ಕಾಶ್ಮೀರವನ್ನು ವಿಭಜಿಸುವುದು ಭಾರತದ ಅಖಂಡತೆಗೆ ಹಾನಿಯೆನಿಸಬಹುದು- ರಾಹುಲ್ ಗಾಂಧಿ

0
531

ಹೊಸದಿಲ್ಲಿ, ಆ. 7: ಜಮ್ಮು ಕಾಶ್ಮೀರವನ್ನು ಏಕಪಕ್ಷೀಯವಾಗಿ ವಿಭಜಿಸುವುದು ದೇಶದ ಅಖಂಡತೆಗೆ ಹಾನಿಕಾರಕ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಶ್ಮೀರ ವಿಷಯದಲ್ಲಿ ರಾಹುಲ್ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

“ಜಮ್ಮು ಕಾಶ್ಮೀರವನ್ನು ಏಕಪಕ್ಷೀಯವಾಗಿ ತುಂಡು ಮಾಡುವುದು ದೇಶವನ್ನು ಒಗ್ಗೂಡಿಸುವುದಿಲ್ಲ. ಅಲ್ಲಿನ ಚುನಾಯಿತ ಜನಪ್ರತಿನಿಧಿಗಳನ್ನು ಬಂಧಿಸಿ ಜೈಲಿಗಟ್ಟುವುದು ಸಂವಿಧಾನದ ಉಲ್ಲಂಘನೆಯಾಗಿದೆ. ದೇಶವೆಂದರೆ ಇಲ್ಲಿಯ ಜನರು. ಕೇವಲ ಒಂದು ತುಂಡು ಭೂಮಿಯಲ್ಲ. ಈ ಅಧಿಕಾರ ದುರುಪಯೋಗ ದೇಶದ ಸುರಕ್ಷೆ ದೊಡ್ಡ ಆಘಾತಗಳನ್ನು ಹುಟ್ಟು ಹಾಕಬಹುದು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಜಮ್ಮುಕಾಶ್ಮೀರದ ಸಂವಿಧಾನ ನೀಡಿದ ಸ್ಥಾನಮಾನ 370ನೆ ವಿಧಿ ರದ್ದು ಪಡಿಸಿದ್ದು ಮತ್ತು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿದ್ದರ ವಿರುದ್ಧ ರಾಹುಲ್ ಗಾಂಧಿ ಈವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ಪ್ರತಿಭಟನೆಗೆ ಕಾರಣವೂ ಆಗಿತ್ತು.