ಗೂಗಲ್ನ ವೀಡಿಯೊ ಶೇರಿಂಗ್ ಸೈಟ್ ಯೂಟ್ಯೂಬ್ನಲ್ಲಿದ್ದ ದ್ವೇಷ ಹರಡುವ ವೀಡಿಯೊಗಳನ್ನು ತೆಗೆದು ಹಾಕುವ ಕೆಲಸ ಮಾಡುತ್ತಿದೆ. ಈಗಾಗಲೇ 90 ಲಕ್ಷಕ್ಕೂ ಹೆಚ್ಚು ವೀಡಿಯೊವನ್ನು ತೆರವು ಗೊಳಿಸಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸೋಮವಾರ ತಿಳಿಸಿದರು. ಝೀ ನ್ಯೂಸ್ ವರದಿಯ ಪ್ರಕಾರ ಅಪಾಯಕಾರಿ ವೀಡಿಯೊಗಳನ್ನು ತಡೆಯುವ ಉದ್ದೇಶದಿಂದ ಈ ಕಾರ್ಯವನ್ನು ಗೂಗಲ್ ಮಾಡುತ್ತಿದೆ ಎಂದು ಸಿಎನ್ಎನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶೇ.85ರಷ್ಟು ಮಂದಿ ಯುಟ್ಯೂಬನ್ನು ಮೊಬೈಲ್ ಫೋನ್ನಲ್ಲಿ ನೋಡುತ್ತಾರೆ. ಕಳೆದ ವರ್ಷ ಶೇ.73ರಷ್ಟು ಮಂದಿ ಮೊಬೈಲ್ನಲ್ಲಿ ಯುಟ್ಯೂಬನ್ನು ನೋಡಿದ್ದರು. ಜನವರಿ 2019 ಅಂಕಿ ಸಂಖ್ಯೆ ಪ್ರಕಾರ ಭಾರತದಲ್ಲಿ 26.5 ಕೋಟಿ ಜನರು ತಿಂಗಳೊಂದರಲ್ಲಿ ಯುಟ್ಯೂಬ್ ಬಳಕೆ ಮಾಡುತ್ತಾರೆ. ಕಳೆದ ವರ್ಷ 22.5 ಕೋಟ ಜನರು ಯುಟ್ಯೂಬ್ ನೋಡಿದ್ದರು. ಯುಟ್ಯೂಬ್ ಭಾರತಕ್ಕೆ ಬಂದು ಹನ್ನೊಂದು ವರ್ಷ ಆಗಿದೆ. ಯುಟ್ಯೂಬ್ ವಾರ್ಷಿಕ ಕಾರ್ಯಕ್ರಮ ಬ್ರಾಡ್ಕಾಸ್ಟ್ ಇಂಡಿಯವನ್ನು ಉದ್ದೇಶಿಸಿ ಯುಟ್ಯೂಬ್ ಅಂತಾರಾಷ್ಟ್ರೀಯ ಮುಖ್ಯಸ್ಥ ಸಜೇನ್ ವೊಜಾಸಿಕಿ ಯುಟ್ಯೂಬ್ಗೆ ತಿಂಗಳೊಂದರಲ್ಲಿ 26.5 ಕೋಟಿ ಮಾಸಿಕ ಬಳಕೆದಾರರಿದ್ದಾರೆ ಎಂದು ತಿಳಿಸಿದ್ದಾರೆ. ಭಾರತ ಜಗತ್ತಿನಲ್ಲಿ ತ್ವರಿತವಾಗಿ ಬೆಳವಣಿಗೆಗೊಂಡ ಮಾರುಕಟ್ಟೆಗಳಲ್ಲಿ ಒಂದು. ಮನೋರಂಜನೆಗೆ ನಮ್ಮ ಕಂಟೆಂಟ್ ಬಳಕೆಯಾಗುವ ದೊಡ್ಡ ವೇದಿಕೆಯಾಗಿದೆ ಎಂದು ಹೇಳಿದ್ದಾರೆ.












