ಸ್ತ್ರೀ ಮತ್ತು ಪುರುಷ

0
95

✍️ ಜಿ.ಕೆ. ಎಡತ್ತನಾಟುಕ್ಕರ

ಮಾನವ ಸಮೂಹವು ಪುರುಷ ಮತ್ತು ಮಹಿಳೆ ಸೇರಿರುವಂತಹದ್ದು. ಯಾವುದೇ ಊರಲ್ಲಿ ಯಾವುದೇ ದೇಶದಲ್ಲಿ ಕೇವಲ ಪುರುಷರು ಮಾತ್ರ ಒಮ್ಮೆಯೂ ಜನಿಸಿಲ್ಲ. ಹಾಗೆಯೇ ಮಹಿಳೆಯರೂ ಜನಿಸಿಲ್ಲ. ಸ್ತ್ರೀ ಪುರುಷರ ಅನುಪಾತವು ಪ್ರಕೃತಿಯಲ್ಲಿ ದೇವನು ನಿಶ್ಚಯಿಸಿದ ಸಂತುಲಿತವಾದ ತಾಳದ ಭಾಗವಾಗಿದೆ. ಇದರಲ್ಲಿ ಹೆಚ್ಚು ಕಡಿಮೆ ಇದ್ದರೆ ಅದು ಮಾನವನ ತಪ್ಪಾದ ನಡೆಯ ಪರಿಣಾಮವಾಗಿದೆ. ಸ್ತ್ರೀಪುರುಷರು ಸೇರಿದ ಮಾನವ ಕುಲವು ಸಾಮಾನ್ಯವಾಗಿ ಸುಭದ್ರ ಕುಟುಂಬ, ಶಾಂತಿ ನೆಮ್ಮದಿಯ ಸಮಾಜ, ನ್ಯಾಯಯುತವಾದ ರಾಷ್ಟ್ರವನ್ನು ಬಯಸುತ್ತದೆ. ಈ ರೀತಿಯಲ್ಲಿ ಕುಟುಂಬ, ಸಮಾಜ, ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸ್ತ್ರೀ ಪುರುಷರ ಪಾತ್ರವು ಮಹತ್ವದ್ದು ಎಂಬುದರಲ್ಲಿ ತರ್ಕವಿಲ್ಲ. ಅವರು ಅನುಸರಿಸುವ ರೀತಿಯಲ್ಲಿ ತರ್ಕವಿದೆ.

