ಸೆಗಣಿ ಚಿಪ್, ಗಾಳಿಯಂತ್ರ, ಗೋ ಕೊರೋನ ಗೋ: ಈ ವಿಜ್ಞಾನಿಗಳೆಲ್ಲ ಸೇರಿ ನಮ್ಮನ್ನು ಹಳೆಯ ಕಾಲಕ್ಕೊಯ್ಯುತ್ತಾರೆ- ಪ್ರಶಾಂತ್ ಭೂಷಣ್

0
714

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.14: ದನದ ಸೆಗಣಿಯಿಂದ ರೆಡಿಯೇಶನ್ ತಡೆಯಬಹುದು. ಸೆಗಣಿ ಚಿಪ್ ಮೊಬೈಲ್ ರೆಡಿಯೇಶನ್ ಕಡಿಮೆ ಮಾಡಬಹುದು ಎಂದು ಹೇಳಿದ ರಾಷ್ಟ್ರೀಯ ಕಾಮಧೇನು ಆಯೋಗ್ ಮುಖ್ಯಸ್ಥ ವಲ್ಲಭಾಯ್ ಮತ್ತು ಕೇಂದ್ರ ಸರಕಾರದ ಕುರಿತು ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಪ್ರಶಾಂತ್ ಭೂಷಣ್ ವ್ಯಂಗ್ಯವಾಡಿದ್ದಾರೆ.

ಇದು ಕೇಂದ್ರ ಸರಕಾರದ ಸೆಗಣಿ ಸೈನ್ಸ್, ತಂತ್ರಜ್ಞಾನ ಎಂದು ವಲ್ಲಭಾಯ್‍ರ ವೀಡಿಯೊವನ್ನು ಪೋಸ್ಟ್ ಮಾಡಿ ಅವರು ಹೇಳಿದ್ದಾರೆ. ಪ್ರಧಾನ ವಿಜ್ಞಾನಿಗಳು ಗಾಳಿಯಂತ್ರ ಉಪಯೋಗಿಸಿ ನೀರು ಮತ್ತು ಆಕ್ಸಿಜನ್ ಅನ್ನು ಬೇರ್ಪಡಿಸುತ್ತಾರೆ. ಇತರ ಅನುಯಾಯಿಗಳು ಹಪ್ಪಳ ತಿನ್ನುತ್ತಾ ಗೋ ಕೊರೋನ ಗೋ ಎಂದು ಕೂಗಿ ಕೊರೋನವನ್ನು ನಿರ್ಮೂಲಿಸುತ್ತಾರೆ. ಇವೆಲ್ಲ ನಮ್ಮನ್ನು ಮಧ್ಯಯುಗಕ್ಕೆ ಕೊಂಡು ಹೋಗಲಿದೆ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಗಾಳಿಯಂತ್ರದಿಂದ ನೀರು ಮತ್ತು ಆಕ್ಸಿಜನ್ ವಿಭಜಿಸಬಹುದೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಹೆಚ್ಚು ಅಪಹಾಸ್ಯಕ್ಕೊಳಗಾಗಿತ್ತು. ಹಪ್ಪಳ ತಿಂದು ಕೊರೋನವನ್ನು ದೂರಮಾಡಬಹುದೆಂದು ಗೋ ಕೊರೋನ ಗೋ ಎಂದು ಕರೆದು ವೈರಸನ್ನು ದೂರವಿಡಬಹುದು ಎಂದು ಬಿಜೆಪಿ ನಾಯಕರು ಹೇಳಿದ್ದು ಹೆಚ್ಚು ಟೀಕೆಗೆ ತುತ್ತಾಗಿತ್ತು.