ಸನ್ಮಾರ್ಗ ವಾರ್ತೆ
ಲಕ್ನೊ: ದೇಶದಲ್ಲಿ ಕೊರೋನ ಹರಡುವ ತೀವ್ರತೆಯನ್ನು ಮನಗಂಡು ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ರ್ಯಾಲಿಗಳನ್ನು ರದ್ದು ಪಡಿಸಿವೆ. ರ್ಯಾಲಿಗೆ ಜನರು ಸೇರುವುದರಿಂದ ಕೊರೋನ ತೀವ್ರವಾಗಿ ಹರಡುವುದಕ್ಕೆ ಕಾರಣವಾಗಬಹುದೆಂದು ಎಚ್ಚರಿಕೆ ಬಂದ ನಂತರ ಪಕ್ಷಗಳು ಈ ರೀತಿ ತೀರ್ಮಾನಿಸಿವೆ. ರಾಜ್ಯದ ಪರಿಸ್ಥಿತಿ ನಿರೀಕ್ಷಿಸಿ ಪೂರ್ವಭಾವಿಯಾಗಿ ನಿಗದಿಗೊಂಡ ಕಾರ್ಯಕ್ರಮಗಳನ್ನು ನಡೆಸಿದರೆ ಸಾಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪಕ್ಷದ ನಿರ್ಧಾರವನ್ನು ತಿಳಿಸಿದರು.
ಉತ್ತರಪ್ರದೇಶ ಮತ್ತು ಚುನಾವಣೆ ನಡೆಯುವ ಇತರ ರಾಜ್ಯಗಳಲ್ಲಿಯೂ ರ್ಯಾಲಿಗಳನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದರು. ಮೂರನೇ ಅಲೆಯ ಸಾಧ್ಯತೆಯ ಕುರಿತು ಚುನಾವಣಾ ಆಯೋಗ ಕಾಂಗ್ರೆಸ್ಗೆ ಪತ್ರ ಬರೆದಿತ್ತು. ಬಿಜೆಪಿ ಕೂಡ ದೊಡ್ಡ ರ್ಯಾಲಿಗಳನ್ನು ರದ್ದುಪಡಿಸಿತು. ಗೌತಮ್ ಬುದ್ಧ ನಗರದಲ್ಲಿ ನಡೆಯಬೇಕಾಗಿದ್ದ ಸರಕಾರಿ ಕಾರ್ಯಕ್ರಮವನ್ನು ಯೋಗಿ ಆದಿತ್ಯನಾಥ್ ಸರಕಾರ ರದ್ದುಪಡಿಸಿತು. ಇಲ್ಲಿ ಒಂದು ವಾರದಿಂದ ಕೊರೋನ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಕಳೆದ ದಿವಸ ಕಾಂಗ್ರೆಸ್ ಆಯೋಜಿಸಿದ್ದ ಬರೇಲಿಯ ಹೆಣ್ಣುಮಕ್ಕಳ ರ್ಯಾಲಿಯಲ್ಲಿ ಮಾಸ್ಕ್ ಧರಿಸದೆ ನೂರಾರು ಹೆಣ್ಣು ಮಕ್ಕಳು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿತ್ತು.












