ಕೇರಳದಲ್ಲಿ ಮತ್ತೆ ನಿಫಾ ವೈರಸ್ ಹಾವಳಿ: ಮದ್ದು ಆಸ್ಟ್ರೇಲಿಯದಿಂದ ಬರುತ್ತಿದೆ ಹೆದರಬೇಡಿ ಎಂದ ಆರೋಗ್ಯ ಸಚಿವ

0
607

ಕೊಚ್ಚಿ,ಜೂ.4: ಎರ್ನಾಕುಳಂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಲ್ಲಿ ನಿಫಾಹ್ ವೈರಸ್ ಕಂಡು ಬಂದಿದ್ದು, ಕೇರಳ ಸರಕಾರ ರೋಗ ಗುಣಮುಖಗೊಳಿಸಲು ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ಹೇಳಿದರು. ನಿಫಾಹ್ ಬಂದಿದೆ ಎಂಬ ಶಂಕೆ ಇದ್ದಾಗಲೇ ಮದ್ದು ತರಿಸುವುದಕ್ಕೆ ಪ್ರಕ್ರಿಯೆ ಆರಂಭವಾಗಿತ್ತು. ಈಗ ಅಗತ್ಯವಿರುವಷ್ಟು ಮದ್ದು ಬವರಿನ್ ಇದೆ. ಇನ್ನೂ ಹೆಚ್ಚಿನ ಅಗತ್ಯ ಬಿದ್ದಾಗ ಅದಕ್ಕೆ ತಕ್ಕಂತೆ ಮದ್ದು ಆಸ್ಟ್ರೇಲಿಯದಿಂದ ತರಿಸಿಕೊಳ್ಳಲಾಗುವುದು ಎಂದು ಸಚಿವೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಚಿಕಿತ್ಸೆ ಪಡೆಯುತ್ತಿರುವ ಯವಕನೊಂದಿಗೆ ಬೆರೆತ ನಾಲ್ಕು ಮಂದಿಗೂ ಜ್ವರ ಬಂದಿದೆ. ಒಬ್ಬರನ್ನು ಐಸಿಯು ವಾರ್ಡಿಗೆ ಶಿಫ್ಟ್ ಮಾಡಲಾಗಿದ್ದು ಉಳಿದ ಇಬ್ಬರ ಆರೋಗ್ಯ ಅಷ್ಟಾಗಿ ಕೆಟ್ಟು ಹೋಗಿಲ್ಲ. ಇವರಿಗೂ ಔಷಧ ನೀಡಲಾಗುತ್ತಿದೆ. ಹೆಚ್ಚು ಬಾವಲಿ ಇರುವಲ್ಲಿನ ಜನರು ಮುನ್ನೆಚ್ಚರಿಕೆ ಪಾಲಿಸಬೇಕಾಗಿದೆ ಎಂದು ಆರೋಗ್ಯ ಸಚಿವೆ ಎಚ್ಚರಿಸಿದ್ದಾರೆ.