ಸಂಪರ್ಕವು ನಿಲುವುಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದು ವಾಸ್ತವವಾಗಿದೆ. ಆದ್ದರಿಂದ ಪುರುಷರು ಸ್ತ್ರೀಯರ ನಡುವಿನ ಸಂಪರ್ಕದ ರೀತಿ ಮುಖ್ಯವಾಗಿದೆ. ಅವರ ಸಂಪರ್ಕಕ್ಕನುಗುಣವಾಗಿ ನಿಲುವುಗಳು ರೂಪುಗೊಳ್ಳುತ್ತದೆ. ಸಂಪರ್ಕವು ನಿಲುವುಗಳ ಆತ್ಮವಾಗಿದೆ ಎಂದು ಹೇಳುವುದರ ಉದ್ದೇಶವಿದು. ನಿಲುವುಗಳು ಮಾತ್ರವಲ್ಲ ನಿಯಮಗಳು ಕೂಡಾ ಸಂಪರ್ಕದ ರೀತಿಗನುಗುಣವಾಗಿರುತ್ತದೆ. ಸಮಾಜದ ನಿರ್ಮಾಣದಲ್ಲಿ ಸ್ತ್ರೀಯರ ಜೊತೆಗಿನ ಸಂಪರ್ಕವು ಒಂದು ವೇಳೆ ಪುರುಷರ ಜೊತೆಗಿನ ಸಂಪರ್ಕಕ್ಕಿಂತ ಮುಖ್ಯವಾದುದಾಗಿದೆ. “ನೀವು ಒಂದು ದೇಶದ ಅಭಿವೃದ್ಧಿಯ ಬಗ್ಗೆ ಅರಿಯಲು ಬಯಸುತ್ತೀರಿ ಎಂದಾದರೆ ಅಲ್ಲಿನ ಮಹಿಲೆಯರ ಸ್ಥಿತಿ ಗತಿಯನ್ನು ಅರಿತರೆ ಸಾಕು” ಎಂದು ಜವಹರಲಾಲ ನೆಹರೂ ಹೇಳಿದ್ದರು. ಮಹಿಳೆಯರ ಜೊತೆಗಿನ ಸಂಪರ್ಕದ ಬಗ್ಗೆ ಎರಡು ರೀತಿಯ ನಿಲುವುಗಳನ್ನು ಕಾಣಬಹುದು. ಅದರಲ್ಲಿ ಒಂದು ಮಹಿಳೆಯನ್ನು ಅಡುಗೆ ಕೋಣೆಯಲ್ಲಿ ಮುದುಡಿಕೊಂಡಿರಲು ಆಜ್ಞಾಪಿಸುವುದು ಪುರೋಹಿತ ವರ್ಗವಾಗಿದೆ. ಮತ್ತೊಂದು ಮಹಿಳೆಯನ್ನು ಮಾರ್ಕೆಟುಗಳಲ್ಲಿ ಓಡಾಡಲು ಪ್ರೇರೇಪಿಸುವುದು ಅಭಿವೃದ್ಧಿಪರರಾಗಿದ್ದಾರೆ. ಎರಡೂ ಕೂಡಾ ಮಹಿಳೆಯ ವಿಚಾರದಲ್ಲಿ ವಿರುದ್ಧವಾದುದು ಎಂಬುದನ್ನು ಕಾಣಬಹುದು.

ಈ ಎರಡರ ಮಧ್ಯೆ ಅಲ್ಲಾಹನ ಶಿಕ್ಷಣ ಸಂಪರ್ಕವಿದೆ. ಸಮಾಜದ ನಿರ್ಮಾಣದಲ್ಲಿ ಸ್ತ್ರೀ ಮತ್ತು ಪುರುಷರ ಪಾತ್ರವು ಸೂಜಿ ಮತ್ತು ನೂಲಿಗೆ ಇರುವ ಸಂಬಂಧದಷ್ಟು ಮಹತ್ವದ್ದಾಗಿದೆ.

ತಳಹದಿಯ ದೌತ್ಯದ ನಿರ್ವಹಣೆಯಲ್ಲಿ ಒಂದು ಇಲ್ಲದಿದ್ದರೆ ಮತ್ತೊಂದಕ್ಕೆ ಮಹತ್ವವಿಲ್ಲ. ಬಟ್ಟೆ ತಯಾರಿಕೆಯಲ್ಲಿ ಸೂಜಿಯ ಪಾತ್ರ ಮುಖ್ಯವೋ ನೂಲಿನ ಪಾತ್ರ ಮುಖ್ಯವೋ? ಎಂಬುದನ್ನು ಹೇಳಲಾಗದು. ಅದರರ್ಥ ಸೂಜಿ ಮತ್ತು ನೂಲು ಎಲ್ಲಾ ವಿಚಾರದಲ್ಲಿಯೂ ಒಂದೇ ರೀತಿ ಸಮಾನವಾಗಿದೆಯೇ? ಇಲ್ಲ ಸೂಜಿಗೆ ನೂಲು ಸಮನಾಗದು ನೂಳಿಗೆ ಸೂಜಿ ಸಮನಾಗದು ಎಂಬುದು ಸೂಚ್ಯ. ಆದರೆ ಎರಡರ ಗುರಿಯು ಒಂದೇ. ಸೂಜಿಯ ಗುರಿಯನ್ನು ನೂಲು ರದ್ದುಗೊಳಿಸದು. ನೂಲಿನ ಗುರಿಯನ್ನು ಸೂಜಿ ರದ್ದುಗೊಳಿಸದು. ಅದು ಪರಸ್ಪರ ಪೂರಕವಾಗಿ ಕಾರ್ಯವೆಸಗುತ್ತದೆ. ಎಂಬಂತೆ ಮಾನವ ಸಮಾಜದ ನಿರ್ಮಾಣದಲ್ಲಿ ಮಹಿಳೆಯ ಗುರಿಯೂ ಒಂದೇ ಪುರುಷನ ಗುರಿಯೂ ಒಂದೇ ಎಂದಾಗಿದೆ. ಒಂದು ಮತ್ತೊಂದನ್ನು ಕೀಳಾಗಿ ಕಾಣುವುದಾಗಲೀ ರದ್ದು ಪಡಿಸುವುದಾಗಲೀ ಇಲ್ಲ. ಪವಿತ್ರ ಕುರ್‌ಆನಿನ ಅಲ್ ಬಕರ ಅಧ್ಯಾಯದ 187ನೆಯ ಸೂಕ್ತದಲ್ಲಿ ಈ ಪರಸ್ಪರ ಬಂಧವನ್ನು ಒಂದು ಉಪಮೆಯಾಗಿ ಹೀಗೆ ಹೇಳಲಾಗಿದೆ. “ಅವರು ನಿಮಗೆ ಉಡುಪಾಗಿರುವರು ಮತ್ತು ನೀವು ಅವರಿಗೆ ಉಡುಪಾಗಿರುವಿರಿ”

