ್ಕಿರುವ ಪೂರ್ವಭಾವಿ ಶರ್ತವಾಗಿದೆ.

ಉಪವಾಸ ಹಿಡಿದು ಮುತ್ತಕಿಯಾದವನ ಕಾರ್ಯಕ್ರಮ ಮುಂದಿನ ವರ್ಷ ಬರುವ ಉಪವಾಸವನ್ನು ಕಾದು ಕುಳಿತುಕೊಳ್ಳುವುದಲ್ಲ. ನಿರಂತರವಾದ ಪರಿಶ್ರಮ ಭೂಮಿಯನ್ನು ಸಜೀವವಾಗಿರಿಸುತ್ತದೆ ಮತ್ತು ಅದರಲ್ಲಿ ಗೆದ್ದು ಮುಂದೆ ಸಾಗುವುದು.

ಜಾಗತಿಕ ಬಂಡವಾಳಶಾಹಿ ಶಕ್ತಿಗಳು ನಮ್ಮನ್ನು ಸೋಲಿಸಲು ನೋಡುತ್ತಿವೆ. ಫ್ಯಾಸಿಸ್ಟ್ ಅಧಿಕಾರ ಕೇಂದ್ರಗಳು ನಮ್ಮನ್ನು ಶರಣಾಗಿಸಲು ನೋಡುತ್ತಿವೆ. ಭೌತಿಕ ಆಸಕ್ತಿಗಳ ದಾಸ ಎನಿಸಿಕೊಂಡ ನಮ್ಮ ಶರೀರ ನಮ್ಮನ್ನು ಶರಣಾಗಿಸುವುದಕ್ಕೆ ನೋಡುತ್ತಿದೆ. ವಾಣಿಜ್ಯ- ಮನೋರಂಜನೆ ಲಾಬಿಗಳು ನನ್ನ ಆಟದ ಸಾಮಗ್ರಿಗಳೊಂದಿಗೆ ನಮ್ಮನ್ನು ಅಧೀನಗೊಳಿಸಲು ನೋಡುತ್ತಿವೆ. ಲೈಂಗಿಕ- ಆರಾಜಕವಾದಿಗಳು ನಮ್ಮನ್ನು ಶರಣಾಗಿಸಲು ನೋಡುತ್ತಿದ್ದಾರೆ. ಮಾಧ್ಯಮ ದೊರೆಗಳು ನಮ್ಮನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ನೋಡುತ್ತಿದ್ದಾರೆ. ಅನೇಕ ವಿಧದ ಸವಾಲುಗಳಿಂದ ಸುತ್ತುವರಿದಿರುವ ಈ ಭೌತಿಕ ಜೀವನ ಎಂಬ ಸಮರ ಭೂಮಿಯಲ್ಲಿ ಭಕ್ತನಾಗು ಎಂಬ ಕ್ರಾಂತಿಯ ಗುರಿಯನ್ನು ಉಪವಾಸ ಘೋಷಿಸುತ್ತದೆ.

ಭಕ್ತಿಯು ಆಲಸ್ಯವಲ್ಲ. ಅಕ್ಷರಗಳನ್ನು ಹೇಳಲಿಕ್ಕಿರುವ ಬಾಯಿ ಚಪಲವಲ್ಲ. ಭಕ್ತಿಯನ್ನು ತರೀಕತ್ ಗುಹೆಯೊಳಕ್ಕೂ ಬಾಬ ಆಶ್ರಮಗಳಿಗೂ, ಮಸೀದಿ ಗೋಡೆಯೊಳಕ್ಕೂ ಬಂಧಿಸಿಡಲು ಧರ್ಮ ಪುರೋಹಿತರೂ, ಭೌತಿಕ ಶಕ್ತಿಗಳ ಅಧಿಕಾರ ಕೇಂದ್ರಗಳೂ ಜಾಗತಿಕ ಆರ್ಥಿಕ ಶಕ್ತಿಗಳೂ ಒಗ್ಗೂಡಿ ಪರಿಶ್ರಮಿಸುವಾಗ ರಮಝಾನ್ ಪುನಃ ಮರಳುತ್ತಿದೆ.

