ಒಮಾನ್: ಟ್ವಿಟರ್ ನಲ್ಲಿ ಇಸ್ರೇಲ್‌ನ್ನು ಬೆಂಬಲಿಸಿ ಉದ್ಯೋಗ ಕಳೆದುಕೊಂಡ ಭಾರತೀಯ ಪ್ರೊಫೆಸರ್

0
1128

ಸನ್ಮಾರ್ಗ ವಾರ್ತೆ

ಒಮಾನ್: ಟ್ವಿಟರ್‌ನಲ್ಲಿ ದ್ವೇಷ ಪ್ರಚಾರವನ್ನು ನಡೆಸಿದ ಆರೋಪದಲ್ಲಿ ಒಮಾನಿನಲ್ಲಿರುವ ಭಾರತೀಯ ಮೂಲದ ಪ್ರೊಫೆಸರ್‌ ಓರ್ವರು ಉದ್ಯೋಗ ಕಳೆದುಕೊಂಡಿದ್ದಾರೆ. ನ್ಯಾಷನಲ್ ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ಉಪನ್ಯಾಸಕರಾಗಿದ್ದ ಡಾಕ್ಟರ್ ಸುಧೀರ್ ಕುಮಾರ್ ಶುಕ್ಲಾ ಅವರು ಕೆಲಸ ಕಳೆದುಕೊಂಡ ವ್ಯಕ್ತಿ.
ಫೆಲೆಸ್ತೀನಿನಲ್ಲಿ ಇಸ್ರೇಲ್ ನಡೆಸಿದ ಆಕ್ರಮಣವನ್ನು ಬೆಂಬಲಿಸಿ ಇಸ್ರೇಲ್ ಪರ ಬರಹವನ್ನು ಇವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟಿಗೆ ಅವರ ವಿದ್ಯಾರ್ಥಿಗಳೂ ಸೇರಿ ಅನೇಕರು ವಿರೋಧ ವ್ಯಕ್ತಪಡಿಸಿ ರಂಗಕ್ಕಿಳಿದಿದ್ದರು.

ಮತ್ತು ಈ ಎಲ್ಲ ಸಂದರ್ಭಗಳಲ್ಲಿ ಅವರು ತನ್ನ ಪೋಸ್ಟನ್ನು ಸಮರ್ಥಿಸಿಕೊಂಡಿದ್ದರು. ಎಲ್ಲಿಯವರೆಗೆಂದರೆ ವಿದ್ಯಾರ್ಥಿಗಳು ಅವರ ತರಗತಿಯನ್ನೆ ಬಹಿಷ್ಕರಿಸುವ ಹಂತಕ್ಕೆ ತಲುಪಿತು. ಇದನ್ನನುಸರಿಸಿ ಯುನಿವರ್ಸಿಟಿಯು ಉಪನ್ಯಾಸಕರನ್ನು ಹುದ್ದೆಯಿಂದ ಕಿತ್ತು ಹಾಕಿತು. ಬಳಿಕ ಇವರು ತಮ್ಮ ಪೋಸ್ಟ್‌ಗಾಗಿ ಕ್ಷಮೆಯಾಚಿಸಿದರಲ್ಲದೆ ಫೆಲೆಸ್ತೀನಿನ ಪರ ಇರುವ ಬರಹವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡರು. ಆದರೂ ವಿರೋಧ ಕಡಿಮೆಯಾಗಲಿಲ್ಲ. ಬಳಿಕ ಅವರು ಇಸ್ರೇಲ್ ಪರವಾದ ಟ್ವೀಟನ್ನು ಡಿಲೀಟ್ ಮಾಡಿದರು. ಈ ಮೊದಲು ರೈತ ಪ್ರತಿಭಟನೆ, ಸಿಎಎ ಎನ್ಆರ್‌ಸಿ ಮುಂತಾದ ಪ್ರತಿಭಟನೆಗಳನ್ನು ವಿರೋಧಿಸಿ ಇವರು ಟ್ವೀಟ್ ಮಾಡಿದ್ದರು.

ಸ್ವತಂತ್ರ ಫೇಲಸ್ತೀನ್ ಗಾಗಿ ಆಗ್ರಹಹಿಸುತ್ತಿರುವ ರಾಷ್ಟ್ರಗಳಲ್ಲಿ ಒಮಾನ್ ಕೂಡ ಒಂದು.