ಮಾಸ್ಕ್ ಧರಿಸದ್ದಕ್ಕೆ ದಂಡ: ಕಾರ್ಪೊರೇಷನ್ ಮಹಿಳಾ ಸಿಬ್ಬಂದಿಯ ಮೇಲೆ ಯುವತಿಯಿಂದ ಹಲ್ಲೆ

0
621

ಸನ್ಮಾರ್ಗ ವಾರ್ತೆ

ಮುಂಬೈ: ಮಾಸ್ಕ್ ಧರಿಸದ್ದಕ್ಕಾಗಿ ದಂಡ ಭರಿಸಬೇಕೆಂದು ಆಗ್ರಹಿಸಿದ ಕಾರ್ಪೊರೇಷನ್ ಮಹಿಳಾ ಸಿಬ್ಬಂದಿಯ ಮೇಲೆ ಯುವತಿಯೊಬ್ಬಳು ಹಲ್ಲೆ ಮಾಡಿದ್ದಾರೆ. ಮುಂಬೈ ಕಾಂಡಿವಿಲಿಯಲ್ಲಿ ಘಟನೆ ನಡೆದಿದ್ದು ಬೃಹತ್ ಮುಂಬೈ ಕಾರ್ಪೊರೇಷನ್ ಸಿಬ್ಬಂದಿಯನ್ನು ಯುವತಿ ಹೊಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮಾಸ್ಕ್ ಧರಿಸದೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ ಯುವತಿ ಕಾಂಡಿವಿಲಿ ಲಿಂಕ್ ರಸ್ತೆಯ ಮಹಾವೀರ್ ನಗರ ಟ್ರಾಫಿಕ್ ಸಿಗ್ನಲ್‍ಗೆ ತಲುಪಿದಾಗ ಕಾರ್ಪೊರೇಷನ್ ಸಿಬ್ಬಂದಿ ತಡೆದರು. ನಗರದಲ್ಲಿ ಕೊರೋನ ಮಾನದಂಡಗಳು ಪಾಲನೆಯಾಗುತ್ತಿದೆಯೇ ಎಂದು ದೃಢಪಡಿಸಲು ಕಾರ್ಪೊರೇಷನ್ ಅವರನ್ನು ನಿಯೋಜಿಸಿತ್ತು. ಮಾಸ್ಕ್ ಧರಿಸದ್ದಕ್ಕೆ ದಂಡ ಭರಿಸಲು ಯುವತಿಗೆ ಸಿಬ್ಬಂದಿ ಹೇಳಿದರು. ಮಾಸ್ಕ್ ಧರಿಸದವರಿಗೆ 200ರೂಪಾಯಿ ದಂಡ ವಿಧಿಸಲಾಗುತ್ತಿದೆ. ಇದರೊಂದಿಗೆ ಜಗಳಕ್ಕಿಳಿದ ಯುವತಿ ಸಿಬ್ಬಂದಿಗೆ ಹೊಡೆದಿದ್ದಾರೆ. ಈ ದೃಶ್ಯ ವೈರಲ್ ಆಗುವುದರೊಂದಿಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.