ಭಕ್ತಿ ಲೋಕವನ್ನು ರಿಪೇರಿ ಮಾಡಲಿಕ್ಕಾಗಿ.
ಯಾರ ಅಭಿಮಾನಿಗಳು ಆಗಬೇಕೆಂಬುದು ಪ್ರಚಲಿತ ಕಾಲದ ಒಂದು ಬಹುದೊಡ್ಡ ಪ್ರಶ್ನೆಯಾಗಿದೆ. ಪುಟ್‌ಬಾಲ್‌ನ ಈ ಉನ್ಮಾದ ಕಾಲದಲ್ಲಿ ಆ ಪ್ರಶ್ನೆ ತೀಕ್ಷ್ಣವಾದುದು. ಫ್ಯಾಸಿಸ್ಟ್ ವಿರೋಧಿ ಉನ್ಮಾದದಂತೆಯೇ ಮನೋರಂಜನೆ ಕೂಡಾ ಲೋಕದ ಉನ್ಮಾದವೂ ಆಗಿದೆ. ನಮ್ಮ ಮೌಲ್ಯ ಪ್ರಜ್ಞೆಯನ್ನೂ ಪ್ರಜಾಪ್ರಭುತ್ವದ ಪ್ರಜ್ಞೆಯನ್ನೂ ಅದು ಸೋರಿಕೆ ಮಾಡಿದೆ. ಇಲ್ಲಿ ರಮಝಾನ್‌ನ ಉಪವಾಸದ ಕರೆಯೆಂದು ಪ್ರಪಂಚದ ಅರ್ಥವೂ ಮೌಲ್ಯ ಪ್ರಜ್ಞೆಯೂ ಅದರ ಮೂಲ ಪ್ರಜಾ ಪ್ರಭುತ್ವೀಕರಣದ ಪ್ರಚೋದನೆಯಾದ ದೇವ ಸ್ಮರಣೆಯ ವಿಚಾರ ಕ್ರಾಂತಿಯನ್ನು ಹೇಳಬಹುದಾಗಿದೆ.

ತಿಲಾವತ್ತುಲ್ ಕುರ್‌ಆನ್‌ನ ಸ್ವಾದವನ್ನು ಅನುಭವಿಸಿರಿ
ತಿಲಾವತ್ತುಲ್ ಕುರ್‌ಆನ್ ಪವಿತ್ರ ರಮಝಾನ್ ಮುಖ್ಯ ಆರಾಧನಾ ಕರ್ಮ ಆಗಿದೆ. ಅಲ್‌ಫಾತಿಹಾದಲ್ಲಿ ಆರಂಭಗೊಂಡು ಅನ್ನಿಸಾದಲ್ಲಿ ವಿರಮಿಸುವ ಒಂದು ಯಾತ್ರೆಯದು. ಅಥವಾ ಅದು ದೇವ ಚಿಂತನೆಯನ್ನು ಮಾನವ ಚಿಂತನೆಯಾಗಿ ಅನುವಾದಿಸುವ ಅಸದೃಶವಾದ ಒಂದು ಆಧ್ಯಾತ್ಮಿಕ ಅನುಭವ ಆಗಿದೆ. ತಿಲಾವತ್ (ಪಠಣ) ಪ್ರವಾದಿ(ಸ)ರಿಂದ ವಹಿಸಿಕೊಂಡ ಒಂದು ದೌತ್ಯವಾಗಿದೆ. “ಉಮ್ಮೀಗಳ (ನಿರಕ್ಷರಿಗಳ) ನಡುವೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಎಬ್ಬಿಸಿದವನು ಅವನೇ. ಅವರು, ಆ ಜನರಿಗೆ ಅವನ ಸೂಕ್ತಗಳನ್ನು ಓದಿ ಹೇಳುತ್ತಾರೆ. ಅವರ ಜೀವನವನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ಸದ್ವಿವೇಕದ ಶಿಕ್ಷಣ ನೀಡುತ್ತಾರೆ. ವಸ್ತುತಃ ಇದಕ್ಕಿಂತ ಮುಂಚೆ ಅವರು ಸುಸ್ಪಷ್ಟ ಪಥಭ್ರಷ್ಟತೆಯಲ್ಲಿ ಬಿದ್ದಿದ್ದರು” (ಅಲ್ ಜುಮು: 2).

