ಜಿಡಿಪಿ‌ ದರ: ಇಂಡೋನೇಶಿಯ, ಫಿಲಿಪ್ಪೀನ್ಸ್‌ಗಿಂತಲೂ ಹಿಂದುಳಿದ ಭಾರತ!

0
1832

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.31: ಆರ್ಥಿಕ ವರ್ಷದ ಮೊದಲ ಹಂತದ ಜಿಡಿಪಿ ದರದ ಲೆಕ್ಕದಲ್ಲಿ ಇಂಡೋನೇಶಿಯ, ಫಿಲಿಪ್ಪೀನ್ಸ್‌ಗಿಂತ ಭಾರತವು ಹಿಂದುಳಿದಿದೆ. ಚೀನಾದ ಆರ್ಥಿಕ ಬೆಳವಣಿಗೆ ದರ ಭಾರತಕ್ಕಿಂತ ಉತ್ತಮವಾಗಿದೆ. ನಿರ್ಮಾಣ ಕ್ಷೇತ್ರದಲ್ಲಿ ಕೇವಲ 0.6 ಶೇಕಡ ಬೆಳವಣಿಗೆ ಮಾತ್ರ ಆಗಿದೆ. ದೇಶದ ಬಳಕೆ ಹೂಡಿಕೆಯ ಪ್ರಮಾಣ ಕಡಿಮೆ ಆಗಿದೆ. ಗಣಿಗಾರಿಕೆ, ಇಂಧನ ಕ್ಷೇತ್ರ ಹೊರತು ಪಡಿಸಿ ಇತರ ಕ್ಷೇತ್ರಗಳಲ್ಲಿ ಕಠಿಣ ಮಾಂದ್ಯವಿದೆ. ಕೃಷಿ, ನಿರ್ಮಾಣ ಕ್ಷೇತ್ರ ಶಿಥಿಲತೆ ಎದುರಿಸುತ್ತಿದೆ. ಪರಿಸ್ಥಿತಿಯನ್ನು ಮೀರಿಸಲು ವಿತ್ತ ಸಚಿವೆ ಘೋಷಿಸಿದ ವಿನಾಯಿತಿಯಿಂದ ಸಾಧ್ಯವಿಲ್ಲ ಎಂದು ಅರ್ಥ ತಜ್ಞರು ಹೇಳುತ್ತಿದ್ದಾರೆ. ಬಳಕೆ ಹೆಚ್ಚಿಸಲು ಸಾಲದ ಬಡ್ಡಿ ದರವನ್ನು ರಿಸರ್ವ ಬ್ಯಾಂಕ್ ಕಡಿತಗೊಳಿಸಿದರೂ ಈ ವಿಷಯದಲ್ಲಿ ಪ್ರಗತಿಯಾಗಿಲ್ಲ. ಅರ್ಥವ್ಯವಸ್ಥೆಯ ವಿನಾಯಿತಿ ಕೈಬಿಟ್ಟು ಸಮಗ್ರ ಉತ್ತೇಜಕ ಪ್ಯಾಕೇಜ್ ಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ.