ಸನ್ಮಾರ್ಗ ವಾರ್ತೆ
ಪಂಜಾಬ್ ಮೇ 1- ಏಪ್ರಿಲ್ 13ರಂದು ನಿಹಂಗ್ ವಾರಿಯರ್ಸ್ ಎಂಬ ಸಿಖ್ ರ ತಂಡವೊಂದರಿಂದ ಕೈ ಕತ್ತರಿಸಲ್ಪಟ್ಟು ಆಸ್ಪತ್ರೆ ಸೇರಿದ್ದ
ಪಂಜಾಬಿನ ಪಾಟಿಯಾಲದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹರ್ಜಿತ್ ಸಿಂಗ್ ಅವರು ನಿನ್ನೆ ಮನೆಗೆ ಮರಳಿದ್ದಾರೆ. ಊರವರು ಅವರನ್ನು ಸಡಗರದಿಂದ ಸ್ವಾಗತಿಸುವ ವಿಡಿಯೋ ವೈರಲ್ ಆಗಿದೆ.
ಏಪ್ರಿಲ್ 14ರಂದು ಅವರ ಕೈ ಕತ್ತರಿಸಲ್ಪಡುವ ಘಟನೆ ನಡೆದು ಪಂಜಾಬನ್ನು ಮಾತ್ರ ಅಲ್ಲ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪಟಿಯಾಲದ ತರಕಾರಿ ಮಾರುಕಟ್ಟೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಸಿಖ್ ರ ನಿಹಂಗ್ ವಾರಿಯರ್ಸ್ ಎಂಬ ಗುಂಪು ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಲ್ಲದೆ ಲಾಕ್ ಡೌನ್ ಅನ್ನು ಅನುಸರಿಸಲು ನಿರಾಕರಿಸಿತ್ತು. ಆ ಸಂದರ್ಭದಲ್ಲಿ ಆ ತಂಡ ಅವರ ಕೈಗಳನ್ನು ಕತ್ತರಿಸಿತ್ತು. ನೆಲಕ್ಕೆ ಬಿದ್ದು ಕೂಗುತ್ತಿದ್ದ ಸಬ್ಇನ್ಸ್ಪೆಕ್ಟರ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರಲ್ಲದೆ ಏಳೂವರೆ ಗಂಟೆಗಳ ಸತತ ಶಸ್ತ್ರ ಚಿಕಿತ್ಸೆಯ ಬಳಿಕ ಅವರ ಕೈಯನ್ನು ಮರು ಜೋಡಿಸಲಾಗಿತ್ತು. ಹಲ್ಲೆಗೈದ ತಂಡ ಆ ಬಳಿಕ ಸ್ಥಳೀಯ ಗುರುದ್ವಾರದೊಳಗೆ ಅವಿತುಕೊಂಡಿತ್ತು. ಮಹಿಳೆಯರು ಮತ್ತು ಮಕ್ಕಳೂ ಅದರಲ್ಲಿದ್ದರು. ಪೊಲೀಸರು ಗುರುದ್ವಾರದೊಳಗೆ ಕಾರ್ಯಾಚರಣೆಯನ್ನು ನಡೆಸಿ ಏಳು ಮಂದಿಯನ್ನು ಬಂಧಿಸಿದ್ದರು. ಇವರಲ್ಲಿ ಒಬ್ಬರಿಗೆ ಗುಂಡೇಟು ತಗುಲಿತ್ತು.
ಪಂಜಾಬ್ ನಲ್ಲಿ ದುಷ್ಕರ್ಮಿಗಳಿಂದ ಕೈ ಕತ್ತರಿಸಲ್ಪಟ್ಟು ಮರುಜೋಡಣೆಯ ಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಂಡ ಪೊಲೀಸ್ ಇನ್ಸ್ಪೆಕ್ಟರ್ ಹರಜೀತ್ ಸಿಂಗ್ ರನ್ನು ಮನೆಗೆ ಬರಮಾಡಿಕೊಂಡ ರೀತಿ.
Posted by Shrinivas Karkala on Thursday, April 30, 2020
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












