ದ್ವೇಷದ ತಲವಾರು, ಜನರ ಗುಂಪು ದಾಳಿಯಿಂದ ರಕ್ಷಿಸಿಕೊಳ್ಳಲು ಬೇರೆ ದಾರಿಯಿಲ್ಲ: ಹೆಸರು ಬದಲಾಯಿಸಲು ಸಜ್ಜಾದ ಮುಸ್ಲಿಂ ಅಧಿಕಾರಿ

0
781

ಹೊಸದಿಲ್ಲಿ, ಜು. 8: ದೇಶದಲ್ಲಿ ನಿರಂತರ ನಡೆಯುತ್ತಿರುವ ದಾಳಿಯಿಂದ ರಕ್ಷಣೆ ಬಯಸಿ ಮಧ್ಯಪ್ರದೇಶದ ಮುಸ್ಲಿಂ ಅಧಿಕಾರಿಯೊಬ್ಬರು ಹೆಸರು ಬದಲಾಯಿಸಲು ಮುಂದಾಗಿದ್ದಾರೆ. ಮಧ್ಯಪ್ರದೇಶ ಸರಕಾರದ ಹಿರಿಯ ಅಧಿಕಾರಿ ನಿಯಾಝ್ ಖಾನ್ ತಾನು ಹೆಸರು ಬದಲಿಸಿಕೊಳ್ಳುತ್ತಿದ್ದೇನೆ ಎಂದು ಟ್ವಿಟರ್ ನಲ್ಲಿ ಘೋಷಿಸಿದ್ದಾರೆ. ಬದುಕಿ ಉಳಿಯಲು ಬಯಸುತ್ತಿದ್ದೇನೆ. ಮುಸ್ಲಿಂ ಅಸ್ತಿತ್ವ ಗೋಪ್ಯವಾಗಿರಿಸುವ ಪರಿಸ್ಥಿತಿ ಇದೆ. ದ್ವೇಷದ ತಲವಾರಿನಿಂದ , ಜನರ ಗುಂಪು ದಾಳಿಯಿಂದ ರಕ್ಷೆಹೊಂದಲು ಹೊಸದಾರಿ ಹೆಸರು ಬದಲಾಯಿಸುವುದು ಎಂದು ನಿಯಾಝ್ ಖಾನ್ ಹೇಳಿದರು.

ಟೋಪಿ, ಕುರ್ತಾ, ಗಡ್ಡ ಇಲ್ಲದಿದ್ದರೆ ನನಗೆ ಹೊಸ ಹೆಸರು ಹೇಳಿ ಪಾರಾಗಲು ಸಾಧ್ಯವಿದೆ. ಆದರೆ ನನ್ನ ಸಹೋದರ ಪರಂಪರಾಗತ ವೇಷಭೂಷಣಧಾರಿ. ಆದ್ದರಿಂದ ಆತ ಅಪಾಯದಲ್ಲಿದ್ದಾನೆ ಎಂದು ನಿಯಾಝ್ ಖಾನ್ ಹೇಳುತ್ತಿದ್ದಾರೆ. ಮುಸ್ಲಿಮರನ್ನು ರಕ್ಷಿಸಲು ಯಾರೂ ಬರುವುದಿಲ್ಲ. ಆದ್ದರಿಂದ ಹೆಸರು ಬದಲಾಯಿಸದೆ ಅನ್ಯ ದಾರಿಯಿಲ್ಲ ಎಂದು ಅವರು ಹೇಳಿದರು.