ಸ್ಟ್ಯಾಂಡ್-ಅಪ್ ಕಮೆಡಿಯನ್ ಮುನವ್ವರ್ ಫಾರೂಕಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

0
414

ಸನ್ಮಾರ್ಗ ವಾರ್ತೆ

ಇಂದೋರ್: ಮಂಗಳವಾರ ಮಧ್ಯಪ್ರದೇಶದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸ್ಟ್ಯಾಂಡ್-ಅಪ್ ಹಾಸ್ಯನಟ ಮುನವ್ವರ್ ಫಾರೂಕಿ ಮತ್ತು ಇನ್ನೊಬ್ಬ ಆರೋಪಿಗೆ ಜಾಮೀನು ನಿರಾಕರಿಸಿದೆ. ಮುನವ್ವರ್ ಫಾರೂಕಿ ಪರ ವಕೀಲರು ಇದು ರಾಜಕೀಯ ಒತ್ತಡಗಳಿಂದ ಪ್ರೇರಿತವಾದ ಬಂಧನವೆಂದರು.

ಪ್ರಾಸಿಕ್ಯೂಷನ್ ವಕೀಲ ವಿಮಲ್ ಮಿಶ್ರಾ ರವರು ಈ ಕಾರ್ಯಕ್ರಮಕ್ಕೆ ಸ್ಥಳೀಯ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯಲಾಗಿಲ್ಲ. ಕೊವೀಡ್ ನಿಯಮಾವಳಿಯನ್ನು ಪಾಲಿಸಲಾಗಿಲ್ಲ. “ಪ್ರೇಕ್ಷಕರಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯರು ಇದ್ದರೂ ಅಶ್ಲೀಲತೆ ತುಂಬಿದ ಕಾರ್ಯಕ್ರಮ ಇದಾಗಿತ್ತು” ಎಂದಿದ್ದರು.

ಬಂಧನ ಹಿನ್ನೆಲೆ

ಹಾಸ್ಯಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಅಮಿತ್ ಶಾರನ್ನು ವ್ಯಂಗ್ಯವಾಡಿದ ಯುವ ಕಲಾವಿದ ಮತ್ತು ತಂಡವನ್ನು ಹಿಂದೂ ದೇವರುಗಳನ್ನು ಅಪಮಾನಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಿದ ಎರಡು ದಿನಗಳ ಬಳಿಕ ಮಧ್ಯಪ್ರದೇಶ ಪೊಲೀಸರು ಹಿಂದೂ ದೇವರನ್ನು ಅಪಮಾನಿಸಿದ್ದಕ್ಕೆ ಯಾವುದರೆ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ. ಬಂಧಿಸಿ ಎರಡು ದಿನಗಳ ನಂತರ ಕಲಾವಿದ ಮುನವ್ವರ್ ಫಾರೂಕಿ ಹಿಂದೂ ದೇವರನ್ನು ಅಪಮಾನಿಸಿದಕ್ಕೆ ವೀಡಿಯೋ ಪುರಾವೆಯಿಲ್ಲ ಎಂದು ಇಂದೋರ್ ಪೊಲೀಸರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಫಾರೂಕಿಯನ್ನು ಬಂಧಿಸಲಾಗಿತ್ತು. ಹಾಸ್ಯ ಕಾರ್ಯಕ್ರಮದ ನಡುವೆ ಗೃಹ ಸಚಿವ ಅಮಿತ್ ಶಾರನ್ನು ಫಾರೂಕಿ ಮತ್ತು ತಂಡ ವ್ಯಂಗ್ಯವಾಡಿತ್ತು. ಆದರೆ, ಅವರ ವಿರುದ್ಧ ಹಿಂದೂ ದೇವರನ್ನು ಅಪಮಾನಿಸಿದ ಕೇಸನ್ನು ಪೊಲೀಸರು ದಾಖಲಿಸಿ ಬಂಧಿಸಿದ್ದರು. ಫಾರೂಕಿ ಗಣೇಶ ಮತ್ತು ಶಾರನ್ನು ಅಪಮಾನಿಸಿದ್ದಾನೆ ಎಂದು ವೀಡಿಯೊ ಸಹಿತ ದೂರು ನೀಡಲಾಗಿತ್ತು.

ಕರಸೇವಕರನ್ನು ಮತ್ತು ಅಮಿತ್ ಶಾರನ್ನು ವ್ಯಂಗ್ಯವಾಡಿದ ಬಳಿಕ ಈತ ದೇವರನ್ನು ಅಪಮಾನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಹಿಂದೂ ದೇವರು ಮತ್ತು ಕೇಂದ್ರ ಸಚಿವ ಅಮಿತ್ ಶಾರನ್ನು ಅಪಮಾನಿಸಿದ್ದಕ್ಕೆ ಫಾರೂಕಿ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ವೀಡಿಯೊ ಪರಿಶೀಲಿಸಿದ ಬಳಿಕ ತುಕಗಂಜ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕಮಲೇಶ್ ಶರ್ಮ ಹೇಳಿದರೆಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಹಿಂದೂ ಸಂಘಟನೆಯ ಹಿಂದ್ ರಕ್ಷಕ್ ಸಂಘಟನ್ ನಾಯಕ ಏಕಲವ್ಯ ಸಿಂಗ್ ಫಾರೂಕಿ ವಿರುದ್ಧ ದೂರು ನೀಡಿದ್ದರು.