ದೇಶದಲ್ಲಿ ಕೊರೋನ ಪ್ರಕರಣಗಳಲ್ಲಿ ಶೇ.7ರಷ್ಟು ಇಳಿಕೆ

0
209

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,38,018 ಮಂದಿಗೆ ಕೊರೋನ ದೃಢಪಟ್ಟಿದ್ದು, ಕಳೆದ ದಿನಗಳಿಗಿಂತ ಶೇ.7ರಷ್ಟು ಇಳಿಕೆ ಕಂಡುಬಂದಿದೆ. 1,57,421 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ.‌ ಪ್ರಸ್ತುತ 17,36,628 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ, 310 ಮಂದಿ ಕೊರೋನದಿಂದ ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ ಅಧಿಕೃತ ದತ್ತಾಂಶಗಳ ಪ್ರಕಾರ 4,86,761 ಆಗಿದೆ.

ದಿಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಹೊಸ ಕೊರೋನ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿರುವುದು ಶುಭಸೂಚಕವಾಗಿದೆ. ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 8,891 ಆಗಿದ್ದು  ಕಳೆದ ದಿವಸ ಶೇ. 8.31ರಷ್ಟು ಹೆಚ್ಚಳ ದಾಖಲಿಸಿದೆ. ಸೋಮವಾರ 68 ಲಕ್ಷ ಮಂದಿಗೆ ಕೊರೋನ ಪ್ರತಿರೋಧ ವ್ಯಾಕ್ಸಿನ್ ಡೋಸ್ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯದ ಬುಲೆಟಿನ್ ತಿಳಿಸಿದೆ.