ತಿಲಾವತ್, ತಸ್ಕಿಯತ್, ತಅಲೀಮ್ (ಪಾರಾಣ-ಸಂಸ್ಕರಣೆ-ಅಧ್ಯಾಪನೆ) ಇವು ಮೂರು ಒಂದಕ್ಕೊಂದು ಜೋಡಣೆಗೊಂಡ ದೌತ್ಯವೆಂದು ಪವಿತ್ರ ಕುರ್‌ಆನ್ ಮೇಲಿನ ಸೂಕ್ತಗಳಲ್ಲಿ ನಮಗೆ ನೆನಪಿಸುತ್ತಿದೆ. ಉಪವಾಸ ಕಾಲದ ತಿಲಾವತ್ ಸಂಸ್ಕರಣೆಯನ್ನು ನಿರ್ವಹಿಸಲು ಸಮರ್ಥವಾಗುವ ರೀತಿಯಲ್ಲಿರುವ ಆರಾಧನೆಯಾಗಬೇಕಾಗಿದೆ. ಪ್ರಚಲಿತದಲ್ಲಿರುವ ಕುರ್‌ಆನ್ ಪಠಣ ಮತ್ತು ಪವಿತ್ರ ಕುರ್‌ಆನ್ ಪ್ರವಾದಿ(ಸ)ರಿಗೆ ವಹಿಸಿದ ಹೊಣೆಯೂ ನಮಗೆ ಹಸ್ತಾಂತರಿಸಲ್ಪಟ್ಟಿರುವುದೂ ಆದ ತಿಲಾವತ್ತುಲ್ ಕುರ್‌ಆನ್ ಒಂದೇ ಅಲ್ಲ. ಪ್ರಚಲಿತ ಪಠಣ ಪ್ರಭಾವಹೀನವಾಗಿದ್ದು ಬರೇ ತುಟಿ ಚಲನೆ ಮಾತ್ರ ಆಗಿದೆ. ರಮಝಾನ್ ಕುರ್‌ಆನ್ ಪಠಣ (ತಿಲಾವತ್ತುಲ್ ಕುರ್‌ಆನ್) ಸಮಾಜದಲ್ಲಿ ಸಂಸ್ಕರಣೆಯ ಹೊಣೆಯನ್ನು ಹೊತ್ತುಕೊಳ್ಳುವ ಪೂರ್ವ ಸಿದ್ಧತೆಯಾಗಿದೆ.

ತಿಲಾವತ್ (ಪಾರಾಯಣ) ಅನ್ನು ತದಬ್ಬುರ್ (ಮನನ) ನೊಂದಿಗೆ ನಿರ್ವಹಿಸಿದಾಗಲೇ ಗುರಿ ಮುಟ್ಟಬಹುದು. “ಇವರೇನು ಕುರ್‌ಆನ್ ಬಗ್ಗೆ ಚಿಂತನೆ ನಡೆಸುವುದಿಲ್ಲವೇ? ಇದು ಅಲ್ಲಾಹನ ಹೊರತು ಇನ್ನಾರದೇ ಕಡೆಯಿಂದ ಆಗಿರುತ್ತಿದ್ದರೆ ಇದರಲ್ಲಿ ಅನೇಕ ವಿರೋಧಾಭಾಸಗಳು ಕಂಡು ಬರುತ್ತಿದ್ದವು” (ಅನ್ನಿಸಾ: 82).

ಪಾರಾಯಣ ಮತ್ತು ಮನನ ಜೊತೆ ಜೊತೆಗಾದಾಗಲೇ ನಮ್ಮ ಬುದ್ಧಿಗೆ ಕುರ್‌ಆನ್‌ನ ಆಳವಾದ ಪರಸ್ಪರ ಹೊಂದಾಣಿಕೆ ಮತ್ತು ವಚನ ಮತ್ತು ಅಧ್ಯಾಯಗಳ ನಡುವಿನ ಪೂರ್ವಾಪರ ಸಂಬಂಧಗಳು ಹೊಳೆಯುವುದು. ತದಬ್ಬುರ್ ಎಂದರೆ ಪವಿತ್ರ ಕುರ್‌ಆನ್‌ನ ಮುಂದೆ ಹೃದಯ ತೆರೆಯುವುದಾಗಿದೆ. ವಿಶ್ವಾಸಿಗೆ ಅಲ್ಲಾಹನು ನೀಡಿರುವ ಹೊಣೆ ಪವಿತ್ರ ಕುರ್‌ಆನ್‌ನ ಮುಂದೆ ಹೃದಯ ತೆರೆಯುವುದಾಗಿದೆ. “ಅವರು ಕುರ್‌ಆನ್‌ನ ಬಗ್ಗೆ ಚಿಂತನೆ ನಡೆಸಲಿಲ್ಲವೇ ಅಥವಾ ಅವರ ಹೃದಯಗಳಿಗೆ ಬೀಗ ಮುದ್ರೆ ಬಿದ್ದಿದೆಯೇ” (ಮುಹಮ್ಮದ್ 24).

