WHO ಕೊರೋನ ವರದಿ: ಮೋದಿ ಸುಳ್ಳು ಹೇಳಿದರೂ ವಿಜ್ಞಾನ ಸುಳ್ಳು ಹೇಳುವುದಿಲ್ಲ- ರಾಹುಲ್ ಗಾಂಧಿ

0
231

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರ ಹೊರಬಿಟ್ಟ ಕೊರೋನ ಲೆಕ್ಕಗಳ ವಿರುದ್ಧ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಕೊರೋನ ಸಾವಿನ ಲೆಕ್ಕದಲ್ಲಿ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ. WHO ವರದಿಯ ಪ್ರಕಾರ, ಭಾರತದಲ್ಲಿ 47 ಲಕ್ಷ ಜನರು ಕೊರೋನದಿಂದ ಮೃತಪಟ್ಟಿದ್ದಾರೆ. ಆದರೆ ಕೇಂದ್ರ ಸರಕಾರ 4.8 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಮೋದಿ ಸುಳ್ಳು ಹೇಳಿದರೂ ವಿಜ್ಞಾನ ಸುಳ್ಳು ಹೇಳುವುದಿಲ್ಲ. ಪ್ರೀತಿ ಪಾತ್ರರನ್ನು ಕಳಕೊಂಡ ಕುಟುಂಬಗಳನ್ನು ಗೌರವಿಸಿ. ಅವರಿಗೆ ನಾಲ್ಕು ಲಕ್ಷ ರೂಪಾಯಿಯಂತೆ ಧನ ಸಹಾಯ ಕೊಡಿ ಎಂದು ರಾಹುಲ್ ಗಾಂಧಿ ಟ್ವೀಟಿನಲ್ಲಿ ಆಗ್ರಹಿಸಿದ್ದಾರೆ.

ಭಾರತದಲ್ಲಿ ಕೊರೋನ ಸಾವು ಸರಕಾರದ ಅಧಿಕೃತ ಲೆಕ್ಕಕ್ಕಿಂತ ಹತ್ತು ಪಟ್ಟು ಹೆಚ್ಚು. ವಿಶ್ವಾರೋಗ್ಯ ಸಂಘಟನೆಯ ಲೆಕ್ಕವಿದು. ಕಳೆದ ದಿವಸವಷ್ಟೆ ಬಿಡುಗಡೆಯಾಯಿತು. ಅದರಲ್ಲಿ ಕನಿಷ್ಠ 47 ಲಕ್ಷ ಮಂದಿ ಭಾರತದಲ್ಲಿ ಮೃತಪಟ್ಟಿದ್ದಾರೆ ಎಂದು ಡಬ್ಲ್ಯೂಎಚ್‌ಒ ವರದಿ ಮಾಡಿದೆ. ಆದರೆ ಕೇಂದ್ರ ಸರಕಾರದ ಅಧಿಕೃತ ನಿಲುವು ಭಾರತದಲ್ಲಿ 5.24 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಕೊರೋನ ಸಾವುಗಳು ಸರಕಾರದ ಲೆಕ್ಕಕ್ಕೆ ಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ. ಕೇಂದ್ರ ಸರಕಾರ ಈ ವರದಿಯನ್ನು ತಿರಸ್ಕರಿಸಿದ್ದು ವಿಶ್ವ ಆರೋಗ್ಯ ಸಂಘಟನೆಯು ದತ್ತಾಂಶಗಳನ್ನು ಸಂಗ್ರಹಿಸಿದ ಮಾದರಿ ಶಂಕಾಸ್ಪದವಾಗಿದೆ ಎಂದು ಸರಕಾರ ಆರೋಪಿಸಿದೆ.