ಟ್ರಂಪ್‍ರ ವಲಸೆ ಕಾನೂನಿನಿಂದ ಬೇರೆ ಬೇರೆಯಾಗಿದ್ದ ನಾಲ್ಕು ಕುಟುಂಬಗಳಿಗೆ ಪ್ರವೇಶಾನುಮತಿ ನೀಡಿದ ಬೈಡನ್ ಸರಕಾರ

0
307

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಡೊನಾಲ್ಡ್ ಟ್ರಂಪ್‍ರ ಆಡಳಿತದಲ್ಲಿ ವಿವಾದಾತ್ಮಕ ವಲಸೆ ಕಾನೂನಿಂದ ಬೇರ್ಪಟ್ಟು ಇರಬೇಕಾದ ನಾಲ್ಕು ಕುಟುಂಬಗಳಿಗೆ ಅಮೆರಿಕ್ಕೆ ಬರಲು ನೂತನ ಅಧ್ಯಕ್ಷ ಜೋ ಬೈಡನ್ ಸರಕಾರ ಅನುಮತಿ ನೀಡಿದೆ.

ಮೆಕ್ಸಿಕೊ ಗಡಿಯಲ್ಲಿ ನಾಲ್ಕು ಕುಟುಂಬಗಳು ಎರಡು ದೇಶಗಳಲ್ಲಿ ಬೇರ್ಪಟಿದ್ದವು.

2017ರಲ್ಲಿ ತಂದೆ, ತಾಯಿ ಮಕ್ಕಳು ಎರಡು ದೇಶಗಳ ಕಾನೂನು ಅಡ್ಡಿಯಿಂದ ಸಿಕ್ಕಿಹಾಕಿಕೊಂಡಿದ್ದರು.

ಇವರಲ್ಲಿ ಎರಡು ಕುಟುಂಬಗಳ ಮಕ್ಕಳು ಮೆಕ್ಸಿಕೊದಲ್ಲಿ ಹಾಗೂ ತಂದೆ ತಾಯಿ ಅಮೆರಿಕದಲ್ಲಿ ನೆಲೆಸಬೇಕಾದ ಅನಿವಾರ್ಯತೆಗೊಳಗಾಗಿದ್ದರು.

ಡೊನಾಲ್ಡ್ ಟ್ರಂಪ್ ರವರ ಅಧಿಕಾರ ಕೊನೆಗೊಂಡ ಬಳಿಕ ಹಲವು ಬದಲಾವಣೆ ಮಾಡುತ್ತಿರುವ ಬೈಡನ್ ಸರಕಾರವು ಟ್ರಂಪ್ ಜಾರಿಗೊಳಿಸಿದ್ದ ವಿವಾದಾತ್ಮಕ ಹಾಗೂ ನಾಗರಿಕರ ಹಕ್ಕುಗಳಿಗೆ ಚ್ಯುತಿ ತರುತ್ತಿರುವ ಇಂತಹ ಕಾನೂನುಗಳಿಗೆ ಅಂತ್ಯ ಹಾಡುತ್ತಿದ್ದಾರೆ.

ನಾಲ್ಕು ಕುಟುಂಬಗಳಿಗೆ
ಮಾನವೀಯ ಪರಿಗಣನೆಯಡಿಯಲ್ಲಿ ಅಮೆರಿಕ ಪ್ರವೇಶಿಸುವ ಅನುಮತಿ ನೀಡಲಾಗುವುದು ಎಂದು ಅಮೆರಿಕದ ಆಂತರಿಕ ಸುರಕ್ಷೆ ಕಾರ್ಯದರ್ಶಿ ಅಲಾಂಡ್ರೊ ಮಯೊರ್ಕ್‍ಸ್ ಹೇಳಿದರು.

ಟ್ರಂಪ್‍ರ ಕಟು ತೀರ್ಮಾರ್ನದಲ್ಲಿ ವಿವಿಧ ದೇಶಗಳಿಂದ 5000ಕ್ಕೂ ಹೆಚ್ಚು ಮಕ್ಕಳು ಅಮೆರಿಕಕ್ಕೆ ಪ್ರವೇಶಿಸಲಾಗದೆ ತಂದೆ ತಾಯಿಯನ್ನು ಭೇಟಿಯಾಗಲು ಕಾಯುತ್ತಿದ್ದಾರೆ. ತಂದೆ ತಾಯಿಗಳಿಲ್ಲದೆ 677 ಮಕ್ಕಳು ಗಡಿ ಸುರಕ್ಷಾ ವಿಭಾಗದ ಕಸ್ಟಡಿಯಲ್ಲಿದ್ದಾರೆ.

ಕಾನೂನು ಬಾಹಿರ ವಲಸೆ ತಡೆಯುವ ಉದ್ದೇಶದಿಂದ ಟ್ರಂಪ್ ಸರಕಾರ ಗಡಿಯಲ್ಲಿ ಗೋಡೆ ಕಟ್ಟಿದ್ದಲ್ಲದೇ ಕಾನೂನನ್ನು ಕಠಿಣವಾಗಿ ಜಾರಿಗೆ ತಂದಿತ್ತು. ಅದರೆ ಬೈಡನ್ ಅಧಿಕಾರಕ್ಕೆ ಬಂದ ಮೇಲೆ ವಲಸೆ ವಿಷಯದಲ್ಲ ಸಡಿಲಿಕೆ ತಂದಿದ್ದು, ಅವರು ಅದಕ್ಕಾಗಿ 17 ಆದೇಶಗಳಿಗೆ ಸಹಿ ಹಾಕಿದ್ದಾರೆ.

ವಲಸೆ, ಹವಾಮಾನ, ಕೊರೋನ ಪ್ರತಿರೋಧ, ಆರ್ಥಿಕ ವ್ಯವಸ್ಥೆ ಇತ್ಯಾದಿ ವಿಷಯದಲ್ಲಿ ಬೈಡನ್ ಮರುಪರಿಶೀಲನೆ ನಡೆಸಿದ್ದಾರೆ.

ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಅಮೆರಿಕಕ್ಕೆ ಬರುವವರಿಗೆ ನಿಷೇಧವನ್ನು ಬೈಡನ್ ತೆರವುಗೊಳಿಸಿದ್ದರು. ಆದರೆ ಇನ್ನು ಅಮೆರಿಕ -ಮೆಕ್ಸಿಕೊ ಗೋಡೆ ನಿರ್ಮಾಣ ಕಾರ್ಯ ನಿಂತು ಹೋದೀತೇ ಎಂದು ಜಗತ್ತು ಕಾದು ನೋಡುತ್ತಿದೆ. ಅಮೇರಿಕಾ- ಮೆಕ್ಸಿಕೊದ ದಕ್ಷಿಣ ಗಡಿಯಲ್ಲಿ 30 ಅಡಿ ಎತ್ತರದಲ್ಲಿ ಗೋಡೆ ನಿರ್ಮಾಣ ಕಾರ್ಯವು ಆರಂಭಗೊಂಡಿತ್ತು.