ಭಾರತದಿಂದ ಬಹ್ರೈನ್‍ಗೆ ಹೋಗುವವರಿಗೆ ಹತ್ತು ದಿವಸಗಳ ಕ್ವಾರಂಟೈನ್

0
649

ಸನ್ಮಾರ್ಗ ವಾರ್ತೆ

ಮನಾಮ: ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾದಿಂದ ಬಹ್ರೈನ್‍ಗೆ ಬರುವ ಪ್ರಯಾಣಿಕರಿಗೆ ಹೊಸ ನಿಯಂತ್ರಣಗಳು ಘೋಷಣೆಯಾಗಿದೆ. ಈ ದೇಶಗಳಿಂದ ಬರುವವರಿಗೆ ಸ್ವಂತ ವಾಸಸ್ಥಳದಲ್ಲಿ ಅಥವಾ ನ್ಯಾಶನಲ್ ಹೆಲ್ತ್ ರೆಗ್ಯೂಲೇಟರಿ ಅಥಾರಿಟಿಯ ಅಂಗೀಕಾರವಿರುವ ಹೊಟೇಲಿನಲ್ಲಿ ಹತ್ತು ದಿವಸದ ಕ್ವಾರಂಟೈನ್ ಇರಬೇಕಾಗುತ್ತದೆ ಎಂದು ನ್ಯಾಶನಲ್ ಮೆಡಿಕಲ್ ಟಾಸ್ಕ್‌ ಪೋರ್ಸ್‌ನ ತೀರ್ಮಾನವಾಗಿದೆ.

ಇದಲ್ಲದೆ, ಆರು ವರ್ಷದ ಮೇಲ್ಪಟ್ಟವರಿಗೆ ಪ್ರಯಾಣ ಮಾಡುವ ಮೊದಲು 48 ಗಂಟೆಗಳಲ್ಲಿ ನಡೆಸಿದ ಕೊರೋನ ಪರೀಕ್ಷೆಯ ನೆಗೆಟಿವ್ ಸರ್ಟಿಫಿಕೆಟ್ ಹಾಜರು ಪಡಿಸಬೇಕಾಗಿದೆ. ಸರ್ಟಿಫಿಕೆಟ್‍ನಲ್ಲಿ ಕ್ಯೂ ಆರ್ ಕೋಡ್ ಇರಬೇಕು. ಬಹ್ರೈನ್‍ನಲ್ಲಿ ಬರುವಾಗ ವಿಮಾನ ನಿಲ್ದಾಣದಲ್ಲಿ ಮತ್ತು ನಂತರ ಐದನೇ ದಿನ ಆನಂತರ ಹತ್ತು ದಿವಸದಲ್ಲಿ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ.

ದೇಶಕ್ಕೆ 12ರಿಂದ 17ರ ನಡುವೆ ವಯಸ್ಸಿನವರಿಗೆ ಕೊರೋನ ಪ್ರತಿರೋಧ ಚುಚ್ಚು ಮದ್ದು ನೀಡಲು ತೀರ್ಮಾನಿಸಲಾಗಿದೆ. ಫೈಸರ್-ಬಯೊನ್‌ಟೆಕ್ ವ್ಯಾಕ್ಸಿನ್ ಇವರಿಗೆ ಕೊಡಲಾಗುವುದು. ಹದಿಹರೆಯದವರಲ್ಲಿ ರೋಗ ಪ್ರತಿರೋಧ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ವಿಶ್ವಾರೋಗ್ಯ ಸಂಘಟನೆಯ ಸಲಹಾ ಸಮಿತಿಯು ಮತ್ತು ಅಮೆರಿಕದ ಸೆಂಟರ್ ಫಾರ ಡೀಸಿಸ್ ಕಂಟ್ರೋಲ್‍ನ ಶಿಫಾರಿಸಿನ ಆಧಾರದಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. healthalert.gov.bh ಎಂಬ ವೆಬ್‍ಸೈಟ್‍ನಲ್ಲಿ ಹದಿಹರೆಯದವರಿಗೆ ಚುಚ್ಚುಮದ್ದು ನೋಂದಾಯಿಸಿಕೊಳ್ಳುವ ಸೌಲಭ್ಯ ಕೂಡಲೇ ಆರಂಭವಾಗಲಿದೆ.

ನೋಂದಣಿ ಮಾಡಿಸಿಕೊಳ್ಳಲು ಹೆತ್ತವರ ಅನುಮತಿ ಇರಬೇಕು. ಜೊತೆಗೆ ಚುಚ್ಚುಮದ್ದು ಚುಚ್ಚುವಾಗ ಅವರ ಜೊತೆ ಹೆತ್ತವರಿರಬೇಕು.
ಆತಂಕ ವಿಭಾಗದಲ್ಲಿರುವರಿಗೆ ಬೂಸ್ಟರ್ ಡೋಸ್ ನೀಡುವ ರಿಜಿಸ್ಟ್ರೀ ಆರಂಭವಾಗಿದೆ ಎಂದು ಟಾಸ್ಕ್ ಪೋಸ್ಟ್ ತಿಳಿಸಿತು. ಸಿನೊಫಾಂ ವ್ಯಾಕ್ಸಿನ್ ಎರಡನೆ ಡೋಸ್ ತೆಗೆದುಕೊಂಡು ಆರು ತಿಂಗಳು ಆಗಿರುವವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಕೊರೋನ ಪ್ರತಿರೋಧದ ಮುಂಚೂಣಿ ಯೋಧರಿಗೆ 50 ವರ್ಷದ ಮೇಲ್ಪಟ್ಟವರಿಗೆ, ಹೆಚ್ಚು ದಪ್ಪಗಿರುವವರಿಗೆ, ಕಡಿಮೆ ಪ್ರತಿರೋಧ ಶಕ್ತಿ, ಗುಣವಾಗದ ರೋಗ ಇರುವವರಿಗೆ ಬೂಸ್ಟರ್ ಡೋಸ್ ನೀಡಲಾಗುವುದು.

ಇತರ ವಿಭಾಗಗಳ ಸ್ವದೇಶಿಗಳಿಗೂ, ಅನಿವಾಸಿಗಳಿಗೂ ಬೂಸ್ಟರ್ ಡೋಸ್ ಸ್ವೀಕರಿಸುವ ಕುರಿತ ಸಮಯವನ್ನು ನಂತರ ಘೋಷಣೆಯಾಗಲಿದೆ. ಎರಡನೆ ಡೋಸ್ ಸ್ವೀಕರಿಸಿ 12 ತಿಂಗಳು ಆಗಿರುವವರಿಗೆ ಬೂಸ್ಟರ್ ಡೋಸ್ ಕೊಡಲಾಗುವುದು.