ಮುಸ್ಲಿಮರು ಜೀವನದಲ್ಲಿ ಒಂದು ಬಾರಿ ಮಾತ್ರ ಮಾಡುವ ಕಡ್ಡಾಯ ಕರ್ಮವಾಗಿದೆ ಹಜ್ಜ್. ಇಸ್ಲಾಮಿನ ಪರಿಪೂರ್ಣತೆಗೆ ಈ ಐದನೇ ಸ್ತಂಭ ಅನಿವಾರ್ಯವಾಗಿದೆ. ಹಿಂದಿನ ಕಾಲಕ್ಕಿಂತ ಈಗಿನ ಹಜ್ಜ್ ಪ್ರಯಾಣವು ಹೆಚ್ಚು ಸುಗಮವಾದ ಕಾರಣ ತಮ್ಮೊಂದಿಗೆ ಮಕ್ಕಳನ್ನೂ ಕರೆದುಕೊಂಡು ಹೋಗುವುದು ಈಗ ಸಾಮಾನ್ಯವಾಗಿದೆ. ಆಧ್ಯಾತ್ಮಿಕವಾದ ಮಾನಸಿಕ ಉತ್ತೇಜನ ನೀಡುವ ಪುಣ್ಯಕರ್ಮವೆಂಬ ನೆಲೆಯಲ್ಲಿ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಕೂಡಾ ಉತ್ತಮ ಕಾರ್ಯವೇ ಆಗಿದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳೆಸಲು ಇದು ಸಹಕಾರಿಯಾಗಿದೆ. ಆದರೆ ಜೊತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗು ವವರು ಕೆಲವು ವಿಚಾರಗಳನ್ನು ಗಮನಿಸಬೇಕಾಗಿದೆ.
ಹಜ್ಜ್ ಪ್ರಯಾಣದ ತೊಂದರೆಗಳನ್ನು ಗಮನದಲ್ಲಿರಿಸಿ ಮಕ್ಕಳನ್ನು ಕರೆದುಕೊಂಡು ಹೋಗಲು ಹಿಂಜರಿಯುವವರೂ ಸಮಾಜದಲ್ಲಿ ದ್ದಾರೆ. ಆದರೆ ಅವರ ನಿಲುವಿನಲ್ಲಿ ನನಗೆ ಸಹ ಮತವಿಲ್ಲ. ಅಂತಹ ಎಲ್ಲ ಸಮಸ್ಯೆಗಳನ್ನು ಗಮನವಿಟ್ಟು ಅಧ್ಯಯನ ಮಾಡಿ ಅದಕ್ಕೆ ಬೇಕಾದ ಪರಿಹಾರಗಳನ್ನು ಮೊದಲೇ ಕಂಡುಹಿಡಿದು ಪೂರ್ವ ತಯಾರಿಯೊಂದಿಗೆ ನಾವು ಮಕ್ಕಳನ್ನು ಕರೆದು ಕೊಂಡು ಹೋಗಲು ಪ್ರಯತ್ನಿಸಬೇಕು. ಉಳಿದ ಕಾರ್ಯಗಳು ಅಲ್ಲಾಹನ ಸಹಾಯದಿಂದ ಮುಂದೆ ಸಾಗುವುದು.
ಆದ್ದರಿಂದ ಈ ಕೆಳಗೆ ಸೂಚಿಸಿದ ಕೆಲ ನಿರ್ದೇಶನಗಳನ್ನು ಗಮನಿಸಿದರೆ ಮಕ್ಕಳೊಂದಿಗಿನ ನಿಮ್ಮ ಹಜ್ಜ್ ಪ್ರಯಾಣ ಸುಗಮವಾಗಿರುವುದು.
1. ಮಕ್ಕಳು ತಾವು ನೀಡುವ ಉಪದೇಶಗಳನ್ನು ಅರ್ಥೈಸಬಲ್ಲವರಾದರೆ ಹಜ್ಜ್ ಪ್ರಾಧಾನ್ಯತೆಯನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡಿರಿ. ಅದು ಮಕ್ಕಳಲ್ಲಿ ಹೆಚ್ಚು ಧಾರ್ಮಿಕ ಚೈತನ್ಯ, ಸ್ಫೂರ್ತಿ ಬೆಳೆಸಲು ಸಹಕಾರಿಯಾಗುತ್ತದೆ. ಮಕ್ಕಳ ಮ ನಸ್ಸು ಹೆಚ್ಚು ಈ ವಿಚಾರದಲ್ಲಿ ಅಧ್ಯಯನಶೀಲ ರಾಗಿಸಲು ಪ್ರಯತ್ನಿಸಿರಿ. ಹಜ್ಜ್ ಕರ್ಮದ ಉದ್ದೇಶ ಮತ್ತು ಅದರ ಘನತೆಯನ್ನು ಅವರಿಗೆ ಮನದಟ್ಟು ಮಾಡಬೇಕು.
