ರೈತರು ಟ್ರ್ಯಾಕ್ಟರ್‌ನಿಂದ ಡೇರೆಗೆ: ದೀರ್ಘವಾಸದತ್ತ ರೈತರ ಪ್ರತಿಭಟನೆ

0
434

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ. 10: ರೈತರು ಟ್ರಾಕ್ಟರ್‌ನಿಂದ ಇಳಿದು ಡೇರೆ ಹಾಕಿ ಕೂತಿದ್ದಾರೆ. ಪಾಕಿಸ್ತಾನದ ಲಾಹೋರ್, ಪೇಶಾವರದಿಂದ ಅತ್ತ ಅಫ್ಘಾನಿಸ್ತಾನದ ಜಲಾಲಾಬಾದ್‍ವರೆಗೆ ಜೋಡಿಸುವ ಪೆರ್ಶಾ ಸೂರಿ ನಿರ್ಮಿಸಿದ ಭಾರತದ ಮೊದಲ ರಸ್ತೆ ಗ್ರಾಂಟ್ ಟ್ರಂಕ್ ರೋಡ್‍ನಲ್ಲಿ ತುಂಬಿ ತುಳುಕುತ್ತಿರುವ ವಾಹನಗಳ ಎಡೆಯಲ್ಲಿ ರೈತರು ಬೀಡಾರ ಹಾಕಿಕೊಂಡು ಸುದೀರ್ಘ ಪ್ರತಿಭಟನೆಗೆ ಸಿದ್ಧವಾಗಿದ್ದಾರೆ.

ಹಲವು ಯುದ್ಧ ಹೋರಾಟಗಳ ಇತಿಹಾಸವನ್ನು ಈ ರಸ್ತೆ ಹೊಂದಿದೆ. ಒಂದಿಬ್ಬರು ಇರಬಹುದಾದ, ಸುಲಭವಾಗಿ ಎತ್ತಿಕೊಂಡು ಹೋಗಬಹುದಾದ ಡೇರೆಗಳು ನಡು ರಸ್ತೆಯಲ್ಲಿ ಕಟ್ಟಲಾಗಿದೆ. ಜತೆಗೆ ಬೃಹತ್ ಡೇರೆಗಳನ್ನು ಕೂಡ ಹಾಕಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತರನ್ನು ಕರೆದು ಚರ್ಚಿಸಿದ್ದು ವಿಫಲವಾದ ನಂತರ ಸರಕಾರ ನಿಲುವು ಬದಲಾಯಿಸುವವರೆಗೆ ಚರ್ಚೆ ಬೇಡ ಎಂದು ನಿರ್ಧರಿಸಿದ ಮರುದಿನ ಡೇರೆ ಹಾಕಲು ಶುರುಮಾಡಿದ್ದರು.

ವಿವಾದತ್ಮಕ ಕಾನೂನುಗಳನ್ನು ತೆಗೆದುಹಾಕುವವರೆಗೆ ಡೇರೆಯಲ್ಲಿರಲು ರೈತರು ನಿರ್ಧರಿಸಿದ್ದು, ಪಂಜಾಬ್ ಹರಿಯಾಣದ ಟ್ರಾಕ್ಟರ್‌ಗಳಲ್ಲಿ ಬಂದ ರೈತರು ಪ್ರತಿಭಟನೆ ‌ದೀರ್ಘಗೊಳ್ಳುತ್ತಿರುವುದನ್ನು ಮನಗಂಡ ಬಳಿಕ ಸುದೀರ್ಘ ಡೇರೆಹಾಕಿ ಇರಲು ನಿರ್ಧರಿಸಿದರು. ಹೋರಾಟದ ವರದಿಗೆ ಬಂದ ಪಂಜಾಬಿನ ಪತ್ರಕರ್ತರು ಕೂಡ ಡೇರೆಯಲ್ಲಿ ವಾಸವಿದ್ದಾರೆ. ನಡುರಸ್ತೆಯಲ್ಲಿ ತಾತ್ಕಾಲಿಕ ಹೋರಾಟ ವೇದಿಕೆ ಇತ್ತು. ಈಗ ಬೃಹತ್ ವೇದಿಕೆಯನ್ನು ರೈತರು ಹಾಕಿದ್ದಾರೆ.