ದಿಲ್ಲಿ ಗಲಭೆ ದೇಶದ ಶಾಂತಿಗೆ ಬೆದರಿಕೆ: ಅಲ್ಪ ಸಂಖ್ಯಾತರಲ್ಲಿ ಸುರಕ್ಷಿತ ಭಾವನೆ ಮೂಡಿಸಬೇಕಾಗಿದೆ- ಪ್ರಕಾಶ್ ಸಿಂಗ್ ಬಾದಲ್

0
485

ಸನ್ಮಾರ್ಗ ವಾರ್ತೆ

ಚಂಡಿಗಡ, ಮಾ. 2: ದಿಲ್ಲಿ ಗಲಭೆ ದೇಶದ ಶಾಂತಿಗೆ, ಸಾಮುದಾಯಿಕ ಒಗ್ಗಟ್ಟಿಗೆ ಮತ್ತು ಜಾತ್ಯತೀತ ಮೌಲ್ಯಗಳಿಗೆ ಬೆದರಿಕೆಯಾಗಿದೆ ಎಂದು ಪಂಜಾಬಿನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ. ಎನ್‍ಡಿಎ ಘಟಕ ಪಕ್ಷವಾದ ಶಿರೋಮಣಿ ಅಕಾಲಿದಳದ ಹಿರಿಯ ನಾಯಕರಾಗಿರುವ ಇವರು, ಜಾತ್ಯತೀತತೆ ಎಂಬ ಪಂಚಾಂಗದಲ್ಲಿ ದೇಶ ನೆಲೆಸಿದೆ. ಜಾತಿ, ಧರ್ಮ, ಭಾಷೆ, ಸಂಸ್ಕøತಿ ವೈವಿಧ್ಯತೆಯ ನಡುವೆ ದೇಶವನ್ನು ಒಟ್ಟಾಗಿ ನಿಲ್ಲಿಸುವ ಘಟಕ ಅದು. ನಮ್ಮ ಪೂರ್ವಜರು ಜಾತ್ಯತೀತತೆಯನ್ನು ಪರಿಗಣಿಸಿದ್ದೂ ಅದನ್ನೇ ಎಂದವರು ಹೇಳಿದ್ದಾರೆ. ಪಂಜಾಬಿನ ಭಟ್ಟಿಂಡದಲ್ಲಿ ಪಕ್ಷದ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.

ಭಿನ್ನ ಸಮುದಾಯಗಳು ಪರಸ್ಪತರ ಅರಿತುಕೊಂಡು ಗೌರವಿಸಿದರೆ ಸುದೃಢವಾದ ಭಾರತ ನಿರ್ಮಿಸಲು ಸಾಧ್ಯವಿದೆ. ದಿಲ್ಲಿ ಗಲಭೆಯಿಂದ ಅಲ್ಪಸಂಖ್ಯಾತರಲ್ಲಿ ಹುಟ್ಟಿಕೊಂಡಿದೆ. ಭಯ, ಅರಕ್ಷಿತ ಸ್ಥಿತಿಯನ್ನು ದೂರ ಮಾಡಬೇಕಾಗಿದೆ ಎಂದು ಅವರು ಹೇಳಿದರು.