ಗೋಡ್ಸೆ ಮಂದಿರ ತಡೆಯಲು ಕಾನೂನು ನಿರ್ಮಿಸಬೇಕು- ಎ.ಕೆ.ಆಂಟನಿ

0
666

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಅ.2: ದೇಶದಲ್ಲಿ ಹಲವು ಕಡೆ ಗೋಡ್ಸೆ ಮಂದಿರಗಳು ವ್ಯಾಪಿಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯ ಎ.ಕೆ.ಆಂಟನಿ ಹೇಳಿದರು. ಗೋಡ್ಸೆ ಮಂದಿರ ಕಟ್ಟದಂತೆ ತಡೆಯಲು ಕಾನೂನು ರಚಿಸಬೇಕು. ಕೇಂದ್ರ ಸರಕಾರ ಗೋಡ್ಸೆಯ ಆದರ್ಶ ಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಗಾಂಧಿಯ ಭಾರತ ಇಂದೆಲ್ಲಿ ಹೋಗಿ ನಿಂತಿದೆ. ಒಡೆದು ಆಳುವ ಬ್ರಿಟಿಷ್ ತಂತ್ರ ದೇಶದ ಆಡಳಿತಗಾರರು ಜಾರಿಗೆ ತರುತ್ತಿದ್ದಾರೆ. ದೇಶ ಆಳುವವರು ಎಲ್ಲ ಕ್ಷೇತ್ರದಲ್ಲಿ ಸೋತು ಸುಣ್ಣವಾ ಗಿದ್ದಾರೆ. ಭಾರತವನ್ನು ದಮನಿಸಿ ಒಂದು ಮಾಡಲು ಯತ್ನಿಸುತ್ತಿದ್ದಾರೆ. ಬಹುತ್ವ ಮತ್ತು ಜಾತ್ಯತೀತತೆ ನಾಶವಾದರೆ ದೇಶವೂ ಪತನವಾಗಬಹುದು ಎಂದು ಆಂಟನಿ ಹೇಳಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯ 150ನೆ ಜನ್ಮದಿನಕ್ಕೆ ಸಂಬಂಧಿಸಿ ತಿರುವನಂತಪುರಂನಲ್ಲಿ ಕೆಪಿಸಿಸಿ ಆಯೋಜಿಸಿದ ಪಾದಯಾತ್ರೆಯಲ್ಲಿ ಅವರು ಮಾತಾಡುತ್ತಿದ್ದರು. ಯುನಿವರ್ಸಿಟಿ ಸ್ಟೇಡಿಯಂನ ಸುಭಾಶ್ ಚಂದ್ರ ಬೋಸ್ ಪ್ರತಿಮೆಯ ಮುಂದೆ ಆರಂಭವಾದ ಪಾದಯಾತ್ರೆ ಗಾಂಧಿ ಪಾರ್ಕಿನಲ್ಲಿ ಸಮಾಪನೆಗೊಂಡಿತು. ಆಂಟನಿ ಪಾದಯಾತ್ರೆಗೆ ಮುಂದಾಳುತ್ವ ನೀಡಿದರು.