ಸ್ತ್ರೀ – ಪುರುಷರ ನಡುವಿನ ಅಂತರಗಳು

ಶಾರೀರಿಕವಾಗಿಯೂ ಮಾನಸಿಕವಾಗಿಯೂ ಸ್ತ್ರೀ ಪುರುಷರು ಎರಡು ವಿಭಿನ್ನ ಪ್ರಕೃತಿಯವರಾಗಿದ್ದಾರೆ. ಈ ಅಂತರಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಕಾನೂನು ನಿರ್ಮಾಣ ಮಾಡಬೇಕು. ಇಲ್ಲದಿದ್ದಲ್ಲಿ ಯಾವುದಾದರೊಂದು ವಿಭಾಗವು ಅನ್ಯಾಯಕ್ಕೊಳಗಾಗುವುದು. ಅದರಿಂದ ವ್ಯಕ್ತಿತ್ವ ನಾಶವಾಗುವುದು. ವ್ಯಕ್ತಿತ್ವ ನಾಶವಾದರೆ ಕುಟುಂಬವು ವಿನಾಶದತ್ತ ಸಾಗುವುದು. ಕುಟುಂಬವು ನಾಶವಾದರೆ ಸಾಮಾಜಿಕ ಬದುಕು ಸೋರಿಹೋಗುವುದು. ಇದರಿಂದ ಸಹಜವಾಗಿಯೇ ದೇಶವು ಪತನಗೊಳ್ಳುವುದು. ಗ್ರೀಕ್ ತತ್ವಜ್ಞಾನಿ ಪ್ಲಾಟೋ ತನ್ನ ರಿಪಬ್ಲಿಕ್ ಎಂಬ ಗ್ರಂಥದಲ್ಲಿ ನ್ಯಾಯದ ಬಗ್ಗೆ ಹೀಗೆ ಪ್ರಸ್ತಾಸಿದ್ದಾರೆ: “ಸಮಾಜದ ಪ್ರತಿಯೊಂದು ವಿಭಾಗವೂ ಅವರವರ ಸಾಮರ್ಥ್ಯ ಮತ್ತು ಪ್ರಕೃತಿಗನುಗುಣವಾಗಿ ಅರ್ಹವಾದ ರೀತಿಯಲ್ಲಿ ವ್ಯವಹರಿಸಿದಾಗ ನ್ಯಾಯ ಲಭ್ಯವಾಗುತ್ತದೆ. ಪ್ರಕೃತಿಗೆ ವಿರುದ್ಧವಾಗಿ ಕಾರ್ಯಗಳನ್ನು ಹೇರಿದಾಗ ಸಮಸ್ಯೆಯುಂಟಾಗಿ ಸ್ಥಿತಿಗತಿಗಳು ವಿನಾಶದಂಚಿಗೆ ತಲುಪುವುದು.” ಪಾದಕ್ಕೆ ಅರ್ಹವಾದ ಚಪ್ಪಲಿ ತಲೆಗೆ ಯೋಗ್ಯವಾದ ಟೋಪಿ ಧರಿಸಬೇಕೆಂದರ್ಥ.