2. ಸ್ವಲ್ಪ ತೆಳುವಾದ ನೂಲಿನ ಬಟ್ಟೆಯನ್ನು ಇಹ್ರಾಮಿಗೆ ಬಳಸಿರಿ. ಅಂದರೆ ಮಕ್ಕಳಿಗೆ ಬಿಸಿಲಿನ ತಾಪದ ತೀವ್ರತೆಯನ್ನು ಪ್ರತಿರೋಧಿಸಲು ಸಾಧ್ಯ ವಾಗುವಂತಹ ತೆಳು ಬಟ್ಟೆಯನ್ನುಪಯೋಗಿಸಬೇಕು. ಮಕ್ಕಳಿಗೆ ಮತ್ತೆ ಮತ್ತೆ ಬದಲಾಯಿಸಲು ಅನುವಾಗು ವಂತೆ ಹೆಚ್ಚು ಬಟ್ಟೆಗಳನ್ನು ತೆಗೆದುಕೊಳ್ಳಬೇಕು. ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗು ವವರು ಈ ಕುರಿತು ಹೆಚ್ಚು ಗಮನಹರಿಸಬೇಕು.
3. ನೀರು ಮತ್ತು ಇತರ ಪಾನೀಯಗಳನ್ನು ಜೊತೆಯಲ್ಲಿರಿಸಿಕೊಳ್ಳಿರಿ. ಹಜ್ಜ್ ಕರ್ಮದಲ್ಲಿ ನಿರತರಾಗಿರುವಾಗ ಬಿಸಿಲಿನ ತೀವ್ರತೆ ಹಾಗೂ ದಣಿವಿನ ಕಾರಣ ಹಠಾತ್ತನೆ ದೇಹದಲ್ಲಿ ನೀರಿನ ಅಂಶದ ಕೊರತೆಯ ಅಪಾಯ ಕಂಡು ಬರುವ ಸಾಧ್ಯತೆಯಿದೆ. ವಿಶೇಷವಾಗಿ ಮಕ್ಕಳಲ್ಲಿ ಈ ಸಾಧ್ಯತೆ ಕಂಡು ಬರದಂತೆ ಎಚ್ಚರ ವಹಿಸಬೇಕು. ಆದ್ದರಿಂದ ಶರೀರದಲ್ಲಿ ಜಲಾಂಶಗಳು ಸ್ಥಿರವಾಗಿರು ವಂತಿರಲು ನೀರು ಮತ್ತಿತರ ಪಾನೀಯಗಳನ್ನು ಜೊತೆಯಲ್ಲಿರಿಸಿಕೊಳ್ಳುವುದು ಉತ್ತಮ. ಅದು ಬಹಳ ಅಗತ್ಯವಾಗಿದೆ.
4. ಹರಮಿನ ಸುತ್ತಮುತ್ತಲೂ ಕಠಿಣ ಬಿಸಿಲಿನ ಪ್ರದೇಶವಾಗಿದೆ. ಈಗ ಹೆಚ್ಚಿನ ಸ್ಥಳಗಳಲ್ಲಿ ಹವಾನಿಯಂತ್ರಿತ ತಂಪಾದ ವ್ಯವಸ್ಥೆಗಳನ್ನು ಮಾಡಿ ದ್ದರೂ ಕೊಡೆಯ ತರಹದ ಬಿಸಿಲಿನ ತಾಪದಿಂದ ಮಕ್ಕಳನ್ನು ರಕ್ಷಿಸುವಂತಹ ಉಪಕರಣಗಳನ್ನು ಜೊತೆಯ ಲ್ಲಿರಿಸಿಕೊಳ್ಳಬೇಕು.
