ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಬಿಜೆಪಿ ನಾಯಕನ ಹತ್ಯೆ

0
647

ಸನ್ಮಾರ್ಗ ವಾರ್ತೆ

ಶ್ರೀನಗರ, ಆ. 6: ಕಾಶ್ಮೀರದಲ್ಲಿ ಬಿಜೆಪಿ ನಾಯಕನ್ನು ಭಯೋತ್ಪಾದಕರು ಗುಂಡು ಹಾರಿಸಿ ಕೊಂದಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್‍ಗಾಮ್‍ನಲ್ಲಿ ಬಿಜೆಪಿ ನಾಯಕನನ್ನು ಭಯೋತ್ಪಾದಕರು ಗುಂಡಿಟ್ಟು ಸಾಯಿಸಿದ್ದಾರೆ. ಖಾಝಿಗಂಧ್ ಬ್ಲಾಕ್ನ್ವೆಸು ಗ್ರಾಮದ ಸರಪಂಚ ಸಜಾದ್ ಅಹ್ಮದ್ ಖಂಡೆ ಕೊಲೆಯಾದ ವ್ಯಕ್ತಿ. ತನ್ನ ಮನೆಯ ಸಮೀಪದಲ್ಲಿ ಸಜಾದ್ ಅಹ್ಮದ್ ಗುಂಡಿಗೆ ಬಲಿಯಾದರು. ಗುಂಡಿಗೀಡಾದ ಸಜಾದ್ ಅಹ್ಮದ್‍ರನ್ನು ಕೂಡಲೇ ಅನಂತನಾಗ್‍ನ ಜಿಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರು ಬದುಕಿ ಉಳಿಯಲಿಲ್ಲ.

48 ಗಂಟೆಗಳಲ್ಲಿ ಕಾಶ್ಮೀರದ ಬಿಜೆಪಿ ಸರಪಂಚ್ ಮೇಲೆ ನಡೆದ ಎರಡನೆ ದಾಳಿಯಿದು. ಆಗಸ್ಟ್ ನಾಲ್ಕರಂದು ಸಂಜೆ ಅಖ್ರಾನ್ ಖಾಝಿ ಗಂಧ್‍ನಲ್ಲಿ ನಡೆದ ಗುಂಡು ಹಾರಾಟದಲ್ಲಿ ಬಿಜೆಪಿ ನಾಯಕ ಆರಿಫ್ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದರು.

ಕಾಶ್ಮೀರ ಕಣಿವೆಯ ರಾಜಕೀಯ ಕಾರ್ಯಕರ್ತರ ಮೇಲೆ ಅತಿಕ್ರಮಗಳು ನಡೆಯುತ್ತಿವೆ. ಜೂನ್, ಜುಲೈ ತಿಂಗಳಲ್ಲಿ ನಡೆದ ದಾಳಿಯಲ್ಲಿ ಬಿಜೆಪಿ ನಾಯಕ ವಸೀಂ ಬಾರಿ, ಕಾಂಗ್ರೆಸ್ ಸರಪಂಚ್ ಅಜಯ್ ಪಂಡಿತ್ ಮೃತಪಟ್ಟಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.