ಸನ್ಮಾರ್ಗ ವಾರ್ತೆ
ಮಲಪ್ಪುರಂ: ಕೇರಳದಲ್ಲಿ ಸಮಾಜ ಸೇವೆಯಿಂದ ಪ್ರಸಿದ್ಧಿ ಪಡೆದ, ಈಗ ಯುಡಿಎಫ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಫಿರೋಝ್ ಕುನ್ನಂಪರಂಬಿಲ್ರ ಕೈಯಲ್ಲಿ 5500 ರೂಪಾಯಿ ಮಾತ್ರ ಇದೆ. ಜಂಗಮ ಆಸ್ತಿ 52,58,834 ರೂ. ಇದೆ. ಫೆಡರಲ್ ಬ್ಯಾಂಕ್ ಆಲತ್ತೂರ್ ಶಾಖೆಯಲ್ಲಿ 8,447 ರಪಾಯಿ. ಸೌತ್ ಇಂಡಿಯನ್ ಬ್ಯಾಂಕಿನಲ್ಲಿ 16,132 ರೂಪಾಯಿ. ಎಚ್ಡಿಎಫ್ಸಿ ಬ್ಯಾಂಕಿನಲ್ಲಿ 3,255ರೂಪಾಯಿ, ಎಡಪ್ಪಾಳ ಎಂಡಿಸಿ ಬ್ಯಾಂಕಿನಲ್ಲಿ 1000 ರೂಪಾಯಿ ಇದೆ. ಪತ್ನಿಯ ಕೈಯಲ್ಲಿ 1000 ರೂಪಾಯಿ ಹಾಗೂ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇದೆ. ಇಬ್ಬರು ಆಶ್ರಿತರ ಬ್ಯಾಂಕ್ ಅಕೌಂಟಿನಲ್ಲಿ 67,412 ರೂಪಾಯಿ ಇದೆ.
ಅವರ ಇನ್ನೊವಾ ಕಾರಿಗೆ 20 ಲಕ್ಷ ರೂ. ಬೆಲೆ ಇದೆ. ಒಟ್ಟು ಜಂಗಮ ಆಸ್ತಿಯಾಗಿ 20,28,834 ರೂ. ಇದೆ. 2,95000 ರೂಪಾಯಿ ಮಾರುಕಟ್ಟೆ ಬೆಲೆಯ ಜಮೀನಿದೆ. 2053 ಸ್ಕ್ವೇರ್ ಫೀಟ್ನ ಮನೆಯ ಮಾರುಕಟ್ಟೆ ದರ 31.5 ಲಕ್ಷರೂ. ಇದಲ್ಲದೆ 80,000ರೂಪಾಯಿಯ ವಸ್ತುಗಳು ಕೈಯಲ್ಲಿವೆ. ಸ್ಥಾವರ ಆಸ್ತಿಯಾಗಿ 32,30,000 ರೂಪಾಯಿ ಇದೆ.
22,671 ರೂಪಾಯಿ ವಾಹನ ಸಾಲವಿದೆ. ಜೊತೆಗೆ ಮನೆ ಸಾಲ ಏಳು ಲಕ್ಷ ರೂಪಾಯಿ ಇದೆ. ಹತ್ತನೆ ತರಗತಿಯಲ್ಲಿ ಫೈಲ್ ಆಗಿರುವ ಫೀರೋಜ್ರವರ ಮೇಲೆ ಆಲತ್ತೂರ್ ಪೊಲೀಸ್ ಠಾಣೆ, ಚೆರಾನಲ್ಲೂರ್ ಪೊಲೀಸ್ ಠಾಣೆಯಲ್ಲಿ ಎರಡು ಕ್ರಿಮಿನಲ್ ಕೇಸುಗಳಿವೆ. ಶುಕ್ರವಾರ ಮಧ್ಯಾಹ್ನ ಎರಡೂವರೆ ಗಂಟೆಗೆ ಅವರು ಯುಡಿಎಫ್ ನಾಯಕರ ಜೊತೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.