5. ರೋಗನಿರೋಧಕ ವಸ್ತುಗಳನ್ನು ಜೊತೆ ಯಲ್ಲಿರಿಸಿಕೊಳ್ಳಬೇಕು. ಮಕ್ಕಳಿಗೆ ಬರುವ ಸಾಮಾನ್ಯ ರೋಗಗಳಿಗೆ ಬೇಕಾಗುವ ಔಷಧಗಳನ್ನು ತೆಗೆದು ಕೊಂಡು ಪ್ರಾಥಮಿಕ ಸಿದ್ಧತೆಗಳನ್ನು ಮಾಡಿ ಕೊಂಡಿರಬೇಕು. ಅತ್ಯಗತ್ಯದ ಔಷಧಗಳನ್ನು ಪ್ರಾಥ ಮಿಕ ಉಪಕರಣಗಳನ್ನು ಜೊತೆಯಲ್ಲಿರಿಸಿಕೊಳ್ಳ ಬೇಕು. ಜ್ವರ, ಶೀತ, ತಲೆನೋವು ಮುಂತಾದ ರೋಗಗಳ ಮದ್ದುಗಳನ್ನೂ ಜೊತೆಯಲ್ಲಿರಿಸಿ ಕೊಳ್ಳಬೇಕು.
6 ಹರಮ್ನ ಸುತ್ತಮುತ್ತಲೂ ತೀವ್ರ ಜನ ಸಾಂದ್ರತೆಯಿರುವ ಕಾರಣ ಧೂಳುಗಳಿಂದ ಮತ್ತು ರಾತ್ರಿಯ ಮಂಜಿನಿಂದ ಕೆಮ್ಮು ಮುಂತಾದ ರೋಗಗಳು ಹಠಾತ್ತನೆ ಹರಡುವ ಸಾಧ್ಯತೆಯಿದೆ. ಅಲ್ಲಿ ಉಚಿತವಾಗಿ ದೊರೆಯುವ ಮದ್ದುಗಳ ಹೊರತಾಗಿಯೂ ಮನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಮದ್ದುಗಳೂ ಜೊತೆಯಲ್ಲಿರಲಿ.
7. ಅರಫಾದಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಮಕ್ಕಳನ್ನು ಜೊತೆಯಲ್ಲಿರಿಸಿಕೊಳ್ಳಿರಿ. ಹಜ್ಜ್ನ ಪ್ರತಿಯೊಂದು ಕಾರ್ಯದಲ್ಲಿಯೂ ಅವರಿಗೆ ನೆರವಾಗಿರಿ. ವಿಶೇಷವಾಗಿ ಅರಫಾದಲ್ಲಿರುವಾಗಿನ ಪ್ರಾರ್ಥನೆಯಲ್ಲಿ ಅವರನ್ನೂ ಸಂಪೂರ್ಣವಾಗಿ ಭಾಗವಹಿಸುವಂತೆ ಮಾಡಿರಿ.
8. ಮುಝ್ದಲಿಫದಲ್ಲಿ ಸಾಮಾನ್ಯವಾಗಿ ತೀವ್ರ ಚಳಿಯಿದೆ. ಅದಕ್ಕಾಗಿ ಪೂರ್ವ ಸಿದ್ದತೆ ಮಾಡಿ ಕೊಳ್ಳಬೇಕು. ಚಳಿಯಿಂದ ರಕ್ಷಣೆ ಪಡೆಯಲು ದಪ್ಪದ ಚದ್ದರಗಳು, ಕಂಬಳಿಯಂತಹವುಗಳನ್ನೂ ಇರಿಸಿಕೊಳ್ಳಬೇಕು. ಮಕ್ಕಳನ್ನು ಚಳಿಯಿಂದ ಕಾಪಾಡಲು ಇದು ಅಗತ್ಯವಾಗಿದೆ.
9. ಮಕ್ಕಳಿಗೆ ಏನೆಲ್ಲಾ ಅಗತ್ಯವಿದೆ ಎಂಬುದರ ಕುರಿತು ಅರಿಯಿರಿ. ಹಜ್ಜ್ ಸಂದರ್ಭದಲ್ಲಿ ಸೌದಿ ಸರಕಾರ ಮತ್ತಿತರ ಹಜ್ಜ್ ಸೇವಾಸಂಸ್ಥೆಗಳು ಮಕ್ಕಳ ಹಜ್ಜ್ ನಿರ್ವಹಣೆಗೆ ಬೇಕಾದ ಹಲವು ಕೊಡುಗೆಗಳನ್ನು ನೀಡುತ್ತದೆ. ಅವು ಯಾವ್ಯಾವುವು ಹಾಗೂ ಅವು ಎಲ್ಲೆಲ್ಲಾ ಸಿಗುತ್ತದೆ ಎಂಬುದರ ಕುರಿತು ಮೊದಲೇ ಕೇಳಿ ತಿಳಿದುಕೊಳ್ಳುವುದು ಉತ್ತಮ.
