ದಿಗ್ಬಂಧನ: ಅಮೆರಿಕದ ಬೆದರಿಕೆ ಕಡೆಗಣಿಸಿದ ಇರಾನ್

0
580

ಸನ್ಮಾರ್ಗ ವಾರ್ತೆ

ಟೆಹ್ರಾನ್,ಅ.20: ಇರಾನಿನೊಂದಿಗೆ ಆಯುಧ ಒಪ್ಪಂದಕ್ಕೆ ಸಿದ್ಧರಾದವರ ವಿರುದ್ಧ ದಿಗ್ಬಂಧನ ಹೇರುವುದಾಗಿ ಅಮೆರಿಕ ಬೆದರಿಕೆ ಹಾಕಿದ್ದರೂ ಇದನ್ನು ಇರಾನ್ ಕಡೆಗಣಿಸಿದೆ.

ರವಿವಾರ, ಇರಾನ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಇರಾನಿಗಿದ್ದ ಆಯುಧ ನಿಷೇಧವನ್ನು ಕೊನೆಗೊಳಿಸಿತ್ತು. ಇದರ ಬೆನ್ನಿಗೆ ಅಮೆರಿಕ ವಿದೇಶ ಸಚಿವ ಮೈಕ್‍ ಪೊಂಪಿಯೊ ದಿಗ್ಬಂಧನ ಹೇರುವ ಬೆದರಿಕೆ ಹಾಕಿದ್ದಾರೆ.

ಏಕಪಕ್ಷೀಯ ದಿಗ್ಬಂಧನ ಯಶಸ್ಸು ಪಡೆಯದು ಎಂಬುದನ್ನು ಪೊಂಪಿಯೊರ ಹೇಳಿಕೆ ತಿಳಿಸುತ್ತಿದೆ ಎಂದು ಇರಾನ್ ವಿದೇಶ ಸಚಿವ ಸಈದ್ ಖಡಿಬ್‍ಝಾದೆಹ್ ಹೇಳಿದರು.

ಅಂತಾರಾಷ್ಟ್ರೀಯ ಒಪ್ಪಂದಗಳೊಳಗೆಯೇ ಕಾರ್ಯವೆಸಗಬಹುದು ಎಂದು ಈಗ ಇರಾನ್ ನಿರೀಕ್ಷಿಸುತ್ತಿದೆ. ತಂತ್ರಜ್ಞಾನ, ಆಯುಧ ರಫ್ತು ಮಾರುಕಟ್ಟೆಗೆ ಹೆಚ್ಚಿನ ಶಕ್ತಿಯೊಂದಿಗೆ ಇರಾನ್ ಮರಳಲಿದೆ ಎಂಬ ಹೆದರಿಕೆ ಅಮೆರಿಕಕ್ಕಿದೆ. ರಕ್ಷಣಾ ಅಗತ್ಯಗಳಿಗೆ ಶೇ.90ರಷ್ಟು ಸಾಮಗ್ರಿಗಳನ್ನು ಇರಾನ್ ಸ್ವಯಂ ತಯಾರಿಸುತ್ತಿದೆ. ಆದ್ದರಿಂದ ಆಯುಧಗಳನ್ನು ತರಿಸಿಕೊಳ್ಳುವುದಕ್ಕಲ್ಲ, ರಫ್ತು ಮಾಡಲು ನಾವು ಬಯಸುತ್ತಿದ್ದೇವೆ ಎಂದು ಅವರು ಹೇಳಿದರು.