ಹಿಂದಿ ಹೇರಿಕೆ: ಕೇಂದ್ರದ ವಿರುದ್ಧ ಕಿಡಿಯಾದ ಮಹಾರಾಷ್ಟ್ರ ನವನಿರ್ಮಾಣ ಸೇನೆ

0
792

ಮುಂಬೈ,ಮೇ 3: ಹಿಂದಿ ಕಡ್ಡಾಯಗೊಳಿಸುವ ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿಯ ಕರಡು ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ರಂಗಪ್ರವೇಶಿಸಿದೆ. ಹಿಂದಿ ನಮ್ಮ ಮಾತೃಭಾಷೆಯಲ್ಲ ಅದನ್ನು ಹೇರಿಕೆ ಮಾಡಬೇಡಿ ಎಂದು ಎಂಎನ್‍ಎಸ್ ವಕ್ತಾರ ಅನಿಲ್ ಶಿಡೋರ್ ಟ್ವಿಟರ್‍‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ತಮಿಳರ ರಕ್ತದಲ್ಲಿ ಹಿಂದಿ ಭಾಷೆಗೆ ಯಾವುದೇ ಸ್ಥಾನವಿಲ್ಲ ಎಂದು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಕಳೆದ ದಿವಸ ಹೇಳಿದ್ದರು. ಹಿಂದಿ ಹೇರಿಕೆಗೆ ಯತ್ನಿಸಿದರೆ ಪ್ರತಿಭಟನೆ ನಡೆಸಲಾಗುವುದು. ಅದು ಜೇನ್ನೊಣಗಳ ಗೂಡಿಗೆ ಕಲ್ಲೆಸೆದುದಕ್ಕೆ ಸಮಾನವಾಗಿರುತ್ತದೆ ಎಂದು ಸ್ಟಾಲಿನ್ ಮುನ್ನೆಚ್ಚರಿಕೆ ನೀಡಿದರು. ಸ್ಕೂಲಿನಲ್ಲಿ ಹಿಂದಿ ಕಡ್ಡಾಯಗೊಳಿಸುವುರ ಸಹಿತ ಹೊಸ ಕರಡು ನಿಯಮ ಕಳೆದ ದಿವಸ ಸರಕಾರಕ್ಕೆ ಹಸ್ತಾಂತರವಾಗಿತ್ತು. ಕರಡು ಮಾತ್ರ ಲಭಿಸಿದ್ದು. ಯಾವ ಭಾಷೆಯನ್ನೂ ಹೇರಿಕೆ ಮಾಡಲು ಸರಕಾರ ತೀರ್ಮಾನಿಸಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾನ್ ಹೇಳಿದರು.