ವ್ಯತ್ಯಾಸ ಜೀವಶಾಸ್ತ್ರ

ಸ್ತ್ರೀ-ಪುರುಷರ ನಡುವಿನ ವ್ಯತ್ಯಾಸ ಜನ್ಮಾಂತರ ಇರುವಂತಹದ್ದು. ಈ ವ್ಯತ್ಯಾಸ ವಿರದಿದ್ದರೆ ಸಮಾಜ ನೆಲೆನಿಲ್ಲದು. ಮಾನವ ಕುಲದ ನೆಲೆ ನಿಲ್ಲುವಿಕೆಗೆ, ಮಾನವ ಸಂಪನ್ಮೂಲಗಳ ಉತ್ಪಾದನೆಗೆ ಸಹಾಯಕವಾಗುವ ರೀತಿಯಲ್ಲಿ ಈ ವ್ಯತ್ಯಾಸವನ್ನು ಜೋಡಿಸಿಡಲಾಗಿದೆ. ಇದು ಓರ್ವ ನಿಯಂತ್ರಕನ ಸಾನಿಧ್ಯವನ್ನು ಸಾರಿ ಹೇಳುವಂತಹ ದೃಷ್ಟಾಂತವಿದು. ಮಹಿಳೆಯರ ಜೀವಕೋಶದಲ್ಲಿ ಎರಡು ಎಕ್ಸ್ ಕ್ರೋಮೋಝೋಮ್ ಇರುತ್ತದೆ. ಪುರುಷರಲ್ಲಿ ಒಂದು ಎಕ್ಸ್ ಮತ್ತೊಂದು ಒಂದು ವೈ ಕ್ರೋಮೋಝೋಮ್ ಇರುತ್ತದೆ. ಇದು ಗಂಡು ಮತ್ತು ಹೆಣ್ಣಿನ ವ್ಯತ್ಯಾಸವಾಗಿದೆ. ಮಹಿಳೆ ಮತ್ತು ಪುರುಷರು ಒಂದೇ ರೀತಿ ಅಲ್ಲ ಎಂಬುದು ಇಲ್ಲಿಂದ ಆರಂಭವಾಗುತ್ತದೆ.

ಗರ್ಭಪಾತ್ರೆ, ಅಂಡಾಶಯ, ಅಂಡವಾಹಿನಿ, ಮಗುವಿಗೆ ಮೊಲೆಹಾಲುಣಿಸುವ ಸ್ತನ ಗ್ರಂಥಿಗಳು ಇದು ಮಹಿಳೆಯರಿಗಿರುವುದಾಗಿದೆ. ಪ್ರತ್ಯುತ್ಪಾದನೆಗೆ ಸಂಬಂಧಿಸಿ ವೃಷಣ ಮತ್ತು ಪುರುಷ ಲಿಂಗ ಪುರುಷರಿಗಿರುವುದು. ಮಹಿಳೆಯಲ್ಲಿ ಅಂಡೋತ್ಪಾದನೆಯಾದರೆ ಪುರುಷನಲ್ಲಿ ಬೀಜೋತ್ಪಾದನೆಯಾಗುವುದು ಎಂಬುದು ವ್ಯತ್ಯಾಸವಾಗಿದೆ. ಗಂಡು ಹೆಣ್ಣಿನ ವ್ಯತ್ಯಾಸದ ಮೇಲೆ ಪ್ರಭಾವ ಬೀರುವ ಮತ್ತೊಂದು ಘಟಕ ಹಾರ್ಮೋನುಗಳಾಗಿವೆ. ಈಸ್ಟೋಜನ್ ಮತ್ತು ಪ್ರೊಜೆಸ್ಟರೋನ್ ಎಂಬ ಹಾರ್ಮೋನುಗಳು ಮುಖ್ಯವಾಗಿ ಸ್ತ್ರೀಯಲ್ಲಿ ಕಂಡುಬರುತ್ತದೆ. ಇದು ಸ್ತ್ರೀಯ ಆವರ್ತ ಚಕ್ರ, ಗರ್ಭಧಾರಣೆ, ಚರ್ಮದ ಮೃದುತ್ವವನ್ನು ನಿಯಂತ್ರಿಸುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನುಗಳಿರುತ್ತವೆ. ಬಯಕೆ, ಮುಂತಾದ ಪುರುಷ ಸಹಜವಾದ ದೈಹಿಕ ಸ್ಥಿತಿಗೆ ಈ ಹಾರ್ಮೋನು ಕಾರಣವಾಗುತ್ತದೆ. ದೈಹಿಕ ರೂಪ, ಆಕ್ರಮಣಕಾರಿತನ, ಮುಖದ ಮೀಸೆ, ಗಡ್ಡ ಸಹಿತ ಶಬ್ದ ಕೂಡಾ ಸ್ತ್ರೀ ಪುರುಷರ ನಡುವಿನ ವ್ಯತ್ಯಾಸವನ್ನು ತಿಳಿಸುತ್ತದೆ.

