ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಸೆ.9: ಮೃದು ಹಿಂದುತ್ವ ನೀತಿ ಮುಂದುರಿಸಿದರೆ ಕಾಂಗ್ರೆಸ್ ಪಾರ್ಟಿ ಸೊನ್ನೆಗೆ ತಲುಪಲಿದೆ ಎಂದು ಸಂಸದ ಶಶಿ ತರೂರ್ ಮುನ್ನೆಚ್ಚರಿಕೆ ನೀಡಿದ್ದಾರೆ. “ದಿ ಹಿಂದೂ ವೇ; ಆ್ಯನ್ ಇಂಟ್ರುಡಕ್ಷನ್ ಟು ಹಿಂದೂಯಿಸಂ” ಎಂಬ ತನ್ನ ಹೊಸ ಪುಸ್ತಕದ ಬಿಡುಗಡೆಗೆ ಮುಂಚಿತವಾಗಿ ಅವರು ಸುದ್ದಿಗಾರರಿಗೆ ಸಂದರ್ಶನ ನೀಡಿ ಮಾತನಾಡುತ್ತಿದ್ದರು.
ಹಿಂದಿ ಹೃದಯ ಭೂಮಿಯಲ್ಲಿ ಕಾಂಗ್ರೆಸ್ ಸಮಸ್ಯೆಗೆ ಪರಿಹಾರ ಬಹುಸಂಖ್ಯಾತರ ಓಲೈಕೆಯೋ ಮೃದು ಹಿಂದುತ್ವವೊ ಅಲ್ಲ. ಅಂತಹ ಪ್ರಯತ್ನಗಳಿಂದ ಕಾಂಗ್ರೆಸ್ ಸೊನ್ನೆ ಸಂಪಾದನೆ ಮಾಡಲಿದೆ. ಭಾರತ ಜಾತ್ಯತೀತೆಗೆ ಪ್ರತಿರೋಧ ವೊಡ್ಡಬೇಕು. ಅದಕ್ಕೆ ನೇತೃತ್ವ ನೀಡಬೇಕು. ಇದು ಕಾಂಗ್ರೆಸ್ ಬಾಧ್ಯತೆಯೆಂದು ಒಬ್ಬ ಕಾಂಗ್ರೆಸ್ ಸದಸ್ಯ ಎಂಬ ನೆಲೆಯಲ್ಲಿ ನನ್ನ ವಿಶ್ವಾಸವಾಗಿದೆ.
ಬಿಜೆಪಿ ಮತ್ತು ಸಖ್ಯ ಪಾರ್ಟಿಗಳು ಬ್ರಿಟಿಷ್ ಫುಟ್ಬಾಲ್ ತಂಟೆಕೋರರಂತೆ ಹಿಂದೂವಾಗಿದೆ. ಅಧಿಕಾರದಲ್ಲಿ ಕೂತವರು ಪ್ರಚಾರ ಮಾಡುವ ಹಿಂದುತ್ವ ನೈಜವಲ್ಲ. ಶ್ರೇಷ್ಠವಾದ ಆ ವಿಶ್ವಾಸವನ್ನು ಅವರು ರಾಜಕೀಯ ಗೆಲುವಿಗೆ ಸಂಕುಚಿತಗೊಳಿಸಿದ್ದಾರೆ ಎಂದು ತರೂರ್ ಆರೋಪಿಸಿದರು.












