‘ಆಗಸ್ಟ್ ಐದರ ಅಪಮಾನ ಮರೆಯಲು ಸಾಧ್ಯವಿಲ್ಲ’- ಮೆಹಬೂಬ ಮುಫ್ತಿ

0
383

ಸನ್ಮಾರ್ಗ ವಾರ್ತೆ

ಶ್ರೀನಗರ,ಅ.14: ಒಂದು ವರ್ಷದ ಜೈಲುವಾಸದ ಬಳಿಕ ಹೊರಬಂದಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯ ಮೊದಲ ಪ್ರತಿಕ್ರಿಯೆ ಹೊರಬಂದಿದೆ. ಆಗಸ್ಟ್ ಐದರ ಅಪಮಾನವು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕಾನೂನು ಬಾಹಿರವಾಗಿ ಆರ್ಟಿಕಲ್ 370 ರದ್ದು ಪಡಿಸಲಾಗಿದೆ ಎಂದು ಮುಫ್ತಿ ಹೇಳಿದರು. ಸಾರ್ವಜನಿಕ ಸುರಕ್ಷಾ ಕಾನೂನಿನ ಪ್ರಕಾರ ಜೈಲುಪಾಲಾಗಿದ್ದ ಮುಫ್ತಿಯವರನ್ನು ಮಂಗಳವಾರ ರಾತ್ರೆ ಬಿಡುಗಡೆಗೊಳಿಸಲಾಗಿತ್ತು.

ನಮ್ಮಿಂದ ಅನಧಿಕೃತವಾಗಿ ಕಿತ್ತುಕೊಂಡಿರುವುದನ್ನು (ಆರ್ಟಿಕಲ್ 370) ವಾಪಸು ಕೊಡಬೇಕು. ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಸರಕಾರ ವರ್ತಿಸಿದೆ. ಕಾಶ್ಮೀರದ ಸಮಸ್ಯೆ ಪರಿಹಾರದ ಹೋರಾಟದಲ್ಲಿ ಹಲವಾರು ಮಂದಿ ಜೀವಕಳಕೊಂಡಿದ್ದಾರೆ. ದಾರಿ ಬಹಳ ಸುಲಭವಾದುದಲ್ಲವೆಂದು ನನಗೆ ಗೊತ್ತಿದೆ. ಇನ್ನೂ ಹೋರಾಟ ಮುಂದುವರಿಸಬೇಕಾಗಿದೆ. ಇಂದು ನಾನು ಸ್ವತಂತ್ರಗೊಂಡೆ. ಇದರಂತೆ ಹಲವು ಮಂದಿಯನ್ನು ಅನಧಿಕೃತವಾಗಿ ಬಂಧಿಸಿಡಲಾಗಿದೆ ಅವರನ್ನು ಬಿಡುಗಡೆಗೊಳಿಸಬೇಕೆಂದು ಮೆಹಬೂಬ ಆಗ್ರಹಿಸಿದರು.

ಸಂವಿಧಾನದ ವಿಶೇಷ ವಿಧಿಯನ್ನು ರದ್ದುಪಡಿಸಿದ ಬಳಿಕ ಮೆಹಬೂಬ ಮುಫ್ತಿಯವರ ಸಹಿತ ಅನೇಕ ನಾಯಕರನ್ನು ಕಾಶ್ಮೀರದಲ್ಲಿ ಜೈಲಿನಲ್ಲಿಡಲಾಗಿದೆ. ಮೆಹಬೂಬರನ್ನು ಬಂಧಿಸಿಟ್ಟು 14 ತಿಂಗಳು ಸಂದಿದ್ದು ಕೋರ್ಟು ಮಧ್ಯಪ್ರವೇಶಿಸಿತ್ತು.