ಹೀಗೆ ತೀರಾ ವ್ಯತ್ಯಸ್ತ ರೀತಿಯಲ್ಲಿದ್ದ ಎರಡು ಅಸ್ತಿತ್ವಗಳನ್ನು ಪರಸ್ಪರ ಪೂರಕವಾಗಿ ಸೃಷ್ಟಿಸಿರುವುದರಲ್ಲಿ ದೃಷ್ಟಾಂತವಿದೆ.

ಪವಿತ್ರ ಕುರ್‌ಆನ್‌ನಲ್ಲಿ ಹೀಗೆ ಹೇಳಲಾಗಿದೆ. “ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ. (ರೂಮ್: 21)

ಶಾಂತಿ ಮತ್ತು ಭದ್ರತೆ

ಈರ್ವರೂ ಸಂಯೋಜಿಸಿ ಜೀವಿಸುವಾಗ ತಲೆಮಾರುಗಳು ಉಂಟಾಗುತ್ತವೆ. ಹಾಗೇ ಬದುಕುವಾಗ ಈರ್ವರಿಗೂ ಶಾಂತಿ ಮತ್ತು ಭದ್ರತೆಯು ಅಗತ್ಯವಾಗಿದೆ. ಇದು ಅಂಗಡಿಯಿಂದ ಖರೀದಿಸುವಂತಹದ್ದಲ್ಲ. ಜೀವನ ರೀತಿಯನ್ನು ಕ್ರಮೀಕರಿಸುವಾಗ ಬಂದು ಸೇರುವಂತಹದ್ದು. ಅದು ಪ್ರವಾದಿಗಳ ಮೂಲಕ ಅಲ್ಲಾಹನು ಮನುಷ್ಯರಿಗೆ ಕಲಿಸಿಕೊಟ್ಟಿದ್ದಾನೆ. ಸ್ತ್ರೀ ಮತ್ತು ಪುರುಷ ಸ್ವಭಾವಕ್ಕನುಗುಣವಾಗಿ ಅವರವರ ಕರ್ತವ್ಯಗಳನ್ನು ನಿರ್ಧರಿಸಬೇಕು ಮತ್ತು ಜೀವನದ ರೀತಿಯನ್ನು ಕ್ರಮೀಕರಿಸಬೇಕು. ಅದರಲ್ಲಿ ಕುಟುಂಬ ಮತ್ತು ಕುಟುಂಬದ ನಿಯಮಗಳು ಮುಖ್ಯವಾಗಿದೆ.

ಕೃಪೆ: ಪ್ರಬೋಧನಂ 

ಅನುವಾದ: ಅಬೂ ಸಲ್ವಾನ್