ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಸಮಸ್ಯೆ: ಪರಿಹಾರ ಕ್ರಮ ಅನಿವಾರ್ಯ ಎಂದ ಬ್ರಿಟನ್

0
571

ಸನ್ಮಾರ್ಗ ವಾರ್ತೆ

ಲಂಡನ್: ಕಾಶ್ಮೀರ ವಿಷಯದಲ್ಲಿ ಪರಿಹಾರ ಕ್ರಮ ಸ್ವೀಕರಿಸಬೇಕಾದ್ದು ಅನಿವಾರ್ಯವಾಗಿದೆ ಎಂದು ಬ್ರಿಟನ್ ಹೇಳಿದೆ. ಉಭಯ ಪಕ್ಷಗಳ ಸಮಸ್ಯೆಗಳಲ್ಲಿ ಮಧ್ಯಸ್ಥಿಕೆಗೆ ಬ್ರಿಟನ್ ಯಾರೂ ಅಲ್ಲ. ಆದರೆ, ಇದೊಂದು ಮಾನವ ಹಕ್ಕುಗಳ ಸಮಸ್ಯೆಯಾಗಿದೆ ಎಂದು ಕಾಶ್ಮೀರದ ರಾಜಕೀಯ ವಾತಾವರಣವನ್ನು ಉದ್ದೇಶಿಸಿ ಬ್ರಿಟನ್‍ ಹೌಸ್ ಆಫ್ ಪಾರ್ಲಿಮೆಂಟಿನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಬ್ರಿಟನ್‍ನ ಫಾರಿನ್, ಕಾಮನ್‍ವೆಲ್ತ್ ಆಂಡ್ ಡೆವಲಪ್ಮೆಂಟ್ ಮಿನಿಸ್ಟರ್ ನಿಗಲ್ ಆಡಮ್ಸ್ ಹೇಳಿದರು. ಕಾಶ್ಮೀರ ಸಮಸ್ಯೆಯಲ್ಲಿ ಬ್ರಿಟನ್‍ನ ನೀತಿಯಲ್ಲಿ ಬದಲಾವಣೆ ಇಲ್ಲ. ಕಾಶ್ಮೀರ ಭಾರತದೆಂದು ಬ್ರಿಟನ್ ಇಂದಿಗೂ ನಂಬಿದೆ ಎಂದು ನಿಗಲ್ ಆಡಮ್ಸ್ ಹೇಳಿದರು.

ಕಾಶ್ಮೀರದ ವಿಶೇಷಾಧಿಕಾರದ ಆರ್ಟಿಕಲ್ 370 ತೆಗೆದು ಹಾಕಿದ ಭಾರತ ಸರಕಾರದ ಕ್ರಮವನ್ನು ಬ್ರಿಟನ್ ಪಾರ್ಲಿಮೆಂಟ್ ಚರ್ಚಿಸಿದೆ. ಕಾಶ್ಮೀರದಲ್ಲಿ ಜೈಲಿಗಟ್ಟಿರುವ ರಾಜಕಾರಣಿಗಳನ್ನು ಬೇಗನೆ ಬಿಡುಗಡೆಗೊಳಿಸಬೇಕು. ಪ್ರದೇಶದ ಬ್ರಾಡ್‍ಬಾಂಡ್ ನಿಷೇಧಗಳನ್ನು ತೆರವುಗೊಳಿಸಬೇಕೆಂದು ಬ್ರಿಟನ್ ಸಂಸದರು ಆಗ್ರಹಿಸಿದರು. ಬ್ರಾಡ್‍ಬಾಂಡ್ ನಿಷೇಧದಲ್ಲಿ ಸ್ವಲ್ಪ ಸಡಿಕೆಯಾಗಿದೆ ಎಂದು ಗೊತ್ತು. ಪೂರ್ಣವಾಗಿ ಅದನ್ನು ತೆಗೆದು ಹಾಕಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು.

ಬ್ರಿಟಿಷ್ ಪಾರ್ಲಿಮೆಂಟಿನ ಬ್ಯಾಕ್ ಬೆಂಚ್ ಸದಸ್ಯ ಲೇಬರ್ ಪಾರ್ಟಿಯ ಸಾರಾ ಓವನ್, ಕ್ರೋಸ್ಟ್ ಪಾರ್ಟಿ ಸಂಸದರು ಸೇರಿ ಚರ್ಚೆಗೆ ನೇತೃತ್ವ ನೀಡಿದ್ದರು. ಕಾಶ್ಮೀರದಲ್ಲಿ ಬೇರನ್ನು ಈ ಸಂಸದರಲ್ಲಿ ಹಲವರು ಹೊಂದಿದ್ದಾರೆ. ಜೀವನದಲ್ಲಿ ಅಭಿವೃದ್ಧಿ ಗೆಲುವು ಪಡೆಯುವ ಹಕ್ಕು ಕಾಶ್ಮೀರಿಗಳಿಗಿವೆ. ಕಾಶ್ಮೀರದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಭಾರತ ಸರಕಾರದ ನೀತಿಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ನಿಗಲ್ ಆಡಮ್ಸ್ ಹೇಳಿದರು.