10 ಮಕ್ಕಳಿಗೆ ಆಟದ ಸಾಮಾನುಗಳನ್ನು ತೆಗೆದಿರಿಸಿಕೊಳ್ಳಿರಿ. ಮಕ್ಕಳಿಗೆ ಹಜ್ಜ್ನ ಬಿಡುವು ಸಂದರ್ಭದಲ್ಲಿ ಕಾಲ ಕಳೆಯಲು ಸಣ್ಣ ಸಣ್ಣ ಆಟದ ಸಾಮಾನುಗಳನ್ನು ಜೊತೆಯಲ್ಲಿರಿಸಿರಿ. ಯಾಕೆಂದರೆ ಮಕ್ಕಳ ಹೆತ್ತವರು ಆರಾಧನಾ ಕರ್ಮಗಳಲ್ಲಿ ನಿರತರಾಗಿರುವಾಗ ಅದಕ್ಕೆ ತಂಟೆ ತಕರಾರುಗಳಿಂದ ಭಂಗವಾಗದಂತಿರಲು ಇದು ಸಹಾಯಕವಾಗುತ್ತದೆ.
11. ಮಕ್ಕಳ ಮಲಗುವ ಉಪಕರಣಗಳನ್ನೂ ತೆಗೆದಿರಿಸಿರಿ. ಮಕ್ಕಳಿಗೆ ಸಾಮಾನ್ಯವಾಗಿ ನಿದ್ದೆ ಭಂಗವುಂಟಾದರೆ ಹಜ್ಜ್ನ ಸಂದರ್ಭದಲ್ಲಿ ಹೆಚ್ಚು ದಣಿವು ಸುಸ್ತು ಕಾಡುವ ಸಾದ್ಯತೆ ಯಿದೆ. ಆದ್ದರಿಂದ ಅವರ ನಿದ್ದೆಗೆ ಭಂಗವಾಗದಂತೆ ಅದಕ್ಕೆ ಬೇಕಾದ ಸಲಕರಣೆಗಳನ್ನು ಜೊತೆಯಲ್ಲಿರಿಸಿಕೊಳ್ಳ ಬೇಕು.
ಈ ಎಲ್ಲಾ ಪೂರ್ವ ಸಿದ್ಧತೆಯೊಂದಿಗೆ ತಮ್ಮ ಹಜ್ಜ್ ಫಲಪ್ರದವಾಗುವಂತೆ ಅಲ್ಲಾಹನಲ್ಲಿ ನಿರಂತರ ಪ್ರಾರ್ಥಿಸುತ್ತಿರಬೇಕು.
ಪವಿತ್ರ ಕುರ್ಆನಿನಲ್ಲಿ ಈ ರೀತಿ ಹೇಳಲಾಗಿದೆ.
“ನಮ್ಮೊಡೆಯನೇ, ನೀನು ನಮ್ಮೀರ್ವರನ್ನು ನಿನ್ನ ಆಜ್ಞಾಪಾಲಕರನ್ನಾಗಿ ಮಾಡು. ನಮ್ಮ ಸಂತತಿಯಿಂದ ನೀನು ನಿನ್ನ ಆಜ್ಞಾನುವರ್ತಿ ಸಮುದಾಯವನ್ನು ಎಬ್ಬಿಸು. ನಮ್ಮ ಉಪಾಸನಾ ಕ್ರಮಗಳನ್ನು ನೀನು ನಮಗೆ ತೋರಿಸು. ನಮ್ಮ ಪಶ್ಚಾತ್ತಾಪ ಸ್ವೀಕರಿಸು. ನಿಸ್ಸಂಶಯವಾಗಿಯೂ ನೀನು ಪಶ್ಚಾತ್ತಾಪ ಸ್ವೀಕರಿಸುವವನೂ ಉದಾರಿಯೂ ಕರುಣಾಮಯನೂ ಆಗಿರುತ್ತೀ.”












