ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿ 100 ವರ್ಷ ಹಳೆಯ ಮಸೀದಿಯನ್ನು ಕೆಡವಿದ ಜಿಲ್ಲಾಡಳಿತ

0
934

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟಿನ ಆದೇಶವನ್ನು ಗಾಳಿಗೆ ತೂರಿ 100 ವರ್ಷ ಹಳೆಯ ಮಸೀದಿಯನ್ನು ಉತ್ತರಪ್ರದೇಶದ ಬಾರಬಂಕಿ ಜಿಲ್ಲಾಡಳಿತ ಬುಲ್ಡೋಝರ್ ಬಳಸಿ ಕೆಡವಿಹಾಕಿದೆ. ಬಾರಬಂಕಿಯ ರಾಮ್ ಸೆಂಸೆಯಿಗಟ್ ನಗರದ ಮಸೀದಿಯನ್ನು ಕೆಡವಲಾಗಿದೆ. ಮೇ 31ರವರೆಗೆ ಮಸೀದಿ ಕೆಡವಬಾರದೆಂದು ಕಳೆದ ತಿಂಗಳು 24ಕ್ಕೆ ಹೈಕೋರ್ಟು ಆದೇಶ ನೀಡಿತ್ತು. ಅನಧಿಕೃತ ನಿರ್ಮಾಣವೆಂದು ಬೆಟ್ಟು ಮಾಡಿ ಜಿಲ್ಲಾಡಳಿತ ಮಾರ್ಚ್ 15 ರಂದು ನೋಟಿಸು ಜಾರಿ ಮಾಡಿತ್ತು. ಆದರೆ ಕಟ್ಟಡ ಅನಧಿಕೃವಲ್ಲ 1957ರಿಂದ ವಿದ್ಯುತ್ ಸಂಪರ್ಕ ಇದೆ ಎಂದು ಮಸೀದಿ ಸಮಿತಿ ಉತ್ತರ ನೀಡಿತ್ತು. ನಂತರ ಮಾರ್ಚ್ 19ಕ್ಕೆ ಸಮಿತಿ ಹೈಕೋರ್ಟಿನ ಮೊರೆ ಹೋಗಿತ್ತು. ಹೈಕೋರ್ಟು ಜಿಲ್ಲಾಡಳಿತಕ್ಕೆ ನೋಟಿಸು ಜಾರಿ ಮಾಡಿತ್ತು.

ಈ ನಡುವೆ ಮಸೀದಿಯ ದಾರಿಗೆ ಅಡ್ಡಲಾಗಿ ಅಧಿಕಾರಿಗಳು ಕಟ್ಟಡ ಕಟ್ಟಲು ತೊಡಗಿದ್ದಾರೆ. ಇದರೊಂದಿಗೆ ಸಮಿತಿ ಪುನಃ ಹೈಕೋರ್ಟಿನ ಮೊರೆ ಹೋದರು. ನಂತರ ಮೇ 31 ವರೆಗೆ ಮಸೀದಿ ತೆರವುಗೊಳಿಸುವುದಕ್ಕಾಗಲಿ, ಕೆಡುವುದಕ್ಕಾಗಲಿ ಹೋಗಬಾರದೆಂದು ಎಪ್ರಿಲ್ 24ಕ್ಕೆ ಹೈಕೋರ್ಟು ಆದೇಶ ಹೊರಡಿಸಿತು. ಮಸೀದಿ ಕೆಡವಿದ ಕ್ರಮದ ವಿರುದ್ಧ ಹೈಕೋರ್ಟಿನ ಮೊರೆ ಹೋಗಲಾಗುವುದು ಎಂದು ಸುನ್ನೀ ವಕ್ಫ್ ಬೋರ್ಡಿನ ಝಫರ್ ಫಾರೂಕಿ ತಿಳಿಸಿದ್ದಾರೆ.