15 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ: ಅಸ್ಸಾಮಿನಲ್ಲಿ ಇಬ್ಬರ ಬಂಧನ

0
220

ಸನ್ಮಾರ್ಗ ವಾರ್ತೆ

ದಿಸ್ಪುರ: ಬಿಜೆಪಿ ಆಡಳಿತದ ಅಸ್ಸಾಮ್‍ನಲ್ಲಿ 15 ಕೋಟಿ ರೂಪಾಯಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಕರ್ಬಿ ಅಂಗಲಾಂಗ್ ಜಿಲ್ಲೆಯಿಂದ ಇಬ್ಬರನ್ನು ಹೆರಾಯಿನ್‍ನೊಂದಿಗೆ ಪೊಲೀಸರು ವಶಕ್ಕೆ ಪಡೆದರು.

ಹದಿನೈದು ಕೋಟಿ ರೂಪಾಯಿ ಮೌಲ್ದ 1.6 ಕಿಲೊಗ್ರಾಂ ಹೆರಾಯಿನ್‍ಅನ್ನು ಮಣಿಪುರ‌ದಲ್ಲಿ ಟ್ರಕ್‍‌ವೊಂದರಲ್ಲಿ ಪತ್ತೆ ಹಚ್ಚಲಾಯಿತು. ಹೆರಾಯಿನ್‍ನೊಂದಿಗೆ ಪೊಲೀಸರು ಟ್ರಕ್‍ ಅನ್ನೂ ವಶಪಡಿಸಿಕೊಂಡಿದ್ದಾರೆ. ಅಸ್ಸಾಂ ಮಾದಕವಸ್ತು ವಿರುದ್ಧ ಹೋರಾಟ ಮುಂದುವರಿಸುತ್ತಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮ ಟ್ವೀಟ್ ಮಾಡಿದ್ದಾರೆ.