ಅರ್ನಬ್ ವಾಟ್ಸಪ್ ಚ್ಯಾಟ್‍ಗಳ ಕುರಿತು ಸರಕಾರ ಮಾತಾಡುವುದಿಲ್ಲ: ಸೋನಿಯ ಗಾಂಧಿ

0
684

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಾಲಕೋಟ್ ದಾಳಿಯ ಕುರಿತು ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಗೆ ಮೊದಲೇ ಗೊತ್ತಿತ್ತು ಎಂಬ ಸಾಕ್ಷ್ಯವಿರುವ ವಾಟ್ಸಪ್ ಚಾಟ್‍ಗಳು ಸೋರಿಕೆಯಾದ ಘಟನೆಯಲ್ಲಿ ಸರಕಾರ ಮೌನವಹಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು. ದೇಶ ಸುರಕ್ಷೆಯ ವಿಷಯದಲ್ಲಿ ಸರಕಾರ ದೊಡ್ಡ ಲೋಪವೆಸಗುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು.

ಕಾಂಗ್ರೆಸ್ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ರೈತರ ಹೋರಾಟಕ್ಕೆ ಸಂಬಂಧಿಸಿದ ವಿಷಯದಲ್ಲಿ ಕೇಂದ್ರ ಸರಕಾರದ ನಿರ್ವಿಕಾರ ನಿಲುವುಗಳು ಬೆಚ್ಚಿಬೀಳುವಂತಿದೆ ಎಂದು ಸೋನಿಯಾ ಗಾಂಧಿ ಹೇಳಿದರು. ರಾಷ್ಟ್ರ ಭದ್ರತೆ ವಿಷಯದಲ್ಲಿ ಲೋಪವೆಸಗುವ ಅಸ್ವಾಸ್ಥ್ಯ ಜನಕ ಸುದ್ದಿಗಳು ಇತ್ತೀಚೆಗೆ ಕೇಳಿ ಬರುತ್ತಿದೆ. ಕೆಲವು ದಿವಸಗಳ ಹಿಂದೆ ಸೈನಿಕ ಕ್ರಮಗಳ ಅಧಿಕೃತ ರಹಸ್ಯಗಳು ಕೂಡ ಸೋರಿಕೆ ಮಾಡುವುದು ದೇಶದ್ರೋಹವಾಗಿದೆ ಎಂದು ಮಾಜಿ ರಕ್ಷಣ ಸಚಿವ ಎಕೆ ಆಂಟನಿ ಹೇಳಿದ್ದರು. ಆದರೂ ಈಗ ಬಹಿರಂಗವಾದ ವಿಷಯಗಳಲ್ಲಿ ಸರಕಾರ ಮೌನ ಪಾಲಿಸುತ್ತಿದೆ ಎಂದು ಸೋನಿಯ ಗಾಂಧಿ ವರ್ಚುವಲ್ ಭಾಷಣದಲ್ಲಿ ಹೇಳಿದರು.

ದೇಶಪ್ರೇಮ, ರಾಷ್ಟ್ರೀಯತೆಯ ಸರ್ಟಿಫಿಕೆಟ್ ಕೊಡುವವರ ನಿಜ ಬಣ್ಣ ಬಹಿರಂಗವಾಗಿದೆ ಎಂದು ಸೋನಿಯ ಗಾಂಧಿ ಹೇಳಿದರು. ದಿಲ್ಲಿಯ ಗಡಿಯಲ್ಲಿ ಬೃಹತ್ ಪ್ರತಿಭಟನೆಗೆ ಕಾರಣವಾದ ಮೂರು ಕೃಷಿ ಕಾನೂನುಗಳನ್ನು ಗಡಿಬಿಡಿಯಲ್ಲಿ ತಯಾರಿಸಿದ್ದು ರೈತರ ಹೋರಾಟಕ್ಕೆ ಕಾರಣವೆಂದು ಹೇಳಿದರು.