ದಲಿತ ಬಾಲಕಿಯರ ಮೇಲೆ ಆಸಿಡ್ ದಾಳಿ: ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

0
450

ಸನ್ಮಾರ್ಗ ವಾರ್ತೆ

ಲಕ್ನೊ,ಅ.14: ಉತ್ತರ ಪ್ರದೇಶದಲ್ಲಿ  ದಲಿತ ಬಾಲಕಿಯರ ಮೇಲೆ ಆಸಿಡ್ ಎರಚಿದ ಘಟನೆಯಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂದಿನಂತೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಹೇಳಿದ್ದಾರೆ.

ಹಾಥ್ರಸ್‍ನ ಬಾಲಕಿಯ ಅತ್ಯಾಚಾರ ಹತ್ಯೆಯ ನಂತರ ಪ್ರತಿದಿನಾಲೂ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಬಹಿರಂಗವಾಗುತ್ತಲೇ ಇದೆ. ಮುಖ್ಯಮಂತ್ರಿ ಎಂದಿನಂತೆ ಕಠಿಣ ಕ್ರಮ ಜರಗಿಸುವ ಮಾತು ಹೇಳುತ್ತಲೇ ಬಂದಿದ್ದಾರೆ. ಆದರೂ ಅಕ್ರಮಾಸಕ್ತ ಘಟನೆಗಳು ಮುಂದುವರಿಯುತ್ತಲೇ ಇದೆ ಎಂಬುದಾಗಿ ವರದಿಯಾಗಿದೆ.

ಉತ್ತರ ಪ್ರದೇಶದ ಗೊಂಡನಗರದಲ್ಲಿ ಅಪ್ರಾಪ್ತ ಮೂವರು ದಲಿತ ಸಹೋದರಿಯರ ಮೇಲೆ ಏಸಿಡ್ ಎರಚಲಾಗಿದೆ. ಮನೆಯಲ್ಲಿ ಅವರು ನಿದ್ರಿಸುತ್ತಿದ್ದ ವೇಳೆ 8, 12, 17 ವರ್ಷದ ಮೂವರು ದಲಿತ ಬಾಲಕಿಯರ ಮೇಲೆ ದಾಳಿಯಾಗಿದ್ದು ಹದಿನೇಳು ವರ್ಷದ ಬಾಲಕಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿವೆ. 12 ವರ್ಷದ ಬಾಲಕಿಗೆ ಶೇ.25ರಷ್ಟು ಸುಟ್ಟ ಗಾಯಗಳಾಗಿವೆ. ಎಂಟು ವರ್ಷದ ಬಾಲಕಿಗೆ ಶೇ.5ರಷ್ಟು ಗಾಯಗಳಾಗಿವೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರ ವಿರುದ್ಧ ದೌರ್ಜನ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಸರಕಾರದ ಕ್ರಮ ಇಂತಹ ದಾಳಿಗಳಿಗೆ ಪ್ರಚೋದನೆಯಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

ದಲಿತರ ವಿರುದ್ಧ ಅತೀ ಹೆಚ್ಚು ದೌರ್ಜನ್ಯಗಳು ನಡೆಯುತ್ತಿರುವ ರಾಜ್ಯ ಉತ್ತರ ಪ್ರದೇಶವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ತಿಳಿಸಿವೆ. ಕ್ರೈಂ ಬ್ಯೂರೊ ವರದಿಯ ಪ್ರಕಾರ 2019ರಲ್ಲಿ ದಲಿತರ ವಿರುದ್ಧ 45,935 ದಾಳಿಗಳು ನಡೆದಿವೆ. ಇವುಗಳಲಿ 11,829 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.