ನಾಂದೆಡ್, ಜೂ. 20: ಜವಾಹರಲಾಲ್ ನೆಹರೂ ಮತ್ತು ಇಂದಿರಾಗಾಂಧಿ ಜನರಿಗೆ ಗೊತ್ತಾಗದ ರೀತಿಯಲ್ಲಿ ಯೋಗ ಮಾಡುತ್ತಿದ್ದರು. ಆದರೆ ಅವರ ವಂಶದವರು ಯೋಗವನ್ನು ಗೌರವಸಲಿಲ್ಲ. ಆದ್ದರಿಂದ ಅವರು ಅಧಿಕಾರ ಕಳಕೊಂಡರು. ಯಾಕೆಂದರೆ ಯೋಗ ಮಾಡಿದರೆ ದೇವರು ಸದಾ ಆಶೀರ್ವದಿಸುತ್ತಾನೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ 370ನೇ ವಿಧಿ, ಮುತ್ತಲಾಕ್ ವಿಷಯದಲ್ಲಿ ದೊಡ್ಡ ಕೆಲಸ ಮಾಡಲಿದ್ದಾರೆ ಎಂದು ಈ ಸಂದರ್ಭದಲ್ಲಿ ರಾಮ್ ದೇವ್ ಭರವಸೆ ವ್ಯಕ್ತಪಡಿಸಿದರು. ಜೂನ್ 21ರ ವಿಶ್ವಯೋಗ ದಿವಸದಂದು ಮಹಾರಾಷ್ಟ್ರದ ನಾದೆಂಡ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮೋದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಭಾಗವಹಿಸುತ್ತಾರೆ. ಮೋದಿ ಜನರ ನಡುವೆ ಹೋಗಿ ಯೋಗ ಮಾಡುತ್ತಿರುವ ಮೊದಲ ಪ್ರಧಾನಿಯಾಗಿದ್ದಾರೆ. ಬಿಜೆಪಿಯ ಎಲ್ಲ ಕೇಂದ್ರ ಸಚಿವರು, ಮುಖ್ಯಮಂತ್ರಿ, ಸಂಸದರು ಮತ್ತು ಶಾಸಕರು ಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.












