ಶ್ರೀಲಂಕ ಸರಣಿ ಸ್ಫೋಟ: ಕೋಯಮತ್ತೂರಿನಲ್ಲಿ ಎಂಟು ಕಡೆ ಎನ್‍ಐಎ ದಾಳಿ, ಹಲವರ ವಿಚಾರಣೆ

0
684

ಕೋಯಮತ್ತೂರ್, ಜೂ. 12: ಶ್ರೀಲಂಕ ಸ್ಫೋಟಕ್ಕೆ ಸಂಬಂಧಿಸಿ ಎನ್‍ಐಎಯ ವಿಶೇಷ ತಂಡ ಕೊಯಮತ್ತೂರಿನಲ್ಲಿ ದಾಳಿ ನಡೆಸುತ್ತಿದ್ದು ಕೋಯಮತ್ತೂರ್, ಉಕ್ಕಡಂ, ಅಬೂನಗರ್, ಕುಣಿಯಮುತ್ತೂರ್ ಗಳಲ್ಲಿ ಕೊಚ್ಚಿ,ಕೋಯಮತ್ತೂರ್ ವಿಭಾಗಗಳು ಜಂಟಿಯಾಗಿ ದಾಳಿ ನಡೆಸಿವೆ. ಕೋಯಮತ್ತೂರಿನ ಎಂಟು ಮಂದಿಯ ಮನೆಗಳಿಗೆ, ವ್ಯಾಪಾರಿ ಸಂಸ್ಥೆಗಳಲ್ಲಿ ತಪಾಸಣೆ ನಡೆಯುತ್ತಿದೆ. ಶ್ರೀಲಂಕ ಸರಣಿ ಸ್ಫೋಟಕ್ಕೆ ಸಂಬಂಧಿಸಿ ಜನರ ಫೇಸ್‍ಬುಕ್ ಪೋಸ್ಟ್ ಗಳನ್ನು ಶೇರ್ ಮಾಡಿ ಅವರೊಂದಿಗೆ ಚರ್ಚಿಸಿದವರ ಮನೆಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಾತ್ರವಲ್ಲ, ಸ್ಫೋಟಕ್ಕೆ ಸಂಬಂಧಿಸಿದವರನ್ನು ಕೋಯಮತ್ತೂರ್ ನಗರ ಆಯುಕ್ತರ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.