ತಾಜ್‍ಮಹಲ್‍ನಲ್ಲಿ ಕೇಸರಿ ಧ್ವಜ ಬೀಸಿದ ಹಿಂದೂ ಜಾಗರಣ್: ನಾಲ್ವರ ಬಂಧನ

0
434

ಸನ್ಮಾರ್ಗ ವಾರ್ತೆ

ಆಗ್ರಾ: ಐತಿಹಾಸಿ ಸ್ಮಾರಕವಾದ ತಾಜ್‍ಮಹಲ್‍ನಲ್ಲಿ ಕೇಸರಿ ಧ್ವಜ ಬೀಸಿದ ಹಿಂದೂ ಜಾಗರಣ್ ಮಂಚ್‍ನ ನಾಲ್ವರು ಕಾರ್ಯಕರ್ತರನ್ನು ಸಿಐಎಸ್‍ಎಫ್ ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಿದೆ. ತಾಜ್‍ಮಹಲ್ ಹಿಂದೂ ಮಂದಿರ ಎಂದು ಕೆಲವು ಬಿಜೆಪಿ ನಾಯಕರು ಹೇಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಜಾಗರಣ್ ಮಂಚ್ ಕಾರ್ಯಕರ್ತರು ಭಾಗವಾಧ್ವಜವನ್ನು ಕೈಯಲ್ಲಿ ಹಿಡಿದು ಬೀಸಿದ್ದಾರೆ. ಜಾಗರಣ್ ಮಂಚ್ ಆರೆಸ್ಸೆಸ್‍ನ ಪರಿವಾರ ಸಂಘಟನೆಯಾಗಿದೆ.

ಒಂದು ಗುಂಪು ಕೇಸರಿ ಧ್ವಜವನ್ನು ಹಿಡಿದು ತಾಜ್‍ಮಹಲ್ ಮುಂದೆ ಬೀಸುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇವರೇ ದೃಶ್ಯವನ್ನು ಪ್ರಚಾರ ಮಾಡಿದ್ದರು. ಹಿಂದೂ ಜಾಗರಣ್ ಮಂಚ್ ಜಿಲ್ಲಾಧ್ಯಕ್ಷ ಗೌರವ್ ಠಾಕೂರ್ ನೇತೃತ್ವದಲ್ಲಿ ಧ್ವಜವನ್ನು ಜಾಗರಣ್ ಕಾರ್ಯಕರ್ತರು ಬೀಸಿದ್ದರು. ಈತನ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.

ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ವಿಜಯ ದಶಮಿ ದಿನದಂದು ಗೌರವ್ ಠಾಕೂರ್ ನೇತೃತ್ವದಲ್ಲಿ ಹಿಂದೂ ಜಾಗರಣ್‍ನವರು ತಾಜ್‍ಮಹಲ್‍ಗೆ ನುಗ್ಗಿ ಧ್ವಜ ಬೀಸಿದ್ದರು. ತಾಜ್‍ಮಹಲ್ ತೇಜೊಮಹಾಲಯ ಎಂಬ ಶೈವ ದೇವಸ್ಥಾನ. ಈ ಸ್ಮಾರಕವನ್ನು ಹಿಂದೂಗಳಿಗೆ ಸರಕಾರ ಬಿಟ್ಟುಕೊಡುವವರೆಗೆ ಹೋರಾಟ ಮುಂದುವರಿಯುವುದು ಎಂದು ಗೌರವ್ ಠಾಕೂರ್ ಹೇಳಿದ್ದನು.