ಪಪ್ಪಾಯಿ ತಿಂದ ದನಕ್ಕೆ ಇರಿದ ಆರೋಪ: ಓರ್ವನ ಬಂಧನ

0
512

ಸನ್ಮಾರ್ಗ ವಾರ್ತೆ

ಮುಂಬೈ,ಫೆ.19: ಮಹಾರಾಷ್ಟ್ರದಲ್ಲಿ ಮಾರಾಟಕ್ಕಿಟ್ಟಿದ್ದ ಪಪ್ಪಾಯಿಯನ್ನು ದನ ತಿಂದದ್ದಕ್ಕೆ ದನಕ್ಕೆ ಇರಿದಿದ್ದಾನೆಂದು ಆರೋಪಿಸಿ ಹಣ್ಣುಹಂಪಲು ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದಾರೆ. ರಾಯ್‍ಗಡದ ಮುರುಡಿ ಎಂಬಲ್ಲಿ ಬುಧವಾರ ಘಟನೆ ನಡೆದಿದೆ.

ಹಣ್ಣುಹಂಪಲು ಅಂಗಡಿಯ ಬಶೀರ್ ಎಂಬಾತನನ್ನು ಪೊಲೀಸರು ದನಕ್ಕೆ ಇರಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದು ಮಾರಾಟಕ್ಕಿಟ್ಟಿದ ಪಪ್ಪಾಯಿಯನ್ನು ದನ ತಿಂದಿತ್ತು. ಅದರಿಂದ ಕೋಪಗೊಂಡು ಆತ ಈ ಕೃತ್ಯವೆಸಗಿದ್ದಾನೆ. ದನದ ಕಿಬ್ಬೊಟ್ಟೆ ಮತ್ತು ಕಾಲಿಗೆ ಇರಿದಿದ್ದಾನೆ. ಘಟನೆಯನ್ನು ನೋಡಿದ ವ್ಯಕ್ತಿಯೊಬ್ಬರು ನಮಗೆ ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಗಾಯಗೊಂಡ ದನಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.