ಭಾರತದ ಜಿಡಿಪಿ ದರ ಹೆಚ್ಚಿಸಿ ತೋರಿಸಲಾಯಿತು- ಪ್ರಧಾನಿ ಮೋದಿಗೆ ಮುಜುಗರ ತಂದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ

0
1058

ಹೊಸದಿಲ್ಲಿ, ಜೂ. 12: ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಹೆಚ್ಚಿಸಿ ತೋರಿಸಲಾಯಿತು ಎಂದು ಪ್ರಧಾನಿ ಮೋದಿಯವರ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ ಆರೋಪಿಸಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಬರೆದ ಲೇಖನದಲ್ಲಿ ಅರವಿಂದ್ ಸುಬ್ರಹ್ಮಣ್ಯಂ ಯುಪಿಎ, ಎನ್‍ಡಿಎ ಸರಕಾರಗಳ ಬೆಳವಣಿಗೆ ದರವನ್ನು ಹೆಚ್ಚಿಸಿ ತೋರಿಸಲಾಗಿತ್ತು ಎಂದು ಹೇಳಿದ್ದಾರೆ. 2011-12 ವರ್ಷದಲ್ಲಿ, 2016-2017 ವರ್ಷದಲ್ಲಿ ಜಿಡಿಪಿ ದರದ ಲೆಕ್ಕದಲ್ಲಿ ಲೋಪವಾಗಿತ್ತು. ಈ ವರ್ಷಗಳಲ್ಲಿ ಶೇ 7 ಬೆಳವಣಿಗೆ ದರ ಇತ್ತು ಎಂದು ಹೇಳಲಾಗುತ್ತಿತ್ತು. ಆದರೆ ಆಗ ಶೇ. 4.5 ಬೆಳವಣಿಗೆ ದರಮಾತ್ರ ಇತ್ತು ಎಂದು ಅವರು ಸ್ಪಷ್ಟಪಡಿಸಿದರು. ನಿರ್ಮಾಣ ಕ್ಷೇತ್ರದಲ್ಲಿ ಶೇ. 15ರಿಂದ ಶೇ.17ರಷ್ಟು ಬೆಳವಣಿಗೆ ಮಾತ್ರ ಆಗಿತ್ತು. ಆದರೆ ಬೆಳವಣಿಗೆ ದರವನ್ನು ಹೆಚ್ಚಿಸಿ ತೋರಿಸಿದ್ದು ರಾಜಕೀಯ ತೀರ್ಮಾನವಾಗಿರಲಿಲ್ಲ. ಎರಡನೆ ಯುಪಿಎ ಕಾಲದಲ್ಲಿ ಅಧಿಕಾರಿಗಳು ಜಿಡಿಪಿ ಹೆಚ್ಚಿಸಿ ತೋರಿಸಿದ್ದರು. ಆಗ ಸರಿಯಾದ ರೀತಿಯಲ್ಲಿ ಜಿಡಿಪಿ ಲೆಕ್ಕ ಹಾಕಿದ್ದರೆ ಬ್ಯಾಂಕಿಂಗ್, ಕೃಷಿ ಕ್ಷೇತ್ರದಲ್ಲಿ ಸರಿಯಾದ ವ್ಯವಸ್ಥೆ ಮಾಡಬಹುದಾಗಿತ್ತು ಎಂದು ಅವರು ತಿಳಿಸಿದ್ದಾರೆ.