ಮ್ಯಾಟ್ರಿಮೊನಿಯಲ್ ವೆಬ್‍ಸೈಟ್‍ನಿಂದ ಫೋನ್ ನಂಬರ್ ಪಡೆದು ಹನಿಟ್ಯ್ರಾಪ್: ಯುವತಿಯ ಬಂಧನ

0
407

ಸನ್ಮಾರ್ಗ ವಾರ್ತೆ

ಬೆಂಗಳೂರು: ಹನಿಟ್ಯ್ರಾಪ್ ಮೂಲಕ ಯುವಕರಿಗೆ ಬೆದರಿಕೆಯನ್ನು ಹಾಕಿ ಹಣ ಕಿತ್ತುಕೊಳ್ಳುತ್ತಿದ್ದ ಯುವತಿಯನ್ನು ಬಂಧಿಸಲಾಗಿದ್ದು ಬಂಧಿತ ಮಹಿಳೆ ಕವಿತಾ ಎಂಬುದಾಗಿ ಗುರುತಿಸಲಾಗಿದ್ದು ಖಾಸಗಿ ಶಾಲೆಯ ಅಧ್ಯಾಪಕಿಯಾಗಿದ್ದಾಳೆ. ಮದುವೆ ವೆಬ್‍ಸೈಟಿನಿಂದ ಫೋನ್ ನಂಬರ್ ಪಡೆದು ಯುವಕರಿಗೆ ಕರೆ ಮಾಡಿ ಮದುವೆಯ ಆಸಕ್ತಿ ತೋರಿಸಿ ನಂತರ ಇವರೊಂದಿಗೆ ಸಂಬಂಧ ಕುದುರಿಸಿಕೊಂಡು ಮೋಸ ಮಾಡಿ ನಂತರ ಬ್ಲಾಕ್‌ಮೇಲ್ ಮಾಡುತ್ತಿದ್ದಳು. ಯುವತಿಯ ಬಲೆಗೆ ಬೀಳುವವರೊಂದಿಗೆ ದೈಹಿಕ ಸಂಬಂಧ ಬೆಳೆಸುತ್ತಿದ್ದಳು. ಇದರ ವೀಡಿಯೊ ಚಿತ್ರಿಸುತ್ತಿದ್ದಳು. ನಂತರ ಇದನ್ನು ತೋರಿಸಿ ಯುವಕರನ್ನು ಬೆದರಿಸಿ ಹಣ ಪೀಕಿಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಹಣ ಕೊಡದಿದ್ದರೆ ಮದುವೆಯಾಗುವುದಾಗಿ ಭಾಷೆ ಕೊಟ್ಟು ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡುವುದಾಗಿ ಕವಿತಾ ಹೇಳುತ್ತಿದ್ದಳು. ಇವಳು ದೂರು ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಯುವಕರ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರ 22 ವರ್ಷದ ಯುವಕನನ್ನು ಇದೇ ರೀತಿ ಮೋಸ ಮಾಡಿ 2 ಲಕ್ಷ ರೂಪಾಯಿ ಕೊಡಬೇಕೆಂದು ಕವಿತಾ ಕೇಳಿದ್ದಾಳೆ. ಆದರೆ ಯುವಕ ಹಣಕೊಡದೆ ಪೊಲೀಸರಿಗೆ ದೂರು ನೀಡಿದ್ದು ಬಳಿಕ ನಿಜಾಂಶ ಬಹಿರಂಗವಾಗಿದೆ.