ಸನ್ಮಾರ್ಗ ವಾರ್ತೆ
ಟೆಹ್ರಾನ್,ಜು.15: ಚಾಬಹಾರ್ ಬಂದರಿನಿಂದ ಅಫ್ಘಾನಿಸ್ತಾನ ಗಡಿಯಾದ ಸಹೆದಾನ್ವರೆಗೆ ನಿರ್ಮಿಸುವ ರೈಲು ಯೋಜನೆ ಒಪ್ಪಂದದಿಂದ ಭಾರತವನ್ನು ಇರಾನ್ ಹೊರಗಿಟ್ಟಿದೆ. 400 ದಶ ಲಕ್ಷ ಡಾಲರ್ ನಿರ್ಮಾಣ ಕಾಮಗಾರಿ ತನ್ನ ಸ್ವಯಂ ಹಣದಿಂದ ಮಾಡುವುದಾಗಿ ಇರಾನ್ ಘೋಷಣೆ ಮಾಡಿದೆ.
ಇರಾನ್ಗೆ ಚೀನ 400 ಬಿಲಿಯನ್ ಡಾಲರ್ ಸಹಾಯವನ್ನು 25 ವರ್ಷಕ್ಕೆ ಘೋಷಿಸಿದ ಬೆನ್ನಿಗೆ ಯೋಜನೆಯಿಂದ ಭಾರತವನ್ನು ಇರಾನ್ ಹೊರಗಿಟ್ಟಿದೆ. ನಾಲ್ಕು ವರ್ಷ ಮೊದಲು ಸಹಿ ಮಾಡಿದ ಪ್ರಕಾರ ನಿರ್ಮಾಣ ಕಾರ್ಯವನ್ನು ಮಾಡಿಲ್ಲ. ಫಂಡ್ ಕೊಟ್ಟಿಲ್ಲ ಇದಕ್ಕಾಗಿ ಒಪ್ಪಂದ ರದ್ದು ಪಡಿಸಲಾಗಿದೆ ಎಂದು ಇರಾನ್ ಹೇಳಿದೆ.
ಅಫ್ಘಾನಿಸ್ತಾನ ಮಧ್ಯ ಏಷ್ಯಾಕ್ಕೆ ಬದಲಿ ಸಂಚಾರ ಮಾರ್ಗ ಎಂಬ ಉದ್ದೇಶದಿಂದ ಆರಂಭಿಸಿದ್ದ ಯೋಜನೆ ಇದು.
2016ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇರಾನ್ ಸಂದರ್ಶನದ ವೇಳೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅಫ್ಘಾನಿಸ್ಥಾನದ ಅಧ್ಯಕ್ಷ ಅಬ್ದುಲ್ ಗನಿಯವರು ಕೂಡ ಒಪ್ಪಂದಕ್ಕೆ ಸಹಿಹಾಕಿದ್ದರು. ಇದು ತ್ರೀರಾಷ್ಟ್ರ ಒಪ್ಪಂದವಾಗಿತ್ತು. ಭಾರತದ ರೈಲ್ವೆ ಕನ್ಸ್ಟ್ರಕ್ಷನ್ ಲಿಮಿಟೆಡ್ ಇರ್ಕೋನ್ ಇರಲಾನಿನ ರೈಲ್ವೇಸ್ ಒಪ್ಪಂದಕ್ಕೆ ಸಹಿಹಾಕಿತ್ತು.
1.6 ಬಿಲಿಯನ್ ಡಾಲರ್ನ ಆರ್ಥಿಕ ವೆಚ್ಚ ಸಹಿತ ಎಲ್ಲ ವಿಷಯಗಳೂ ಇರ್ಕೋನ್ ವಹಿಸಿಕೊಂಡಿತ್ತು. ಹಲವು ಬಾರಿ ಭಾರತೀಯ ಇಂಜಿನಿಯರುಗಳು ಸ್ಥಳ ನೋಡಿ ಬಂದಿದ್ದರು. ಆದರೆ, ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. ಅಮೆರಿಕದ ದಿಗ್ಬಂಧನಕ್ಕೆ ಹೆದರಿ ಭಾರತದ ಯೋಜನೆ ನಿಧಾನಗತಿಯದ್ದೆಂಬ ಆಕ್ಷೇಪವೂ ಕೇಳಿಬಂದಿತ್ತು.
ಅಮೆರಿಕದ ದಿಗ್ಬಂಧನದ ಬೆದರಿಕೆಯಿಂದ ಇರಾನಿನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಭಾರತ ನಿಲ್ಲಿಸಿತು. ಇದೇ ವೇಳೆ, ಸಮಯ ಸಾಧಿಸಿ ಚೀನ ಬೃಹತ್ ಯೋಜನೆಯನ್ನು ಇರಾನ್ನಲ್ಲಿ ಆರಂಭಿಸುತ್ತಿದೆ. 25 ವರ್ಷದ ತಂತ್ರ ಪ್ರಧಾನ ಪಾಲುಗಾರಿಕೆ ಒಪ್ಪಂದ ಇದು. ಚಾಬಹಾರ್ ಡ್ಯೂಟಿ ಫ್ರೀ ಝೋನ್, ಆಯಿಲ್ ರಿಫೈನರಿ, ಚಾಬಹಾರ್ ಬಂದರಿನಲ್ಲಿ ಉಪಸ್ಥಿತಿ ಎಂಬುದು ಚೀನಕ್ಕೆ ಸಿಗಲಿದೆ. ಇದರ ಜೊತೆ ಇರಾನ್ನ ಮೂಲಭೂತ ಸೌಕರ್ಯ- ಸಾರಿಗೆ ಕ್ಷೇತ್ರದಲ್ಲಿ ಚೀನ ಭಾಗಿಯಾಗಲಿದೆ.
ಇದೇವೇಳೆ, ಭಾರತ ಹೆಚ್ಚು ನಿರೀಕ್ಷೆ ಇಟ್ಟಿದ್ದ ಚಾಬಹಾರ್ ಬಂದರು ಚೀನಕ್ಕೆ ಗುತ್ತೆಗೆ ನೀಡಲಾಗಿದೆ ಎಂಬ ವರದಿಗಳನ್ನು ಇರಾನಿನ ಅಧಿಕಾರಿಗಳು ನಿಷೇಧಿಸಿದ್ದಾರೆ. ಚೀನ ನಿಯಂತ್ರಿಸುವ ಪಾಕ್ ಬಂದರ್ ಬಂದರ್ ಇಜಾಸ್ಕ್ ಚಾಬಹಾರ್ ಬಂದರಿನ ಪಾಲುಗಾರಿಕೆಯಲ್ಲಿ ಸಹಮತ ಏರ್ಪಟ್ಟಿದೆ. ಅಮೆರಿಕದ ದಿಗ್ಬಂಧನದಿಂದ ಬಳಲುತ್ತಿರುವ ಇರಾನಿಗೆ ಚೀನದ ಪಾಲುದಾರಿಕೆ ದೊಡ್ಡ ಸಹಾಯವಾಗಲಿದೆ .ಇದೇ ವೇಳೆ, ಭಾರತಕ್ಕೆ ತಂತ್ರ ಪ್ರಧಾನ ಸ್ಥಳದಲ್ಲಿ ಪಾಲುದಾರಿಕೆ ನಷ್ಟವಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












