ಉತ್ತರ ಪ್ರದೇಶದಲ್ಲಿ ಪುನಃ ವ್ಯಾಕ್ಸಿನ್ ರಾಜಕೀಯ

0
341

ಸನ್ಮಾರ್ಗ ವಾರ್ತೆ

ಲಕ್ನೊ: ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಇದ್ದು ಉತ್ತರ ಪ್ರದೇಶದಲ್ಲಿ ವ್ಯಾಕ್ಸಿನ್ ರಾಜಕೀಯ ಸಕ್ರಿಯವಾಗಿದೆ. ಮುಂದಿನ ವರ್ಷ ಬಿಎಸ್‍ಪಿ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಲಾಗುವುದು ಎಂದು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಎಸ್‍ಪಿ ಮುಂದಿನ ವರ್ಷ ಸರಕಾರ ರಚಿಸುವುದಾದರೆ ಎಲ್ಲರಿಗೂ ಉಚಿತ ಕೊರೋನ ವ್ಯಾಕ್ಸಿನ್ ನೀಡಲಾಗುವುದು ಎಂದು ಮಾಯಾವತಿ ಹೇಳಿದ್ದಾರೆ.

ಜನವರಿ 16ರಿಂದ ವ್ಯಾಕ್ಸಿನ್ ವಿತರಣೆ ಆರಂಭವಾಗಲಿದ್ದು ಮಾಯಾವತಿ ಸ್ವಾಗತಿಸಿದ್ದಾರೆ. ಕೇಂದ್ರ, ರಾಜ್ಯ ಸರಕಾರಗಳು ಕೊರೋನ ವ್ಯಾಕ್ಸಿನ್ ಉಚಿತವಾಗಿ ವಿತರಿಸಬೇಕೆಂದು ಅವರು ಆಗ್ರಹಿಸಿದರು. ಕೊರೋನ ವ್ಯಾಕ್ಸಿನ್ ವಿತರಣೆ ಜನವರಿ 16ರಿಂದ ಆರಂಭಿಸುವ ತೀರ್ಮಾನವನ್ನು ಸ್ವಾಗತಿಸುವುದಾಗಿ ಹೇಳಿದ ಮಾಯಾವತಿ ಅದನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕೆಂದು ಆಗ್ರಹಿಸಿದರು.