ಮಲೇಷ್ಯದ ಹೊಸ ಪ್ರಧಾನಿಯಾಗಿ ಮುಹ್ಯುದ್ದೀನ್ ಯಾಸಿನ್: ವರ್ಷದ ಮುಹಾತೀರ್ ರಾಜೀನಾಮೆ

0
392

ಸನ್ಮಾರ್ಗ ವಾರ್ತೆ

ಕೌಲಂಲಂಪುರ, ಮಾ. 2: ಮಲೇಷ್ಯದ ಹೊಸ ಪ್ರಧಾನಿಯಾಗಿ ಮುಹ್ಯುದ್ದೀನ್ ಯಾಸೀನ್ ಅಧಿಕಾರ ವಹಿಸಿಕೊಂಡಿದ್ದಾರೆ. ಉಪಪ್ರಧಾನಿ ಅನ್ವರ್ ಇಬ್ರಾಹೀಂರೊಂದಿಗೆ ತೀವ್ರ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪ್ರಧಾನಿ ಮುಹಾತೀರ್ ಮುಹಮ್ಮದ್ ಒಂದು ವಾರದ ಹಿಂದೆ ರಾಜೀನಾಮೆ ನೀಡಿದ್ದರು. ಇವರಿಂದ ತೆರವಾದ ಸ್ಥಾನಕ್ಕೆ ಮಾಜಿ ಗೃಹ ಸಚಿವ ಮುಹ್ಯುದ್ದೀನ್ ಆಯ್ಕೆಯಾಗಿದ್ದಾರೆ. ಆದರೆ ಸರಕಾರಕ್ಕೆ ಅಗತ್ಯವಾದ 114 ಸದಸ್ಯರ ಬಹುಮತ ತಮಗಿದೆ. ಹೊಸ ಸರಕಾರ ಕಾನೂನು ವಿರುದ್ಧವೆಂದು ಮುಹಾತೀರ್ ಪತ್ರಕರ್ತರಿಗೆ ತಿಳಿಸಿದ್ದಾರೆ.

2018ರಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದ ಪಕಟನ್ ಹಾರಪನ್ ಮಿತ್ರಕೂಟ ಅಧಿಕಾರದ ಒಳಜಗಳದಲ್ಲಿ ದುರ್ಬಲವಾಗಿದ್ದರೂ ರಾಜೀನಾಮೆ ನೀಡಿದ ಮುಹಾತೀರ್ ರಿಗೆ ಪುನಃ ಅಧಿಕಾರಕ್ಕೆ ಬರಲು ಅವರ ಪಾರ್ಟಿ ಮತ್ತು ಮಲೇಷ್ಯದ ದೊರೆ ಅವಕಾಶ ನೀಡಿಲ್ಲ. ಇದರೊಂದಿಗೆ ಚೀಟಿ ಎತ್ತಿ ಮುಹ್ಯುದ್ದೀನ್‍ರು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇವರು ಎಷ್ಟು ಕಾಲ ದೇಶವನ್ನಾಳಬಲ್ಲರು ಎಂಬ ಪ್ರಶ್ನೆ ಉದ್ಭವಿಸಿದೆ.

ಅವರು ಪ್ರಧಾನಿಯಾಗಿ ಆಯ್ಕೆಯಾದ ಬೆನ್ನಿಗೆ ಮುಹಾತೀರ್ ತನ್ನ ಮೈತ್ರಿಕೂಟದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಪತ್ರಿಕಾಗೋಷ್ಠಿಯನ್ನು ಕರೆದು ತಮಗೆ ಬಹುಮತ ಇದೆ ಎಂದು ಹೇಳಿಕೊಂಡಿದ್ದಾರೆ.