ಇದೊಂದು ಅತೀ ಸಮೃದ್ಧ ಗ್ರಂಥವಾಗಿದ್ದು ಇವರು ಇದರ ಸೂಕ್ತಗಳ ಕುರಿತು ಚಿಂತನೆ ನಡೆಸಲೆಂದು ಮತ್ತು ಬುದ್ಧಿ ಜೀವಿಗಳು ಇದರಿಂದ ಉಪದೇಶ ಪಡೆಯುವಂತಾಗಲೆಂದು ನಾವು ನಿಮಗೆ ಅವತೀರ್ಣಗೊಳಿಸಿದ್ದೇವೆ”(ಸ್ವಾದ್ 29).

ಮನನ, ಚಿಂತನೆಗಳ ಮೂಲಕ ಪಾಠ ಕಲಿಯಲು ಓದುಗರನ್ನು ಕರೆದೊಯ್ಯುವ ತಿಲಾವತ್ತುಲ್ ಕುರ್‌ಆನ್ ಎಂಬ ಆರಾಧನಾ ಕರ್ಮವನ್ನು ವಿಶ್ವಾಸಿ ಸಂಪೂರ್ಣ
ರಮಝಾನ್‌ನುದ್ದಕ್ಕೂ ನಿರ್ವಸಬೇಕಾಗಿದೆ. ಆಗಲೇ ಉಪವಾಸ ಅದರಲ್ಲಿರುವ ಅರ್ಥದ ಆಳದ ವ್ಯಾಪ್ತಿಯನ್ನು ಸ್ಪರ್ಶಿಸಬಹುದು.

ರಾತ್ರಿ ನಮಾಝ್ ಅಲ್ಲಾಹನ ಅಲಂಕಾರವಾಗಿದೆ
ತಿಲಾವತ್ತುಲ್ ಕುರ್‌ಆನ್ ಉಪವಾಸದ ಸ್ವಾದವಾದರೆ ಖಿಯಾಮುಲ್ಲೈಲ್ ರಮಝಾನ್‌ನ ಅಲಂಕಾರವಾಗಿದೆ. ದೀರ್ಘ ಸಮಯ ನಿಂತು ಮಾಡುವ ತಿಲಾವತ್ತುಲ್ ಕುರ್‌ಆನ್ ಖಿಯಾಮುಲ್ಲೈಲ್‌ನ ಮರ್ಮವಾಗಿದೆ. ಸುದೀರ್ಘ ರುಕೂಅï‌ಗಳು ಮತ್ತು ದೀರ್ಘ ಸುಜೂದ್‌ಗಳು ಅಲ್ಲಾಹನ ಸಾಮೀಪ್ಯ ಸಂಪಾದಿಸುವ ಸುಲಭ ಅವಕಾಶವಾಗಿದೆ. ರಮಝಾನ್ ಕಾಲದ ಕಿಯಾಮುಲ್ಲೈಲ್ ಮತ್ತು ತರಾವೀಹ್. ಅದನ್ನು ಒಬ್ಬರೇ ನಿರ್ವಹಿಸಬಹುದು. ಮಸೀದಿಗಳಲ್ಲಿ ಸಾಮೂಹಿಕವಾಗಿಯೂ ನಿರ್ವಹಿಸಬಹುದಾಗಿದೆ. ನಡುರಾತ್ರಿ ನಿರ್ವಹಿಸುವುದು ಹೆಚ್ಚು ಹೃದಯಂಗಮ ಅನುಭವವಾಗಿರುತ್ತದೆ. “ರಾತ್ರಿ ಕಾಲದಲ್ಲಿ ಕಡಿಮೆ ನಿದ್ರಿಸುವವರೂ ಮಧ್ಯ ರಾತ್ರಿ ಪಾಪ ವಿಮೋಚನೆಗಾಗಿ ಬೇಡುವವರೂ ಅವರಾಗಿದ್ದಾರೆ” (ಅದ್ದಾರಿಯಾತ್: 17-18)